May 3, 2016

ಜನಪ್ರಿಯ ಒಗಟುಗಳು

ಜನಪ್ರಿಯ ಒಗಟುಗಳು
  1. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ-ಕಣ್ಣು
  2. ಕಾಸಿನ ಕುದುರೆಗೆ ಬಾಲದ ಲಗಾಮು-ಸೂಜಿ ದಾರ
  3. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ-ಗಿಳಿ
  4. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?-ಮೂಗು, ಬಾಯಿ
  5. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?-ಮೊಟ್ಟೆ
  6. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು? ಕೋಳಿ
  7. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?-ರೈಲು
  8. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ-ಗಡಿಯಾರ
  9. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ-ಕಲ್ಲಂಗಡಿ ಹಣ್ಣು
  10. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ-ತೆಂಗು
  11. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ-ನೀರು
  12. ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ.-ದಾರಿ
  13. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು.-ಯುಗಾದಿ
  14. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .-ಬದನೆಕಾಯಿ.
  15. ಸಾಗರ ಪುತ್ರ ,ಸಾರಿನ ಮಿತ್ರ.-ಉಪ್ಪು
  16. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.-ಅಕ್ಕಿ
  17. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.-ನವಿಲು.
  18. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ
  19. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.-ಕೋಳಿ
  20. ಮೋಟು ಗೋಡೆ ಮೇಲೆ, ದೀಪ ಉರೀತಿದೆ.-ಮೂಗುಬೊಟ್ಟು
  21. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.-ನೆರಳು
  22. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ-ಗಾಣ
  23. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ-ಶ್ಯಾವಿಗೆ
  24. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು-ತೆಂಗಿನಕಾಯಿ
  25. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ-ತಂಬೂರಿ
  26. ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ-ಕಪ್ಪೆ
  27. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪೊರಕೆ
  28. ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು-ಉಪ್ಪು
  29. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?-ನಕ್ಷೆ
  30. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ.- ಅನ್ನದ ಅಗುಳು.
  31. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.-ಸಾಬೂನು.
  32. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು.-ಬದನೆಕಾಯಿ.
  33. ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ.-ನೀರು
  34. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು ಇಲ್ಲ ,ನೀರು ಇಲ್ಲ.-ಎಣ್ಣೆ ದೀಪ.
  35. ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.-ಬಾಳೆ ಹಣ್ಣು.
  36. ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.-ಕನ್ನಡಿ .
  37. ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?-ದತ್ತುರಿಯ ಮುಳ್ಳು.
  38. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-ಕಮಲ.
  39. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ.-ಗಿರಣಿ
  40. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.-ದುಡ್ಡು.
  41. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.-ಸಗಣಿ.
  42. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.- ಗರಗಸ.
  43. ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.-ಹಲ್ಲುಪುಡಿ.
  44. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.-ಗಡಿಗೆಮಜ್ಜಿಗೆ.
  45. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ .-ರೊಟ್ಟಿ, ದೋಸೆ
  46. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ-ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
  47. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.-ಕಣ್ಣು.
  48. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.-ಬೆಣ್ಣೆ ಉಂಡೆ.
  49. ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.-ಅಂಗಿ.
  50. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
  51. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-ಬೆಕ್ಕು
  52. ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ_ಕಪ್ಪೆ
  53. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-ಸುಣ್ಣ
  54. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ-ದೀಪ
  55. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ-ಚಪ್ಪಲಿ
  56. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು-ನದಿ
  57. ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ-ಮೇಡು
  58. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ-ಆಕಾಶ
  59. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ-ಜೋಳದ ದಂಟು
  60. ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು?-ಸಾಲಿಗ್ರಾಮ
  61. ಕರಿ ಹುಡುಗನಿಗೆ ಬಿಳಿ ಟೋಪಿ -ಹೆಂಡದ ಮಡಿಕೆ
  62. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು-ನಾಣ್ಯ
  63. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ.-ತಿಗಣೆ
  64. ಕುದುರೆ ಬಾಲದಿಂದ ನೀರು ಕುಡಿಯುತ್ತದೆ-ಹೇನು
  65. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.-ಸೀತ ಫಲ
  66. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-ಕಣ್ಣು
  67. ಮನೆ ಮೇಲೆ ಮಲ್ಲಿಗೆ ಹೂವು.-ಮಂಜು
  68. ಹಾರಿದರೆ ಹನುಮಂತ ಕೂಗಿದರೆ ಶಂಖ.-ಕಪ್ಪೆ
  69. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.-ಸುಣ್ಣ
  70. ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ.-ಪೋಸ್ಟ್ ಕಾರ್ಡ್
  71. ಬಿಳಿ ಕುದುರೆಗೆ ಹಸಿರು ಬಾಲ.-ಮೂಲಂಗಿ
  72. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-ಕುಂಕುಮ
  73. ಬರೋದ ಕಂಡು ಕೈ ಒಡ್ತಾರೆ.-ಬಸ್
  74. ಹಸಿರು ಮುಖಕ್ಕೆ ವಿಪರೀತ ಕೋಪ , ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?-ಮೆಣಸಿನಕಾಯಿ
  75. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು-ಬೆಳ್ಳುಳ್ಳಿ
  76. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?-ನಕ್ಷತ್ರ
  77. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
  78. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
  79. ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
  80. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
  81. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು -ವಿಷ
  82. ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ
  83. ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
  84. ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
  85. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
  86. ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
  87. ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
  88. ಒಂದು ಮರ , ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
  89. ಹಗ್ಗ ಹಾಸಿದೆ ಕೋಣ ಮಲಗಿದೆ-ಕುಂಬಳಕಾಯಿ, ಬಳ್ಳಿ
  90. ನನ್ನ ಕಂಡರೆ ಎಲ್ಲರು ಓದೀತಾರೆ -ಚೆಂಡು
  91. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ
  92. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
  93. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
  94. ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
  95. ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
  96. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
  97. ಸೂಜಿ ಸಣ್ಣಕಾಗೆ ಬಣ್ಣ -ಕೂದಲು
  98. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
  99. ಊರಿಗೆಲ್ಲ ಒಂದೇ ಕಂಬಳಿ-ಆಕಾಶ
  100. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
  101. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
  102. ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
  103. ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ -ಗಾಳಿ
  104. ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
  105. ಊಟಕ್ಕೆ ಮೊದಲು ನಾನು ಅಂತ ಬರುತ್ತೆ -ಬಾಳೆ ಎಲೆ , ತಟ್ಟೆ
  106. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು-ಹುಂಜ
  107. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
  108. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?-ತಾರೆಗಳು
  109. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು ,ಇದು ಏನು?-ಛತ್ರಿ
  110. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ
  111. ಒಂಟಿಕಾಲಿನ ಕುಂಟ. ನಾನ್ಯಾರು?-ಬುಗರಿ
  112. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ-ಇಲಿ
  113. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ-ಕಳ್ಳಿ
  114. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-ಶ್ರೀಗಂಧ
  115. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು-ಪರಂಗಿ ಹಣ್ಣು
  116. ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
  117. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
  118. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
  119. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು-ಹುಂಜ
  120. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
  121. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?-ತಾರೆಗಳು
  122. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು ,ಇದು ಏನು?-ಛತ್ರಿ
  123. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ
  124. ಒಂಟಿಕಾಲಿನ ಕುಂಟ. ನಾನ್ಯಾರು?-ಬುಗರಿ
  125. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ-ಇಲಿ
  126. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ-ಕಳ್ಳಿ
  127. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-ಶ್ರೀಗಂಧ
  128. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು-ಪರಂಗಿ ಹಣ್ಣು
  129. ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
  130. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
  131. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
  132. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
  133. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ
  134. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
  135. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಹಲಸಿನ ಹಣ್ಣು , ಬೀಜ
  136. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
  137. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
  138. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
  139. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
  140. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
  141. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ-ಮಳೆ
  142. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ-ಕೀರ್ತಿ
  143. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
  144. ಅಕ್ಕನ ಮೇಲೆ ಛತ್ರಿ- ರೆಪ್ಪೆ
  145. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
  146. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
  147. ಅಮ್ಮನ ಆಕಾಶವಾಣಿ ನಾನು-ಮಗು
  148. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
  149. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
  150. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
  151. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
  152. ನೀನಿಲ್ಲದೆ ಊಟವಿಲ್ಲ- ಉಪ್ಪು
  153. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
  154. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
  155. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
  156. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆ, ದೋಸೆ
  157. ಒಂದು ಮನೆಗೆ ಒಂದೇ ತೊಲೆ-ತಲೆ
  158. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
  159. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
  160. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
  161. ಎರಡು ಮನೆಗೆ ಒಂದೇ ದೂಲ-ಮೂಗು
  162. ಸಾವಿರ ಮಕ್ಕಳಿಗೆ ಒಂದೇ ಉಡಿದಾರ - ಪರಕೆ
  163. ಅಮ್ಮನ ಸೀರೆಯ ಮಡಿಸಾಲಾರೆ ಅಪ್ಪನ ದುಡ್ಡನು ಎಣಿಸಲಾರೆ! - ಆಕಾಶ, ನಕ್ಷತ್ರ
  164. ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಲಾರದ ಹಣ್ಣು ಬಲು ರುಚಿ - ಮಗು.
  165. ಹಾರುವುದು ಹಕ್ಕಿಯಲ್ಲ, ಕೊಂಬು ಉಂಟು ಗೂಳಿಯಲ್ಲ, ಬಾಲ ಉಂಟು ಕೋತಿಯಲ್ಲ - ಗಾಳಿಪಟ.