Dec 4, 2012

ಕಾಳಿಯೊಡನೆ ಕಳೆದ ನೆನಪು...



ಕಾಳಿಯೊಡನೆ ಕಳೆದ ನೆನಪು...

ಸುಮಾರು 12 ಶತಮಾನಗಳ ಹಿಂದೆ ಯಜಮಾನನನ್ನು ರಕ್ಷಿಸಿ ತಾನು ಪ್ರಾಣಬಿಟ್ಟ `ಕಾಳಿ'ಯ ಕಥೆಯಿದು. ರಾಷ್ಟ್ರಕೂಟ ಚಕ್ರೇಶ್ವರ ಮುಮ್ಮಡಿ ಕೃಷ್ಣನ ಅಚ್ಚುಮೆಚ್ಚಿನ ನಾಯಿ ಕಾಳಿ. ಯಜಮಾನನಿಗಾಗಿ ವೀರ ಮರಣಹೊಂದಿದ ನಿಮಿತ್ತ ಸ್ಥಾಪನೆಗೊಂಡ ಇದರ ವೀರಗಲ್ಲು ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಅತಕೂರಿನಿಂದ ಈಗ ಬೆಂಗಳೂರಿನ ವಸ್ತುಸಂಗ್ರಹಾಲಯ ಸೇರಿದೆ. ಇತಿಹಾಸ ನೆನಪಿಸುತ್ತಿದೆ.
ತನ್ನ ಆಪ್ತ ಗಂಗ ದೊರೆ ಇಮ್ಮಡಿ ಬೂತುಗನ ಬಲಗೈ ಬಂಟನಾದ ಗಂಗ ದಂಡನಾಯಕ ಮಣಲೇರನಿಗೆ ಕಾಣಿಕೆ ರೂಪದಲ್ಲಿ ಕಾಳಿಯನ್ನು ನೀಡಿದ್ದ ಮುಮ್ಮಡಿ ಕೃಷ್ಣ. ಕಾಣಿಕೆ ರೂಪದಲ್ಲಿ ಬಂದ ಈ ಶ್ವಾನ ಮುಂದೊಂದು ದಿನ ತನಗಾಗಿ ತನ್ನ ಜೀವವನ್ನೇ ಪಣಕ್ಕಿಡುತ್ತದೆ ಎಂಬ ಅರಿವೂ ಇರಲಿಲ್ಲ ಮಣಲೇರನಿಗೆ. ಇದರ ಫಲವೇ ಕಾಳಿಯ ವೀರಗಲ್ಲು.
ಕಾಳಿಯನ್ನು ನೀಡಿದ್ದೇಕೆ?
ಕ್ರಿ.ಶ. 949ರ ಕಾಲವದು. ಮುಮ್ಮಡಿ ಕೃಷ್ಣನ ಆಳ್ವಿಕೆಯ ಅವಧಿ. ಚೋಳ ದೇಶದ ಮೇಲೇರಿ ಕಾಂಚೀಪುರ ಮತ್ತು ಚೋಳ ರಾಜಧಾನಿ ತಂಜಾವೂರುಗಳನ್ನು ಆಕ್ರಮಿಸಿ ಸದೆಬಡಿಯುವಲ್ಲಿ ಕೃಷ್ಣ ಯಶ ಸಾಧಿಸಿದ್ದ. ಚೋಳರ ಈ ಸೋಲು ಮುಂದಿನ ನಾಲ್ಕು ದಶಕಗಳ ಕಾಲ ಅವರು ತಲೆಯೆತ್ತದಂತೆ ಮಾಡಿತು. ರಾಷ್ಟ್ರಕೂಟ ಸೈನ್ಯವು ಇಡೀ ತಮಿಳು ನಾಡನ್ನು ವಶಪಡಿಸಿಕೊಂಡು, ರಾಮೇಶ್ವರದಲ್ಲಿ ಕೃಷ್ಣನ ಜಯಸ್ತಂಭವನ್ನು ನಿಲ್ಲಿಸಿತು. ಈ ಗೆಲುವಿಗೆ ಕಾರಣೀಕರ್ತನಾದವನು ಬೂತುಗ ಹಾಗೂ ಮಣಲೇರ.
ಇದರಿಂದ ಸಂತುಷ್ಟನಾದ ಕೃಷ್ಣ ಕಾಣಿಕೆ ನೀಡಲು ಮುಂದಾದಾಗ, ತನಗೆ `ಕಾಳಿ'ಯನ್ನು ನೀಡುವಂತೆ ಮಣಲೇರ ಕೋರಿದ. ಭೂಮಿ, ಚಿನ್ನ, ಆಭರಣ ಯಾವುದಕ್ಕೂ ಆಸೆ ಪಡದೆ ಕಾಳಿಯನ್ನು ಕೋರಿದ ಮಣಲೋಕನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಕೃಷ್ಣ, ಅವನ ಆಸೆ ನೆರವೇರಿಸಿದ. ಹಾಗೆಯೇ, ಬೂತುಗನು ಕೂಡ ಮಣಲೇರನಿಗೆ ಬೆಳ್ತೊಲದ ಎಂದರೆ ಈಗಿನ ಮಂಡ್ಯ ಜಿಲ್ಲೆಯ `ಅತಕೂರು ಪನ್ನೆರಡು' ಪ್ರದೇಶವನ್ನು ಬಿಟ್ಟು ಕೊಟ್ಟ.
ಹೆಚ್ಚಿದ ಹಂದಿಯ ಉಪಟಳ
ಒಮ್ಮೆ ಅತಕೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿ, ಬೆಳೆಗಳ ನಾಶಕ್ಕೆ ತೊಡಗಿತು. ಅವುಗಳ ನಾಶಕ್ಕೆ ಮಣಲೇರನು ಕಾಳಿಯೊಡನೆ ಹಂದಿಗಳ ಬೇಟೆಗೆ ಹೊರಟ.
ಅಗ ಭಾರೀ ಗಾತ್ರದ ಕಾಡು ಹಂದಿಯೊಂದು ಧುತ್ತೆಂದು ಮಣಲೇರ ಮತ್ತು ಕಾಳಿಯ ಮುಂದೆ ದಾರಿಗಡ್ಡವಾಗಿ ನಿಂತಿತು. ಕಾಳಿ ಮತ್ತು ಹಂದಿಯ ನಡುವೆ ನಡೆದ ಭೀಕರ ಹೋರಾಟದಲ್ಲಿ ಕಾಳಿಯು ಹಂದಿಯನ್ನು ಕೊಂದುಹಾಕಿತಾದರೂ, ತೀವ್ರವಾಗಿ ಗಾಯಗೊಂಡ ಕಾರಣ ಕೊನೆಯುಸಿರೆಳೆಯಿತು, ತನ್ನ ಯಜಮಾನನಿಗಾಗಿ ಪ್ರಾಣ ಬಿಟ್ಟಿತು!
ಮಣಲೇರನಿಗೆ ದುಃಖ ಸಹಿಸಲಾಗಲಿಲ್ಲ. ತನ್ನನ್ನು ಕಾಪಾಡಿದ ಕಾಳಿಗೆ ಏನಾದರೂ ಗೌರವ ಸಲ್ಲಿಸಲೇಬೇಕೆಂದು ಅಂದುಕೊಂಡ. ಸ್ವಾಮಿ ನಿಷ್ಠೆ ಮೆರೆದ ಕಾಳಿಯ ಮೇಲಿನ ಗೌರವ, ಪ್ರೀತಿಗಳಿಂದ ಆತ ತನ್ನ ಆಡಳಿತ ಪ್ರದೇಶವಾದ ಅತಕೂರಿನ ಪ್ರಸಿದ್ಧ `ಚಲ್ಲಲಿಂಗೇಶ್ವರ ಸ್ವಾಮಿ' ದೇವಾಲಯದ ಬಳಿ ನಾಯಿಯ ಸಮಾಧಿಯನ್ನು ನಿರ್ಮಿಸಿದ. ಹಾಗೆಯೇ, ಅದಕ್ಕೊಂದು ವೀರಗಲ್ಲನ್ನು ನೆಡಿಸಿ ಶಾಸನ ಹಾಕಿಸಿದ.
ವೀರಗಲ್ಲನ್ನು ಪ್ರತಿ ನಿತ್ಯ ಪೂಜಿಸಲು ಒಬ್ಬ ಗೊರವನನ್ನು ನೇಮಿಸಿದ. ಶಾಸನದಲ್ಲಿ `ಕಾಳಿಯನ್ನು ಪೂಜಿಸದೆ ಊಟ ಮಾಡಿದರೆ ನಾಯಿ ಕೊಂದ ಶಾಪ ತಟ್ಟುವುದು' ಎಂಬ ಮಾತು ಕೂಡ ಇದೆ. ಈ ವೀರಗಲ್ಲನ್ನು ಈಗ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.
ಹಂದಿಯೊಂದಿಗಿನ ಸೆಣಸಾಟ, ಹೊಡೆತ ತಪ್ಪಿಸಿಕೊಳ್ಳಲು ಹೆಣಗಾಟ, ಕೋಪದಿಂದ ಕೆರಳಿರುವ ನಾಯಿ- ಹಂದಿ ಮುಂತಾದ ದೃಶ್ಯಗಳು ವೀರಗಲ್ಲಿನ ಮೇಲೆ ಕೆತ್ತಲಾಗಿದ್ದು, ನೋಡುಗರನ್ನು ನಿಬ್ಬೆರಗಾಗಿಸುತ್ತದೆ. ಉಗ್ರವಾಗಿ ಕಾದಾಡುತ್ತಿರುವ ಉಬ್ಬು ಚಿತ್ರವೂ ಸಹ ಜೀವಕಳೆಯಿಂದ ಕೂಡಿ ಹೃನ್ಮನಗಳನ್ನಾಕರ್ಷಿಸುತ್ತದೆ.
  source : prajavani

Oct 16, 2012

ಜ್ಞಾನಪೀಠ ಪ್ರಶಸ್ತಿ



ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಕುವೆಂಪುV.K. Gokak
ಕನ್ನಡಕ್ಕೆ ಮೊಟ್ಟಮೊದಲು ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕೆ.ವಿ. ಪುಟ್ಟಪ್ಪನವರು. ಇವರು ‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇವರು ೧೯೦೪ ಡಿಸೆಂಬರ್ ೨೯ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ಇವರ ತಂದೆ ವೆಂಕಟಪ್ಪಗೌಡರು, ತಾಯಿ ಸೀತಮ್ಮ.
೧೯೨೪ರಲ್ಲಿ ಅವರ ಮೊದಲ ಕನ್ನಡ ಪುಸ್ತಕ ‘ಅಮಲನ ಕತೆ’ ಪ್ರಕಟವಾಯಿತು. ಕುವೆಂಪುರವರು ಬಿ.ಎ. ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ ಕವನವನ್ನು ಪ್ರಕಟಿಸಿದರು. ಜಲಗಾರ,
ಸ್ಮಶಾನಕುರುಕ್ಷೇತ್ರ, ಶೂದ್ರತಪಸ್ವಿ, ಬೆರಳ್‍ಗೆ ಕೊರಳ್, ಅವರು ರಚಿಸಿದ ಜನಪ್ರಿಯ ನಾಟಕಗಳು. ಪಾಂಚಜನ್ಯ, ಪಕ್ಷಿಕಾಶಿ, ನವಿಲು, ಮುಂತಾದುವುಗಳು ಅವರ ಕವನ ಸಂಕಲನಗಳು. ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಎರಡು ಕಾದಂಬರಿಗಳನ್ನೂ ಸಹ ರಚಿಸಿದ್ದಾರೆ. ‘ನೆನಪಿನ ದೋಣಿ’ ಇವರ ಆತ್ಮಕಥೆ.
೧೯೨೯ರಲ್ಲಿ ಕನ್ನಡ ಅಧ್ಯಾಪಕರಾಗಿ ಮಹಾರಾಜ ಕಾಲೇಜು ಸೇರಿದ ಶ್ರೀಯುತರು, ೧೯೬೦ ರವರೆಗೆ ಸೇವೆ ಸಲ್ಲಿಸಿದರು. ೧೯೫೬ ರಿಂದ ೧೯೬೦ ರವರೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು. ಇವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಮಾನಸ ಗಂಗೋತ್ರಿಯ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ, ಎಲ್ಲಾ ಸಾಹಿತ್ಯ ಅಭಿಮಾನಿಗಳಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಕನ್ನಡ ಪುಸ್ತಕಗಳು ದೊರಕುವಂತೆ ಶ್ರಮಿಸಿದರು.
ಕುವೆಂಪುರವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅವುಗಳು ಮೈಸೂರು, ಬೆಂಗಳೂರು, ಕರ್ನಾಟಕ, ಗುಲ್ಬರ್ಗ, ಕಾನ್ಪುರ ಮತ್ತು ಅಮೇರಿಕಾದ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಕಲ್ಚರ್ ಈ ಸಂಸ್ಥೆಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿ ಗೌರವಿಸಿವೆ. ೧೯೫೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೫೮ರಲ್ಲಿ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ, ೧೯೯೨ರಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ೧೯೬೪ರಲ್ಲಿ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿತು. ೧೯೭೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಸಹ ದೊರೆಯಿತು. ೧೯೮೮ರಲ್ಲಿ ಪಂಪ ಪ್ರಶಸ್ತಿ, ೧೯೬೮ರಲ್ಲಿ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು.
ಕರ್ನಾಟಕ ಸರಕಾರವು ಶಿವಮೊಗ್ಗದಲ್ಲಿ ಸ್ಥಾಪಿಸಿರುವ ವಿಶ್ವವಿದ್ಯಾಲಯಕ್ಕೆ ಇವರ ಹೆಸರನ್ನು ಇಟ್ಟು ಗೌರವ ಸೂಚಿಸಿರುತ್ತದೆ. ಶ್ರೀಯುತರು ೧೯೯೪ ನವೆಂಬರ್ ೯ರಂದು ದೈವಾಧೀನರಾದರು.
 
Masti Venkatesh Iyengarದಾ.ರಾ. ಬೇಂದ್ರೆ
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಧಾರವಾಡದಲ್ಲಿ 1886ರ ಜನವರಿ 31ರಂದು ಜನಿಸಿದರು. ಅಂಬಿಕೆಯ ತನಯ ತಾನು ದತ್ತ ಎಂಬ ಅರ್ಥದಲ್ಲಿ ಬೇಂದ್ರೆಯವರು ದ.ರಾ. ಬೇಂದ್ರೆ ಎಂಬ ಕಾವ್ಯನಾಮವನ್ನು ಇರಿಸಿಕೊಂಡರು. ಧಾರವಾಡ ಹಾಗೂ ಸಾಧನಕೇರಿಯ ಪ್ರದೇಶವನ್ನು ನೆಲೆಯಾಗಿಸಿ ಅವರು ಸಾಹಿತ್ಯ ಕೃಷಿ ನಡೆಸಿದರು.
ಧಾರವಾಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬೇಂದ್ರೆಯವರು ಮಹಾರಾಷ್ಟ್ರದ ಪುಣೆಯಲ್ಲಿ ಪದವಿ ಪೂರೈಸಿದರು. ಕರ್ನಾಟಕದ ಗದುಗಿನಲ್ಲಿ ಕೆಲಕಾಲ ಮುಖ್ಯಾಧ್ಯಾಪಕರಾಗಿದ್ದರು. ಬಳಿಕ ಎಂ.ಎ. ಪದವಿ ಪಡೆದು ಧಾರವಾಡದ ವಿಕ್ಟೋರಿಯ
ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇದೇ ಸಂದರ್ಭದಲ್ಲಿ ಗೆಳೆಯರ ಬಳಗ ಎಂಬ ಸಾಹಿತ್ಯ ರಸಿಕರ ಕೂಟವನ್ನು ರಚಿಸಿದರು.
ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು,ನಾಕುತಂತಿ, ಬಾ ಹತ್ತರ, ಸೂರ್ಯಪಾನ, ಮೂರ್ತಿಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು. ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. ಸಾಹಿತ್ಯವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.
ಬೇಂದ್ರೆಯವರಿಗೆ ಕಾಶಿಹಿಂದೂ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್, 'ನಾಕುತಂತಿ' ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿಯ (೧೯೭೪) ಮೂಲಕ ಸಾಹಿತ್ಯ ಕ್ಷೇತ್ರದ ಸರ್ವೋಚ್ಛ ನೆಲೆಯಲ್ಲಿ ಗುರುತಿಸಿಕೊಂಡ ಬೇಂದ್ರೆಯವರು 1981ರಲ್ಲಿ ಇಹಲೋಕ ಯಾತ್ರೆ ಮುಗಿಸಿದರು.
 
ಶಿವರಾಂ ಕಾರಂತShivram Karanth
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಮೀಪದ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಜನಿಸಿದ್ದ ಶಿವರಾಮ ಕಾರಂತರು, ಪ್ರೌಢಶಿಕ್ಷಣವನ್ನಷ್ಟೇ ಪಡೆದಿದ್ದರು. ಆದರೆ ಗಾಂಧಿ ತತ್ವಕ್ಕೆ ಮಾರುಹೋಗಿ ಹೋರಾಟಕ್ಕೆ ಧುಮುಕಿ, ನಂತರ ಶ್ರೇಷ್ಠ ಕಾದಂಬರಿಕಾರ, ಕಲಾವಿದ, ಅಲೆಮಾರಿ, ಪತ್ರಕರ್ತ, ಪರಿಸರವಾದಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ-ಸಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಗಳಿಸಿದ್ದರು.
ಕೇವಲ 5 ದಿನಗಳಲ್ಲಿ ಬರೆದಿರುವ ಚೋಮನ ದುಡಿ, 30 ದಿನಗಳಲ್ಲಿ ಬರೆದು ಮುಗಿಸಿರುವ ಮರಳಿ ಮಣ್ಣಿಗೆ, ಜ್ಞಾನಪೀಠ ಪ್ರಶಸ್ತಿ (೧೯೭೭) ತಂದುಕೊಟ್ಟ'ಮೂಕಜ್ಜಿ ಕನಸುಗಳು', ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ್ ರಾವ್ ಬದುಕಿನ ಚಿತ್ರಣದ ಔದಾರ್ಯದ ಉರುಳಲ್ಲಿ, ಹುಚ್ಚು ಮನಸ್ಸಿನ ಹತ್ತುಮುಖಗಳು, ಸನ್ಯಾಸಿಯ ಬದುಕು ಹೀಗೆ 44 ಕಾದಂಬರಿ, 16 ನಾಟಕ, 3 ಕಥಾ ಸಂಕಲನ, ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ, ಸಿರಿಗನ್ನಡ ಅರ್ಥಕೋಶ, 6 ಪ್ರಬಂಧ, 5 ಆತ್ಮಕಥೆ, 240 ಮಕ್ಕಳ ಪುಸ್ತಕ, ಪ್ರವಾಸ ಕಥನ, ಕಿರಿಯರ ವಿಶ್ವಕೋಶ, ಗೀತರೂಪಕ ಸೇರಿದಂತೆ ಹಲವಾರು ಸಾಹಿತ್ಯಗಳಲ್ಲಿ ಕೈಯಾಡಿಸಿರುವ ಅವರು ಸಾರಸ್ವತ ಲೋಕದ ಅಗ್ರಗಣ್ಯ ಬರಹಗಾರರಾಗಿದ್ದರು.
 
Masti Venkatesh Iyengarಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರಲ್ಲೊಬ್ಬರಾದ 'ಸಣ್ಣಕಥೆಗಳ ಜನಕ' ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು 'ಶ್ರೀನಿವಾಸ' ಎಂಬ ಕಾವ್ಯನಾಮದಿಂದ ಸುಪ್ರಸಿದ್ಧರಾಗಿದ್ದರು.
ಮೈಸೂರು ಮಹಾರಾಜರ ಕಾಲದಲ್ಲಿ ಅಧಿಕಾರದಲ್ಲಿದ್ದು, ಭಾರತ ಸ್ವತಂತ್ರವಾದ ಬಳಿಕ ಸಾರ್ವಜನಿಕ ಆಡಳಿತ ಸೇವೆಯ ದಕ್ಷ ಅಧಿಕಾರಿಯಾಗಿದ್ದರು. ಸರ್ಕಾರಿ ಸೇವೆಯಲ್ಲಿದ್ದರೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಜನಪ್ರಿಯತೆ ಗಳಿಸಿದ್ದರು.ಕನ್ನಡ ಸಾಹಿತ್ಯ ಕ್ಷೇತ್ರದಲ್ಲಂತೂ 'ಮಾಸ್ತಿ ಕನ್ನಡದ ಆಸ್ತಿ' ಎಂಬ ನುಡಿಗಟ್ಟಿಗೆ ಪಾತ್ರರಾಗಿದ್ದರು.
ಮೈಸೂರು ಮಹರಾಜರ ಕಾಲದಲ್ಲಿ ಆ ಸಂಸ್ಥಾದ ಆಡಳಿತ ಸೇವೆಯಲ್ಲಿ ಸಹಾಯಕ ಆಯುಕ್ತರಾಗಿ, ಹಿರಿಯ ಅಧಿಕಾರಿಯಾಗಿದ್ದರು. ಇವರಿಗೆ ಮೈಸೂರು ಅರಸರು 'ರಾಜಸೇವಾಸಕ್ತ' ಎಂಬ ಬಿರುದನ್ನು ನೀಡಿದರು. ಬ್ರಿಟಿಷ ಆಳ್ವಿಕೆಯಲ್ಲಿದ್ದರೂ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತವಿರಬೇಕೆಂದು ಗುರುತಿಸಿದರು.
ಮಾಸ್ತಿಯವರ ಪ್ರಮುಖ ಕೃತಿಗಳಲ್ಲೊಂದು 'ಚಿಕ್ಕ ವೀರ ರಾಜೇಂದ್ರ' ಕಾದಂಬರಿ. ಇನ್ನೊಂದು 'ಚೆನ್ನಬಸವ ನಾಯಕ', ರಾಜವಂಶಗಳ ಉನ್ನತಿ ಅವನತಿಗಳು ಇವುಗಳ ಕಾಥಾವಸ್ತು. ಮಾಸ್ತಿಯವರ ಇತರ ಕೃತಿಗಳೆಂದರೆ ಶೇಷಮ್ಮ,ಸುಬ್ಬಣ್ಣ ಮುಂತಾದ ದೊಡ್ಡ ಕಥೆಗಳು. ಗೌಡರ ಮಲ್ಲಿ, ರಾಮನವಮಿ,ಮೂಕನ ಮಕ್ಕಳು, ಸುನೀತಾ,ಬಿನ್ನಹ, ತಾವರೆ ಮಲಾರ,ಚೆಲುವು,ಸಂಕ್ರಾಂತಿ, ಮಾನವ ಇತ್ಯಾದಿ ಕಾವ್ಯಪ್ರಕಾರದ ಕೃತಿಗಳು. ಇವರ ಮೊದಲ ಸಣ್ಣ ಕಥೆ ರಂಗನ ಮದುವೆ. ಆ ಬಳಿಕ 15 ರಷ್ಟು ಸಣ್ಣ ಕಥೆಗಳ ಸಂಕಲನ ಪ್ರಕಟಿಸಿದರು.
ಆಡಳಿತಾತ್ಮಕವಾಗಿಯೂ, ಸಾಹಿತ್ಯಕವಾಗಿ ಉತ್ತಮ ಸೇವೆ ನೀಡಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 1952ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದರು. 1983ರಲ್ಲಿ 'ಚಿಕ್ಕವೀರ ರಾಜೇಂದ್ರ' ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದರು. 1986ರಲ್ಲಿ ವಿಧಿವಶರಾದರು.
 
ವಿ.ಕೃ. ಗೋಕಾಕ್V.K. Gokak
ಕನ್ನಡ ಸಾಹಿತ್ಯಲೋಕದ ದಿಗ್ಗಜರಲ್ಲಿ ಡಾ.ವಿ.ಕೃ.ಗೋಕಾಕ್‌ ಒಬ್ಬರು. ಇವರು ಸಾಹಿತ್ಯ ಕ್ಷೇತ್ರದಲ್ಲಿಯಂತೆಯೇ ಭಾಷಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದವರು. ವಿನಾಯಕ ಕೃಷ್ಣ ಗೋಕಾಕ್‌ ಅವರು ವಿ.ಕೃ.ಗೋಕಾಕ್‌ ಎಂದೇ ಸುಪರಿಚಿತರಾಗಿದ್ದರು.
ಕನ್ನಡ ಸಾಹಿತ್ಯ ಚಳುವಳಿಗಳಲ್ಲೊಂದಾದ ನವೋದಯ ಕಾಲದ ಸಾಹಿತ್ಯಕಾರರಲ್ಲಿ ಪ್ರಮುಖರಿವರು. ಕವಿ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ, ಕಥೆಗಾರ ಮಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದವರು; 'ವಿನಾಯಕ' ಎಂಬ ಕಾವ್ಯ ನಾಮ ಹೊಂದಿದ್ದರು. ಶಿಕ್ಷಕ, ಆಡಳಿತಗಾರರಾಗಿ ವೃತ್ತಿ ಜೀವನ ನಡೆಸಿದವರು.
ಬಾಲ್ಯಕಾಲದಲ್ಲೇ ಇವರು ಗಳಗನಾಥರ ಕಾದಂಬರಿಗಳಿಂದ ಪ್ರಭಾವಿತರಾಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಇವರು ಧಾರವಾಡದ ಕರ್ನಟಕ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿದರು. ಇಂಗ್ಲಿಷ್‌ ಸಾಹಿತ್ಯದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಗೋಕಾಕರು, ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದವರು ಬಳಿಕ, ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ, ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ ಸ್ಟಡೀಸ್‌ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಸಾಹಿತ್ಯಸೇವೆಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಡಾ.ವಿ.ಕೃ.ಗೋಕಾಕರು ಸೇವೆ ಸಲ್ಲಿಸಿದ್ದರು. ರಾಜ್ಯ ಭಾಷಾ ನೀತಿಯನ್ನು ಕುರಿತು ಚರ್ಚಿಸಲು ರಚಿಸಲಾದ ಸಮಿತಿಯಲ್ಲಿ ನೇಮಕಗೊಂಡು ಕನ್ನಡಕ್ಕೆ ಅಗ್ರ ಸ್ಥಾನಮಾನ ನೀಡುವಲ್ಲಿ ಶ್ರಮಿಸಿದವರು. ಆ ಬಳಿಕದ ಕನ್ನಡಕ್ಕಾಗಿ ನಡೆದ ಹೋರಾಟ ಗೋಕಾಕ್‌ ಚಳುವಳಿ ಎಂದೇ ಹೆಸರು ಪಡೆಯಿತು.
ಡಾ.ವಿ.ಕೃ.ಗೋಕಾಕರಿಗೆ ಭಾರತದ ಶ್ರೇಷ್ಠತಮ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ (೧೯೯೦) ಲಭಿಸಲು ಕಾರಣವಾದ ಕೃತಿ 'ಭಾರತ ಸಿಂಧು ರಶ್ಮಿ' ಎಂಬ ಮಹಾಕಾವ್ಯ. ಈ ಮಹಾಕಾವ್ಯವು ಎರಡು ಸಂಪುಟಗಳಲ್ಲಿದ್ದು, 12 ಖಂಡಗಳನ್ನು ಹೊಂದಿದೆ.
ನವೋದಯದ ಕನಸುಗಾರರಾಗಿದ್ದ ಡಾ.ವಿ.ಕೃ.ಗೋಕಾಕ್‌ ದೇಶದ ಪದ್ಮಪ್ರಶಸ್ತಿ ಪಡೆದವರು. ಸಾಹಿತ್ಯಿಕವಾಗಿ ಸಾಮಾಜಿಕವಾಗಿ ಸಮೃದ್ಧ ಜೀವನವನ್ನು ಕಂಡಿದ್ದ ವಿ.ಕೃ.ಗೋಕಾಕರು 1992ರಲ್ಲಿ ವಿಧಿವಶರಾದರು.
Masti Venkatesh Iyengarಯು.ಅರ್. ಅನಂತ ಮೂರ್ತಿ
ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಡಾ. ಯು.ಆರ್. ಅನಂತಮೂರ್ತಿಯವರು. ಇವರು ೧೯೩೨ರ ಡಿಸೆಂಬರ್ ೨೧ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗೋಪಾಲಚಾರ್ಯ ಹಾಗೂ ತಾಯಿ ಸತ್ಯಮ್ಮ(ಸತ್ಯಭಾಮ).
ಇವರ ದೂರ್ವಾಸಪುರದ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಇವರು ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ೧೯೬೬ರಲ್ಲಿ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ
ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪಡೆದರು. ೧೯೭೦ ರಿಂದ ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ೧೯೮೨ರಲ್ಲಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದರು. ೧೯೯೨-೯೩ ನೇ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು.
ಅನಂತಮೂರ್ತಿಯವರು ಸಣ್ಣಕತೆಗಾರರಾಗಿ ಹಾಗೂ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದಾರೆ. ೧೯೫೫ರಲ್ಲಿ ‘ಎಂದೆಂದೂ ಮುಗಿಯದ ಕತೆ’ ಎಂಬ ಕಥಾಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಐದು ದಶಕಗಳ ಕಥೆಗಳು(ಸಮಗ್ರ) ಇವು ಇವರ ಕಥಾಸಂಕಲನಗಳು. ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ದಿವ್ಯ, ಇವರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಪೂಜೆ ಯಾಕೆ ಕೂಡದು, ಇವುಗಳು ವಿಮರ್ಶೆಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇವರ ಕವನಸಂಕಲನಗಳು. ಶ್ರೀಯುತರು ‘ಆವಾಹನೆ’ ಎಂಬ ನಾಟಕವನ್ನು ರಚಿಸಿದ್ದಾರೆ.
ಇವರಿಗೆ ಬಂದಿರುವ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೮೩ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೮೮ರಲ್ಲಿ ಉಡುಪಿಯ ಫಲಿಮಾರು ಮಠದ ಶ್ರೀವಿಭುದೇಶತೀರ್ಥರಿಂದ ಸಮಾಜ ಭೂಷಣ ಪ್ರಶಸ್ತಿ, ೧೯೯೦ರಲ್ಲಿ ಹಾರ್ಮೋನಿ ಪ್ರಶಸ್ತಿ, ೧೯೯೪ರಲ್ಲಿ ಡಾ. ಮಾಸ್ತಿ ಪ್ರಶಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ೧೯೯೫ರಲ್ಲಿ ಕೊಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಗಿರೀಶ್ ಕಾರ್ನಾಡ್Girish Karnad
ಗಿರೀಶ್ ಕಾರ್ನಾಡರು ೧೯೩೮ರ ಮೇ ೧೯ರಂದು ಮಹಾರಾಷ್ಟ್ರದ ಮಾಥೆರ್ನ ಎಂಬಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕೃಷ್ಣ ಕಾರ್ನಾಡ್, ತಾಯಿ ಕೃಷ್ಣಾಬಾಯಿ.
ಗಿರೀಶರ ಆರಂಭದ ವಿದ್ಯಾಭ್ಯಾಸ ಉತ್ತರ ಕನ್ನಡ ಜಿಲ್ಲೆಯ ಸಿರಸಿಯಲ್ಲಿ ಆಯಿತು. ಮಾರಿಕಾಂಬ ಹೈಸ್ಕೂಲ್‍ನಲ್ಲಿ ಪ್ರೌಢಶಿಕ್ಷಣ ಪಡೆದು ಮುಂದೆ ಧಾರವಾಡಕ್ಕೆ ಹೋದರು. ಧಾರ್ವಾಡದಲ್ಲಿನ ಕರ್ನಾಟಕ ಕಾಲೇಜಿನಲ್ಲಿ ೧೯೫೮ರಲ್ಲಿ ಬಿ.ಎ. ಪದವೀಧರರಾದರು. ನಂತರ ಮುಂಬಯಿಯಲ್ಲಿ ಎಂ.ಎ. ಓದುತ್ತಿದ್ದಾಗ್ ರೋಡ್ಸ್ ವಿದ್ಯಾರ್ಥಿ ವೇತನ ದೊರೆತು ಇಂಗ್ಲೆಂಡಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ತೆರಳಿದರು. ಅಲ್ಲಿ ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿಯ ಅಧ್ಯಕ್ಷರಾದರು.
ಇಂಗ್ಲೆಂಡಿನಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ಮದರಾಸಿನ ಶಾಖೆಯಲ್ಲಿ ೧೯೬೩ರಿಂದ ೧೯೭೦ರವರೆಗೆ ಉಪವ್ಯವಸ್ಥಾಪಕರಾಗಿ ಆಮೇಲೆ ವ್ಯವಸ್ಥಾಪಕರಾಗಿ ಶ್ರಮಿಸಿದರು. ಇವರು ಧಾರವಾಡಕ್ಕೆ ಬಂದು ‘ಧಾರವಾಡ ಕಲಾ ಕೇಂದ್ರ’ ಎನ್ನುವ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿದರು. ನಂತರ ಪುಣೆಯ ಫಿಲ್ಮ್‍ಇನ್ಸ್‍ಟಿಟ್ಯೂಟ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ತೊಂಬತ್ತರ ದಶಕದಲ್ಲಿ ಅವರು ಭಾರತ ಸರ್ಕಾರದ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾದರು.
ಗಿರೀಶರ ಮೊದಲನೆ ಕೃತಿ ‘ಯಾಯಾತಿ’ ಎಂಬ ನಾಟಕ. ಈ ನಾಟಕವು ಇವರಿಗೆ ದೊಡ್ಡಮಟ್ಟದಲ್ಲಿ ಪ್ರಶಂಸೆ ಮತ್ತು ಪ್ರಚಾರವನ್ನು ತಂದುಕೊಟ್ಟಿತು. ಹಿಟ್ಟಿನಹುಂಜ ಮತ್ತು ಅಗ್ನಿ ಹಾಗೂ ಮಳೆ ಇವು ಪೌರಣಿಕ ನಾಟಕಗಳಾದರೆ, ತುಘಲಕ್, ತಲೆದಂಡ ಹಾಗೂ ಟೀಪುಸುಲ್ತಾನ್ ನಾಟಕಗಳು ಐತಿಹಾಸಿಕ ಹಿನ್ನಲೆಯುಳ್ಳವು. ಜಾನಪದ ವಸ್ತುಗಳನ್ನು ಒಳಗೊಂಡ ನಾಟಕಗಳು ಹಯವದನ, ನಾಗಮಂಡಲ್, ಸಾಮಾಜಿಕ ನಾಟಕ ಅಂಜುಮಲ್ಲಿಗೆ, ಗಿರೀಶ್ ಕಾರ್ನಾಡರ್ ನಾಟಕಗಳು ಇಂಗ್ಲಿಷ್, ಹಿಂದಿ, ಮರಾಠಿ ಹಾಗೂ ಭಾರತೀಯ ಭಾಷೆಗಳಲ್ಲಿ ಪ್ರದರ್ಶನಗೊಂಡಿವೆ. ನಾಟಕಗಳ ರಚನೆಯ ಜೊತೆಗೆ ಇವರು ರಂಗಭೂಮಿಯಲ್ಲಿ ಹಾಗೂ ಚಲನಚಿತ್ರ ರಂಗಗಳಲ್ಲಿ ಅಭಿನಯ ಮತ್ತು ನಿರ್ದೇಶಕರಾಗಿ ಜನಪ್ರಿಯರಾಗಿದ್ದಾರೆ.
ಕಾರ್ನಾಡರ ಸೃಜನಶೀಲತೆ ಪ್ರತಿಭೆಗೆ ತಕ್ಕ ಪುರಸ್ಕಾರಗಳು ದೊರೆತಿವೆ. ಇವರಿಗೆ ೧೯೬೨ರಲ್ಲಿ ಯಾಯಾತಿ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೦ರಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ, ೧೯೭೨ರಲ್ಲಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ೧೯೭೪ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ೧೯೯೦ರಲ್ಲಿ ಗ್ರಂಥಲೋಕದ ಉತ್ತಮ ಲೇಖಕ ಪುರಸ್ಕಾರ, ೧೯೯೨ರಲ್ಲಿ ಬಿ.ಹೆಚ್. ಶ್ರೀಧರ ಪ್ರಶಸ್ತಿ, ೧೯೯೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೭ ರಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿ, ೧೯೯೮ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
 
 
ಚಂದ್ರಶೇಖರ್ ಕಂಬಾರ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ ೨ ಜನವರಿ ೧೯೩೭ರಂದು ಡಾ. ಚಂದ್ರಶೇಖರ ಕಂಬಾರರು ಜನಿಸಿದರು. ಇವರ ತಂದೆ ಬಸವಣ್ಣೆಪ್ಪ ಕಂಬಾರ, ತಾಯಿ ಚೆನ್ನವ್ವ. ಕಂಬಾರರು ೧೯೫೮ರಲ್ಲಿ ಬಿ.ಎ. ಪದವಿ ಹಾಗೂ ೧೯೬೨ರಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ವೃತ್ತಿ ಜೀವನ ಪ್ರಾರಂಭವಾದದ್ದು, ೧೯೬೨ರಿಂದ ಲಿಂಗರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಇವರು ಸಾಗರ ಕಾಲೇಜು, ಉಡುಪಿ ಕಾಲೇಜು, ಶಿಕಾಗೋ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
 
೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ತಮ್ಮ ‘ಓರಿಜಿನ್ ಅಂಡ್ ಡೆವಲಪಮೆಂಟ್ ಆಫ್ ಕನ್ನಡ ಫೋಲ್ಕ್ ಥಿಯೆಟರ್’ ಎಂಬ ಮಹಾಪ್ರಬಂಧಕ್ಕಾಗಿ ಕಂಬಾರರು ಪಿಎಚ್.ಡಿ ಪದವಿ ಪಡೆದರು. ರಾಜ್ಯ ಮತ್ತು ಕೇಂದ್ರ ಅಕಾಡೆಮಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕಂಬಾರರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಜನಪದ ರಂಗ ಪ್ರಕಾರಗಳ ಪುನರುಜ್ಜೀವನಕ್ಕಾಗಿ ಮತ್ತು ಹವ್ಯಾಸಿ ವೃತ್ತಿರಂಗ ಪರಂಪರೆಗಳಲ್ಲಿ ಸಮನ್ವಯ ಸಾಧಿಸುವುದಕ್ಕಾಗಿ ಅವರು ಮಾಡಿದ ಪ್ರಯತ್ನಗಳು ಸ್ಮರಣೀಯವಾಗಿವೆ. ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ‘ರಂಗಾಯಣ’ದ ಸದಸ್ಯರಾಗಿದ್ದ ಕಂಬಾರರು ರಾಷ್ಟ್ರೀಯ ನಾಟಕ ಶಾಲೆಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೯೧ರ ನವೆಂಬರ್ ೧ರಂದು ಪ್ರಾರಂಭವಾದ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಕಂಬಾರರು ಎರಡು ಅವಧಿಗೆ(೧೯೯೨-೧೯೯೮) ಕುಲಪತಿಗಳಾಗಿದ್ದರು.
    ಕಂಬಾರರು ರಚಿಸಿರುವ ಪ್ರಮುಖ ಕೃತಿಗಳೆಂದರೆ, ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿಮೀನು, ಅಕ್ಕುಕ್ಕು ಹಾಡುಗಳೆ, ಚಕೋರಿ ಇವು ಕಾವ್ಯಗಳು. ನಾಟಕಗಳು - ಬೆಂಬತ್ತಿದ ಕಣ್ಣು, ನಾರ್ಸಿಸಸ್, ಜೋಕುಮಾರ ಸ್ವಾಮಿ, ಚಾಳೇಶ, ಕಿಟ್ಟಿಯ ಕತೆ, ಜೈ ಸಿದ ನಾಯಕ, ಕಾಡು ಕುದುರೆ, ನಾಯೀ ಕತೆ ಮುಂತಾದುವು. ಕಾದಂಬರಿ - ಅಣ್ಣ ತಂಗಿ, ಕರಿಮಾಯಿ, ಜೀಕೆ ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವಾ ಮತ್ತು ಅರಮನೆ. ಜಾನಪದ- ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಸಂಗ್ಯಾಬಾಳ್ಯಾ, ಬಣ್ಣಿಸಿ ಹಾಡವ್ವ ನನ ಬಳಗ, ಬಯಲಾಟಗಳು, ಮಾತಡೋ ಲಿಂಗವೇ ಮುಂತಾದವುಗಳು. ಇತರೆ- ಕನ್ನಡ ನಾಟಕ ಸಂಪುಟ, ನೆಲದ ಮರೆಯ ನಿದಾನ.
    ಕಂಬಾರರಿಗೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಸನ್ಮಾನ, ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ, ನಾಂದಿಕರ ಪ್ರಶಸ್ತಿ,ಕಲ್ಕತ್ತಾ; ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ.ಶಂಕರಗೌಡ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ೨೦೧೧ರಲ್ಲಿ ‘ಜ್ಞಾನಪೀಠ ಪ್ರಶಸ್ತಿ’. ಇವು ಕಂಬಾರರಿಗೆ ಲಭ್ಯವಾಗಿರುವ ಪ್ರಮುಖ ಪ್ರಶಸ್ತಿಗಳು.


Sep 27, 2012

ಮಹಾಭಾರತದ ಹದಿನೆಂಟು ಪರ್ವಗಳ ಸಂಕ್ಷಿಪ್ತ ಚಿತ್ರ


1. ಆದಿಪರ್ವ: ಪರಿಚಯ, ವಿಶ್ವ ಸೃಷ್ಟಿ ಯ ವಿವರ ( ಸೃಷ್ಟಿ ಮತ್ತು ಮಹಾಭಾರತ) , ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ

2. ಸಭಾಪರ್ವ: ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ

3. ಅರಣ್ಯಕಪರ್ವ: ಹನ್ನೆರಡು ವರ್ಷದ ವನವಾಸ

4. ವಿರಾಟಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ

5. ಉದ್ಯೋಗಪರ್ವ: ಯುದ್ಧದ ತಯಾರಿ

6. ಭೀಷ್ಮಪರ್ವ: ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ - ಕೃಷ್ಣನಿಂದ
ಭಗವದ್ಗೀತೆ ಉಪದೇಶ

7. ದ್ರೋಣಪರ್ವ: ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ

8. ಕರ್ಣಪರ್ವ: ಕರ್ಣನ ಸೇನಾಧಿಪತ್ಯ, ಕರ್ಣಾವಸಾನ

9. ಶಲ್ಯಪರ್ವ: ಶಲ್ಯನ ಸೇನಾಧಿಪತ್ಯ

10. ಸೌಪ್ತಿಕಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ

11. ಸ್ತ್ರೀಪರ್ವ: ಗಾಂಧಾರಿಯ ವಿಲಾಪ

12. ಶಾಂತಿಪರ್ವ: ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ

13. ಅನುಶಾಸನಪರ್ವ: ಭೀಷ್ಮನ ಕೊನೆಯ ಮಾತುಗಳು

14. ಅಶ್ವಮೇಧಿಕಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ

15. ಆಶ್ರಮವಾಸಿಕಪರ್ವ: ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ
ಮರಣ

16. ಮೌಸಲಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")

17. ಮಹಾಪ್ರಸ್ತಾನಿಕಪರ್ವ: ಪಾಂಡವರ ಮರಣದ ಮೊದಲ ಭಾಗ

18. ಸ್ವರ್ಗಾರೋಹಣಪರ್ವ: ಪಾಂಡವರ ಸ್ವರ್ಗಾರೋಹಣ

Sep 17, 2012

ಹಳೆಯ ಹಳ್ಳಿಯ ಲೆಕ್ಕಗಳು


ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ

ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್ನು ಒಂದು "ಸೇರು" ಎಂದು ಮಾಡಿಕೊಂಡಿದ್ದರಿಂದ, ಅದರ ಅಳತೆಗೆ ತಕ್ಕಂತೆ " ಸೇರಿ"ನ ಸೃಷ್ಟಿಯಾಗಿರುವುದನ್ನು ನಾವು ಗಮನಿಸುತ್ತೇವೆ. ಹೀಗೆ "ಪಾವು", "ಚಟಾಕು", "ಗಜ", "ಅಂಗುಲ", "ಮೈಲಿ", "ಹರಿದಾರಿ" "ಎಕರೆ" ಮುಂತಾದ ಅಳತೆಮಾನಗಳು ಹಾಗೂ "ತೊಲ", "ಪಲ್ಲ", "ಖಂಡುಗ" ಮುಂತಾದ ತೂಕಮಾನಗಳು ಬಂದು ಸೇರಿಕೊಂಡಿವೆ. ಉದಾಹರಣೆಗೆ, ಒಂದು ಸೇರು ಎಂದರೆ, ೨೪ ಬೆಳ್ಳಿ "ರೂಪಾಯಿ"ಗಳ ತೂಕ ಅಥವಾ ನಾಲ್ಕು "ಪಾವು" ಎಂದೂ ಹಾಗೂ ಒಂದು "ಗಜ" ಎಂಬುದನ್ನು ಮೂರು "ಅಡಿ" ಎಂದು ಹೇಳಲಾಗುತ್ತದೆ. ಇವುಗಳ ಪ್ರಕಾರ ತೂಕ ಹಾಗು ಅಳತೆಗಳನ್ನು ನಾವು ಈ ರೀತಿ ವಿಂಗಡಿಸಬಹುದಾಗಿದೆ.
೧ ಬೆಳ್ಳಿ ರೂಪಯಿ ತೂಕ = ೧ ತೊಲ
೧ ಪಾವು = ೪ ಚಟಾಕು
೧ ಸೇರು = ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ
೧ ಇಬ್ಬಳಿಗೆ = ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು)
೧ ಪಲ್ಲ = ೧೦೦ ಸೇರು
೧ ಕೊಳಗ = ೨ ಇಬ್ಬಳಿಗೆ ಅಥವ ೧೧ ಸೇರು
೧ ಖಂಡುಗ = ೪೦ ಇಬ್ಬಳಿಗೆ ಅಥವ ೨೦ ಕೊಳಗ

೧ ಅಡಿ = ೧೨ ಅಂಗುಲ ಅಥವ ಇಂಚು
೧ ಗಜ = ೩ ಅಡಿ ಅಥವ ೩೬ ಅಂಗುಲ
೧ ಗುಂಟೆ = ೨೨೦ ಚದರ ಗಜ
೧ ಎಕರೆ = ೪೦ ಗುಂಟೆ

೧ ಮೈಲಿ = ೮ ಫರ್ಲಾಂಗು
೧ ಹರಿದಾರಿ = ೪ ಮೈಲಿ
೧ ಗಾವುದ = ೧೨ ಹರಿದಾರಿ

ನಾನು ನೋಡಿದಂತೆ ಸಣ್ಣವನಾಗಿದ್ದಾಗ, ಅಪ್ಪ ಶಾಲಾ ಯೂನಿಫಾರಂ ಬಟ್ಟೆ ಹಾಕಲು ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಹಾಗೂ ಅಲ್ಲಿ ಬಟ್ಟೆಯನ್ನು ಗಜದಲ್ಲೇ ಅಳತೆ ಮಾಡುತ್ತಿದ್ದದ್ದು ನನಗೆ ನೆನಪಿದೆ. ಇನ್ನು ಭತ್ತದ ನಾಟಿಗೂ ಮೊದಲು ಪೈರಿನ ಹೊಟ್ಟಿಲಿಗೆ ಬಿತ್ತನೆ ಭತ್ತದ ಅಳತೆಯನ್ನು ಸೇರಿನಲ್ಲಿ ಈಗಲೂ ಅಳೆದು ಉಪಯೋಗಿಸುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಒಂದು ಎಕರೆಗೆ ಸುಮಾರು ಮೂವತ್ತು ಸೇರು ಬಿತ್ತನೆ ಭತ್ತವನ್ನು ಉಪಯೋಗಿಸುತ್ತಾರೆ. ಇನ್ನು ತೂಕದಲ್ಲಿ ನೋಡಿದರೆ, ಬೆಣ್ಣೆ, ತುಪ್ಪ ಮುಂತಾದ ಖಾದ್ಯಗಳನ್ನು "ಸೇರು", "ಪಾವು" ಎಂದೇ ತೂಗುವುದು ವಾಡಿಕೆಯಾಗಿತ್ತು. ಅದಕ್ಕಾಗಿಯೇ ತೂಕದ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ,
ಅಚ್ಚೇರು ಬೆಣ್ಣೆ = ಅರ್ಧ ಸೇರು ಬೆಣ್ಣೆ = ೧೨ ಬೆಳ್ಳಿ ರೂಪಾಯಿಗಳ ತೂಕ ಅಥವ ೨ ಪಾವು
ಅರ್ಪಾವು ತುಪ್ಪ = ಅರ್ಧ ಪಾವು ತುಪ್ಪ

ಹಳ್ಳಿ ಅಳತೆಯಲ್ಲಿ ಕಾಣಬಹುದಾದ ಇನ್ನೊಂದು ವಿಷೇಶ ಎಂದರೆ, ಸೇರು, ಪಾವು, ಇಬ್ಬಳಿಗೆ, ಕೊಳಗ ಹೀಗೆ ಯಾವುದನ್ನೇ ಉಪಯೋಗಿಸಿ ಭತ್ತ, ರಾಗಿ ಅಥವಾ ಬೇರೆ ಯಾವುದೇ ಧಾನ್ಯಗಳನ್ನು ಅಳೆಯುವಾಗ "ಹೆಚ್ಚಲಿ" ಎಂಬ ಪದವನ್ನು ಸಾಮಾನ್ಯವಾಗಿ ಉಪಯೋಗಿಸುತ್ತಿರುತ್ತಿದ್ದರು. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಧಾನ್ಯ ಹಾಗೇ ಹೆಚ್ಚಲಿ ಎಂಬುದು. ಎರಡನೆಯದಾಗಿ ೭, ೧೧ ಮತ್ತು ೧೭ ಸಂಖ್ಯೆಗಳು ಅಶುಭ ಹಾಗು ಅವುಗಳನ್ನು ಉಪಯೋಗಿಸಬಾರದೆಂಬ ನಂಬಿಕೆ. ಈ ಕಾರಣಗಳಿಂದ, "ಆರು" ಆದ ನಂತರ "ಹೆಚ್ಚಲಿ" ನಂತರ "ಎಂಟು" ಎಂದೂ, ಹತ್ತಾದ ನಂತರ "ಹೆಚ್ಚಲಿ" ನಂತರ "ಹನ್ನೆರಡು ಎಂದೂ, "ಹದಿನಾರು" ಆದ ನಂತರ "ಹೆಚ್ಚಲಿ" ನಂತರ "ಹದಿನೆಂಟು" ಎಂದೂ ಬಳಸುತ್ತಿದ್ದರು. ಹೀಗೆ ಏಳು, ಹನ್ನೊಂದು ಮತ್ತು ಹದಿನೇಳು ಸಂಖ್ಯೆಗಳನ್ನು ಉಪಯೋಗಿಸುತ್ತಿರಲಿಲ್ಲ. ಹಾಗೇ ಕೆಲವು ಸಂಖ್ಯೆಗಳನ್ನು ಶುಭ ಸಂಖ್ಯೆಗಳೆಂದು ನಂಬಿ ಉಪಯೋಗಿಸುತ್ತಿದ್ದದ್ದೂ ಉಂಟು. ಅವು ಯಾವುವೆಂದರೆ, ಐದು, ಒಂಬತ್ತು ಮತ್ತು ಹನ್ನೆರಡು.

ಹಣಕ್ಕೆ ಸಂಬಂಧಿಸಿದಂತೆ

ಈ ಮೊದಲೇ ಹೇಳಿದಂತೆ ಹಿಂದೆ "ಕಾಸು"ಗಳು ಬಹುಪಾಲು ಎಲ್ಲಾ ಅಳತೆಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತಿದ್ದದ್ದು ನಮಗೆ ಕಾಣುತ್ತದೆ. ಮೂರು ಕಾಸಿನ ಒಂದು ಬಿಲ್ಲೆ, ಇಂಥ ನಾಲ್ಕು ಬಿಲ್ಲೆಗಳು ಸೇರಿದರೆ ಹನ್ನೆರಡು "ಕಾಸು" ಅಥವಾ ಒಂದು "ಆಣೆ"ಯಾಗುತ್ತದೆ. ಇಂದಿನ "ನಾಲ್ಕಾಣೆ", "ಎಂಟಾಣೆ", "ಹನ್ನೆರಡಾಣೆ", "ಹದಿನಾರಾಣೆ"ಗಳು ಈ ಹಿನ್ನಲೆಯಿಂದಲೇ ಬಂದಿರುವುದು ನಮಗೆ ತಿಳಿದ ಸಂಗತಿಯಾಗಿದೆ. ಈಗಲೂ ನಾವು ಈ "ಆಣೆ"ಗಳನ್ನು ಉಪಯೋಗಿಸುತ್ತೇವೆ. ಇದರ ಪ್ರಕಾರ ನಾವು ನಾಣ್ಯಗಳನ್ನು ಈ ಕೆಳಗೆ ಹೇಳಿರುವ ರೀತಿ ವಿಂಗಡಿಸಬಹುದಾಗಿದೆ.
ಚಲಾವಣೆಯಲ್ಲಿದ್ದ ನಾಣ್ಯಗಳು ಮತ್ತು ಉಪಯೋಗಿಸುತ್ತಿದ್ದ ಲೋಹಗಳು:
೧ ಕಾಸು (ತಾಮ್ರ)
೩ ಕಾಸು (ತಾಮ್ರ)
೬ ಕಾಸು (ನಿಕ್ಕಲ್)
೧ ಆಣೆ = ೧೨ ಕಾಸು (ನಿಕ್ಕಲ್)
೨ ಆಣೆ = ೨೪ ಕಾಸು (ನಿಕ್ಕಲ್)
೪ ಆಣೆ (ಬೆಳ್ಳಿ)
೮ ಆಣೆ (ಬೆಳ್ಳಿ)
೧ ರೂಪಾಯಿ = ೧೯೨ ಕಾಸು (ಬೆಳ್ಳಿ)

ಜೊತೆಗೆ ನಾಣ್ಯವಲ್ಲದಿದ್ದರೂ "ದುಡ್ಡು", "ಪಾವಲಿ" "ಹಣ ಅಥವ ವರಹ" ಹಾಗು "ದುಗ್ಗಾಣಿ" ಎಂಬ ಪದಗಳು ವ್ಯವಹಾರಿಕವಾಗಿ ಉಪಯೋಗಿಸಲ್ಪಡುತ್ತಿದ್ದವು. ಇವುಗಳನ್ನು "ಕಾಸು" ಮತ್ತು "ಆಣೆ"ಗಳಲ್ಲಿ ಹೇಳಬಹುದಾದರೆ:
೧ ದುಡ್ಡು = ೪ ಕಾಸು
೧ ಪಾವಲಿ = ೪ ಆಣೆ
೧ ಹಣ ಅಥವ ವರಹ= ೪ ಆಣೆ ಪಾವಲಿ
೧ ದುಗ್ಗಾಣಿ = ೮ ಕಾಸು ಅಥವಾ ೨ ದುಡ್ಡು ಎಂದು ಹೇಳಲಾಗುತ್ತಿತ್ತು.

ಈಗಿನ ಖೋಟಾ ನೋಟುಗಳು ಇರುವಂತೆ, ಹಿಂದೆಯೂ ನಾಣ್ಯಗಳ ನಕಲು ಮಾಡಲಾಗುತ್ತಿತ್ತು. ಬೆಳ್ಳಿಕಾಸಿನ ನಕಲನ್ನು "ಸೀಸ"ದಲ್ಲಿ ಮಾಡುತ್ತಿದ್ದರು. ಆದುದರಿಂದ, ನಾಣ್ಯವನ್ನು ಚಿಮ್ಮಿಸಿ ಅದರ ಶಬ್ಧದ ಆಧಾರದ ಮೇಲೆ ಅದು "ಬೆಳ್ಳಿ" ಅಥವ "ಸೀಸ"ದಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸುತ್ತಿದ್ದರು. "ಹಣ", "ವರಹ" ಎಂಬ ಪದಗಳನ್ನು ಸಾಮಾನ್ಯವಾಗಿ ಮದುವೆ ಮುಂತಾದ ಸಮಾರಂಭಗಲ್ಲಿ ಹೆಚ್ಚು ಉಪಯೋಗಿಸುತ್ತಿದ್ದರು. ಮದುವೆಗಳಲ್ಲಿ ನೀಡುವ ಉಡುಗೊರೆಯ ಹಣದ (ಮುಯ್ಯಿ) ಪಟ್ಟಿ ಬರೆಯುವಾಗ "ವಧುವಿಗೆ ಸೋದರಮಾವನಿಂದ ನಾಲ್ಕು ವರಹ" ಅಥವಾ "ವರನಿಗೆ ಚಿಕ್ಕಪ್ಪನಿಂದ ಹತ್ತು ಹಣ" ಎಂದು ಹೇಳುತ್ತಿದ್ದರು. ಕೆಲವು ಭಾಗಗಳಲ್ಲಿ "ಆಗ", "ಅಡ್ಡ" ಮುಂತಾದ ಪದಗಳನ್ನು ಈ ಕೆಳಗಿನ ಅರ್ಥದಲ್ಲಿ ಉಪಯೋಗಿಸುತ್ತಿದ್ದರು.
ಆಗ = ಒಂದು
ಅಡ್ಡ = ಎರಡು
ದುಡ್ಡು = ನಾಲ್ಕು
ದುಗ್ಗಾಣಿ = ಎಂಟು

ಗೌರಿ ಗಣೇಶ ಹಬ್ಬದ ಶುಭಾಶಯಗಳು

Aug 25, 2012

ಚನ್ನಪಟ್ಟಣ ಬೊಂಬೆ


ನಾನು ಚಿಕ್ಕವನಿದ್ದಾಗ ಕೇಳಿದ ಪದ್ಯದ ಸಾಲುಗಳು. ಇದನ್ನು ಬರೆದವರು ಯಾರು ಬಲ್ಲೀರಾ?

ಬೊಂಬೆ ಬೊಂಬೆ ಬಣ್ಣದ ಬೊಂಬೆ
ಹಿರಿಯರು ಕಿರಿಯರು ಮೆಚ್ಚುವ ಬೊಂಬೆ
ಫೀಂ, ಫೀಂ, ಫೀಂ ಅನ್ನುವ ಬೊಂಬೆ
 ಕ್ಯೂಂ, ಕ್ಯೂಂ, ಕ್ಯೂಂ ಅನ್ನುವ ಬೊಂಬೆ
ಚನ್ನಪಟ್ಟಣದ ಬಣ್ಣದ ಬೊಂಬೆ

ಚನ್ನಪಟ್ಟಣದ ಸಾಹಿತ್ಯರತ್ನಗಳು


ನನ್ನ ಪಿಎಚ್.ಡಿ ಸಂಶೋಧನಾ ವಿಷಯ : 'ಚನ್ನಪಟ್ಟಣ ತಾಲ್ಲೂಕು : ಸಾಂಸ್ಕೃತಿಕ ಅಧ್ಯಯನ' ಇದರ ಒಂದು ಭಾಗವೇ ಚನ್ನಪಟ್ಟಣ ತಾಲ್ಲೂಕಿನ ಸಾಹಿತಿಗಳು

  • ಶ್ರೀಪಾದರಾಜರು
  • ವ್ಯಾಸರಾಯರು
  • ಚನ್ನಪಟ್ಟಣದ ಅಹೋಬಲದಾಸರು
  • ಎಂ.ಎಸ್.ಪುಟ್ಟಣ್ಣ
  • ಸಿ.ಎನ್.ಜಯಲಕ್ಷಿದೇವಿ
  • ಟಿ.ಕೆ.ರಾಮರಾವ್
  • ದೇ.ಜವರೇಗೌಡ
  • ಚ.ವಾಸುದೇವಯ್ಯ
  • ಸಿ.ಕೆ.ವೆಂಕಟರಾಮಯ್ಯ
  • ಎಚ್.ಕೆ.ವೀರಣ್ಣಗೌಡ
  • ಕಾಳೇಗೌಡ ನಾಗವಾರ
  • ರಸಿಕ ಪುತ್ತಿಗೆ(ಪಿ.ಸುಬ್ರಮಣ್ಯ ಆಚಾರ್ಯ)
  • ಚಕ್ಕೆರೆ ಶಿವಶಂಕರ್
  • ಕೆ.ಕೆಂಪೇಗೌಡ
  • ಸಿ.ಆರ್.ಚಂದ್ರಶೇಖರ್
  • ಕೂಡ್ಲೂರು ವೆಂಕಟಪ್ಪ
  • ಮೊಗಳ್ಳಿ ಗಣೇಶ್
  • ಸು.ತ.ರಾಮೇಗೌಡ
  • ಸಿ.ಪಿ.ನಾಗರಾಜ
  • ಭೂಹಳ್ಳಿ ಪುಟ್ಟಸ್ವಾಮಿ
  • ಭದ್ರಯ್ಯ ತಿಮ್ಮಸಂದ್ರ
  • ಚಕ್ಕಲೂರು ಚನ್ನಪ್ಪ
  • ಎಸ್.ರಾಮಲಿಂಗೇಶ್ವರ(ಸಿಸಿರಾ)
  • ಅಪ್ಪಗೆರೆ ವೆಂಕಟಯ್ಯ
  • ಸರಸ್ವತಿಗೌಡ

Aug 24, 2012

ಚನ್ನಪಟ್ಟಣದ ಸಾಹಿತ್ಯರತ್ನಗಳು


 ಚನ್ನಪಟ್ಟಣ ತಾಲ್ಲೂಕಿನ ಸಾಹಿತಿಗಳು / ಬರಹಗಾರರು

  • ಶ್ರೀಪಾದರಾಜರು
  • ವ್ಯಾಸರಾಯರು
  • ಚನ್ನಪಟ್ಟಣದ ಅಹೋಬಲದಾಸರು
  • ಎಂ.ಎಸ್.ಪುಟ್ಟಣ್ಣ
  • ಸಿ.ಎನ್.ಜಯಲಕ್ಷಿದೇವಿ
  • ಟಿ.ಕೆ.ರಾಮರಾವ್
  • ದೇ.ಜವರೇಗೌಡ
  • ಚ.ವಾಸುದೇವಯ್ಯ
  • ಸಿ.ಕೆ.ವೆಂಕಟರಾಮಯ್ಯ
  • ಕಾಳೇಗೌಡ ನಾಗವಾರ
  • ರಸಿಕ ಪುತ್ತಿಗೆ(ಪಿ.ಸುಬ್ರಮಣ್ಯ ಆಚಾರ್ಯ)
  • ಚಕ್ಕೆರೆ ಶಿವಶಂಕರ್
  • ಕೆ.ಕೆಂಪೇಗೌಡ
  • ಸಿ.ಆರ್.ಚಂದ್ರಶೇಖರ್
  • ಕೂಡ್ಲೂರು ವೆಂಕಟಪ್ಪ
  • ಮೊಗಳ್ಳಿ ಗಣೇಶ್
  • ಸು.ತ.ರಾಮೇಗೌಡ
  • ಸಿ.ಪಿ.ನಾಗರಾಜ
  • ಭೂಹಳ್ಳಿ ಪುಟ್ಟಸ್ವಾಮಿ
  • ಭದ್ರಯ್ಯ ತಿಮ್ಮಸಂದ್ರ
  • ಚಕ್ಕಲೂರು ಚನ್ನಪ್ಪ
  • ಎಸ್.ರಾಮಲಿಂಗೇಶ್ವರ(ಸಿಸಿರಾ)
  • ಅಪ್ಪಗೆರೆ ವೆಂಕಟಯ್ಯ
  • ಸರಸ್ವತಿಗೌಡ
  • ಶಿವರಾಮೇಗೌಡ ನಾಗವಾರ
  • ಮಾ.ಕೃ.ಮಂಜು

ಚನ್ನಪಟ್ಟಣ ಬೊಂಬೆ


ನಾನು ಚಿಕ್ಕವನಿದ್ದಾಗ ಕೇಳಿದ ಪದ್ಯದ ಸಾಲುಗಳು. ಇದನ್ನು ಬರೆದವರು ಯಾರು ಬಲ್ಲೀರಾ?

ಬೊಂಬೆ ಬೊಂಬೆ ಬಣ್ಣದ ಬೊಂಬೆ
ಹಿರಿಯರು ಕಿರಿಯರು ಮೆಚ್ಚುವ ಬೊಂಬೆ
ಫೀಂ, ಫೀಂ, ಫೀಂ ಅನ್ನುವ ಬೊಂಬೆ
 ಕ್ಯೂಂ, ಕ್ಯೂಂ, ಕ್ಯೂಂ ಅನ್ನುವ ಬೊಂಬೆ
ಚನ್ನಪಟ್ಟಣದ ಬಣ್ಣದ ಬೊಂಬೆ

ಶ್ರೀ ಜಿ.ವೆಂಕಟಸುಬ್ಬಯ್ಯನವರಿಗೆ 100 ವಸಂತ ತುಂಬಿದ ಸಂಭ್ರಮ !!



ಶ್ರೀ ಜಿ.ವೆಂಸುಬ್ಬಯ್ಯನವರ ಕಿರು ಪರಿಚಯ :






ಜನನ :
 ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ 23ನೇ ಆಗಸ್ಟ್ 1913 ರಂದು
ತಂದೆ : ಶ್ರೀ ಗಂಜಾಂ ತಿಮ್ಮಣ್ಣಯ್ಯ
ತಾಯಿ : ಶ್ರೀಮತಿ ಸುಬ್ಬಮ್ಮ
ವಿದ್ಯಾಭ್ಯಾಸ :  ಮೈಸೂರು ವಿವಿಯಿಂದ ಎಂ.ಎ.
ನೌಕರಿ : ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ - ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಗೆ ಸೇರಿ ಪ್ರಾಂಶುಪಾಲರಾಗಿ ನಿವೃತ್ತಿ




ಕೃತಿಗಳು : 
  • ನಯನಸೇನ, 
  • ಅನುಕಲ್ಪನೆ, 
  • ನಳಚಂಪು,
  • ಅಕ್ರೂರ ಚರಿತ್ರೆ, 
  • ಲಿಂಡನ್ ಜಾನ್ಸನ್ ಕಥೆ, 
  • ಸಂಯುಕ್ತ ಸಂಸ್ಥಾನ ಪರಿಚಯ, 
  • ಶಂಕರಾಚಾರ್ಯ, 
  • ಕಬೀರ್, 
  • ಇದು ನಮ್ಮ ಭಾರತ, 
  • ಸರಳಾದಾಸ್, 
  • ರತ್ನಾಕರವರ್ಣಿ, 
  • ದಾಸಸಾಹಿತ್ಯ, 
  • ವಚನಸಾಹಿತ್ಯ, 
  • ಶಾಸನ ಸಾಹಿತ್ಯ, 
  • ಷಡಕ್ಷರ ದೇವ, 
  • ಸರ್ವಜ್ಞ, 
  • ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು, 
  • ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ, 
  • ಇಂಗ್ಲೀಷ್-ಕನ್ನಡ ನಿಘಂಟು, 
  • ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, 
  • ಮುದ್ದಣ ಭಂಡಾರ ಭಾಗ-೧, 
  • ಮುದ್ದಣ ಭಂಡಾರ ಭಾಗ-೨, 
  • ಕಾವ್ಯಲಹರಿ, 
  • ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, 
  • ಕನ್ನಡವನ್ನು ಉಳಿಸಿ ಬೆಳೆಸಿದವರು, 
  • ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು, 
  • ಕವಿ ಜನ್ನ, ಡಿ.ವಿ.ಗುಂಡಪ್ಪನವರು, 
  • ಕನ್ನಡದ ನಾಯಕಮಣಿಗಳು, 
  • ಕರ್ಣಕರ್ಣಾಮೃತ, 
  • ನಾಗರಸನ ಭಗವದ್ಗೀತೆ, 
  • ತಮಿಳು ಕತೆಗಳು, 
  • ಇಗೋ ಕನ್ನಡ-೧, 
  • ಇಗೋ ಕನ್ನಡ-೨, 
  • ಮುದ್ದಣ ಪದಪ್ರಯೋಗಕೋಶ, 
  • ಎರವಲು ಪದಕೋಶ, 
  • ಕುಮಾರವ್ಯಾಸನ ಅಂತರಂಗ
... ಮುಂತಾದವು

ಅಲಂಕರಿಸಿದ ಹುದ್ದೆಗಳು : 

  • ಕ.ಸಾ.ಪ. ಕಾರ್ಯದರ್ಶಿ
  • 1964 ರಿಂದ 1969 ರವರೆಗೆ ಕ.ಸಾ.ಪ. ಅಧ್ಯಕ್ಷ ಹುದ್ದೆ
  • ಕನ್ನಡ ಸುಡಿ ಪತ್ರಿಕೆಯ ಸಂಪಾದಕರಾಗಿ ಸೇವೆ
  • ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಸಂಪಾದಕರು
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು
  • ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರು
  • ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿ
  • ಬೆಂಗಳೂರಿನಲ್ಲಿ ನಡೆದ ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. 

... ಮುಂತಾದವು

ಬಿರುದುಗಳು :

  • ನಿಘಂಟು ಸಾರ್ವಭೌಮ, 
  • ಸಂಚಾರಿಜೀವಂತಪದಕೋಶ, 
  • ಭಾಷಾವಿಜ್ಞಾನ ಪ್ರವೀಣ, 
  • ಪದಗಳಕಣಜ, 
  • ನಿಘಂಟು ನಿಸ್ಸೀಮ, 
  • ಶಬ್ಧರ್ಷಿ, 
  • ಪದಜೀವಿ, 
  • ಪದಗುರು, 
  • ನಡೆದಾಡುವ ನಿಘಂಟು, 
  • ಶಬ್ದಸಂಜೀವಿನಿ, 
  • ಶಬ್ದಬ್ರಹ್ಮ, 
  • ಶಬ್ದಸಾಗರ, 
  • ಶಬ್ದಸಹಾಯವಾಣಿ, 
  • ಶಬ್ದಗಾರುಡಿಗ, 
  • ಶಬ್ದಶಿಲ್ಪಿ, 
  • ಚಲಿಸುವ ಜ್ಞಾನಭಂಡಾರ,
  • ಕನ್ನಡದ ಕಿಟ್ಟಲ್
... ಮುಂತಾದವು

ಪ್ರಶಸ್ತಿಗಳು :

  •  ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
  • ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 
  • ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ, 
  • ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 
  • ೧೯೯೮ ರಲ್ಲಿ ಶಂಬಾ ಪ್ರಶಸ್ತಿ, 
  • ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ, 
  • ೧೯೯೯ ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ, 
  • ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ, 
  • ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ, 
  • ೨೦೦೩ ರಲ್ಲಿ ಮುದ್ದಣ ಪುರಸ್ಕಾರ, 
  • ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ, 
  • ೨೦೦೫ ರಲ್ಲಿ  ನಾಡೋಜ ಪ್ರಶಸ್ತಿ, 
  • ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ, 
  • ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, 
  • ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, 
  • ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ 
... ಮುಂತಾದವು

ಕೃಪೆ: ಸ್ಪರ್ಧಾರ್ಥಿ

Aug 21, 2012

10 ಸಾವಿರ ಸಂಭ್ರಮ

ಆತ್ಮೀಯರೇ ನನ್ನ ಈ ಬ್ಲಾಗ್ ಇಂದಿಗೆ ಕನ್ನಡಿಗರಿಂದ ಹತ್ತು ಸಾವಿರ ಬಾರಿ ವೀಕ್ಷಣೆಯಾಗಲ್ಪಟ್ಟಿದೆ. ನಿಮ್ಮ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಹೀಗೆ ನನ್ನ ಬರಹಗಳು ಬ್ಲಾಗಿನಲ್ಲಿ ಮುಂದುವರಿಯುತ್ತವೆ.

ಧನ್ಯವಾದಗಳೊಂದಿಗೆ,
ನಿಮ್ಮವ,
-ಮಾ.ಕೃ.ಮಂಜು
makrumanju@gmail.com

ನಾಡಿನ ಗರ್ಭದಲ್ಲಿ ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವು

ನಾಡಿನ ಗರ್ಭದಲ್ಲಿ ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವು…
- ಬಿ. ಶ್ರೀಪಾದ ಭಟ್

“ಜಟೆಯಿಂದಾಗಲೀ, ಗೋತ್ರದಿಂದಾಗಲೀ, ಹುಟ್ಟಿನಿಂದಾಗಲೀ ಯಾರೂ ಬ್ರಾಹ್ಮಣರಾಗುವುದಿಲ್ಲ, ಇದು ಶುದ್ದ ಸುಳ್ಳು, ಕೇವಲ ಧರ್ಮಗ್ರಂಥಗಳಲ್ಲಿ ಬರೆದಿದೆ ಎಂದ ಮಾತ್ರಕ್ಕೆ ತಲಾಂತರಗಳಿಂದ, ನಿಮ್ಮ ಹಿರಿಯರಿಂದ ನಡೆದುಕೊಂಡು ಬಂದ ಪದ್ಧತಿ ಎಂದ ಮಾತ್ರಕ್ಕೆ ಅವುಗಳನ್ನು ಒಪ್ಪಿಕೊಳ್ಳಲೇ ಬೇಡಿ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ.” –ಬುದ್ಧ
“ಯಾರು ಬಹಳ ನಮ್ರರಾಗಿ ಕೆಳಕೆಳಗೆ ಇಳಿದರೋ ಅವರೆಲ್ಲ ಪಾರಾದರು, ಉಚ್ಚಕುಲೀನರಾಗಿದ್ದು ಅಭಿಮಾನದ ದೋಣಿ ಹತ್ತಿದರೋ ಅವರು ಮುಳುಗಿದರು.” –ಕಬೀರ
“ಆಧುನಿಕ ಹಾಗೂ ಮಾನವೀಯ ಮೌಲ್ಯಗಳಿಗೆ ಹಿಂದೂ ಧರ್ಮದ ಅಂತರಂಗದಲ್ಲಿ ಸ್ಥಳವೇ ಇಲ್ಲ.ಈ ಹಿಂದೂ ಧರ್ಮ ಸಹೋದರತೆ ಹಾಗೂ ಸಮಾನತೆಯನ್ನು ಸದಾ ಹತ್ತಿಕ್ಕುತ್ತುರುತ್ತದೆ. ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಗಳನ್ನು ತೆಗೆದರೆ ಈ ಹಿಂದೂ ಧರ್ಮದಲ್ಲಿ ಇನ್ನೇನು ಉಳಿಯುವುದಿಲ್ಲ.” –ಅಂಬೇಡ್ಕರ್
“ಅಸ್ಪೃಶ್ಯತೆ ಹಿಂದೂ ಧರ್ಮದ ಭಾಗವೆಂದು ಯಾರಾದರೂ ಸಾಬೀತು ಮಾಡಿದರೆ ಅಂದೇ ಆ ಧರ್ಮ ನನಗೆ ಬೇಕಿಲ್ಲವೆಂದು ಸಾರುವೆ.” –ಮಹಾತ್ಮ ಗಾಂಧಿ
“ಭಾರತೀಯತೆಯ ಹೆಸರಿನಲ್ಲಿ ಎಲ್ಲ ಜಾತಿ-ಮತ ಇತ್ಯಾದಿಗಳನ್ನು ಉಳಿಸಿಕೊಳ್ಳೋದಾದರೆ, ನನಗೆ ಆ ಭಾರತೀಯತೇನೇ ಬೇಡ. ನನಗೆ ಭಾರತೀಯನಾಗೋದಂದ್ರೆ ವಿಶ್ವ ಮಾನವನಾಗೋದು.”  –ಕುವೆಂಪು
“ಗಾಂಧೀಜಿಯವರು ಆಸ್ತಿಕರಾಗಿಲ್ಲದಿದ್ದರೆ ಮೇಲ್ಜಾತಿಯವರು ಹಾಗೂ ಭಾರತದ ಸಂಘಪರಿವಾರ ಬಾಪೂ ಅವರನ್ನು ಸೈದ್ಧಾಂತಿಕವಾಗಿ ಎಂದೋ  ಮುಗಿಸಿಬಿಡುತ್ತಿದ್ದರು.” –ಅಸ್ಗರ್ ಅಲಿ ಇಂಜಿನಿಯರ್
ಬಹಳ ಹಿಂದೆ ಲಂಕೇಶರ ಬ್ರಾಹ್ಮಣ ಸ್ನೇಹಿತರೊಬ್ಬರು ಲಂಕೇಶರ ಬಳಿ ಹೇಳುತ್ತಿದ್ದರು, “ಸರ್ ನಾನು ಕೂಡ ದೇವಸ್ಥಾನಗಳಿಗೆ ಹೋಗುವುದಿಲ್ಲ, ಬಿಯರ್ ಕುಡಿಯುತ್ತೇನೆ, ಜನಿವಾರವನ್ನು ಕೂಡ ಹಾಕುವುದಿಲ್ಲ.” ಅದಕ್ಕೆ ಲಂಕೇಶರು ಅತ್ಯಂತ ಮಾರ್ಮಿಕವಾಗಿ ಹೇಳಿದ್ದು “ಅಲ್ಲ ಕಣಯ್ಯ, ಇದೆಲ್ಲ ಸರಿ ಆದರೆ ನಿನ್ನ ಮನಸ್ಸಿಗೆ ಹಾಕಿಕೊಂಡ ಜನಿವಾರ ಎಂದು ತೆಗೆಯುತ್ತೀಯ?”
ಅಷ್ಟೇ ಅಲ್ಲವೆ? ಸಂಪ್ರದಾಯನಿಷ್ಟ ಬ್ರಾಹ್ಮಣರು ಮತ್ತು ಆಧುನಿಕರೆನಿಸಿಕೊಂಡ ಬ್ರಾಹ್ಮಣರು ಇಬ್ಬರೂ ತಮ್ಮ ಮನಸ್ಸಿಗೆ ಹಾಕಿಕೊಂಡ ಜನಿವಾರ ಕಳಚಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಇವರು ಜೀವವಿರೋಧಿಗಳು ಮತ್ತು ವಿತಂಡವಾದಿಗಳಾಗಿ ನಿಂತ ನೀರಾಗುತ್ತಾರೆ. ತಮ್ಮ ಸಂಪ್ರದಾಯ,ತಮ್ಮ ಧರ್ಮಭೀರುತ್ವ, ತಮ್ಮ ಭೂತಗಳನ್ನು ನೆನೆಸಿಕೊಳ್ಳುವಾಗ, ಅದನ್ನು ವೈಭವೀಕರಿಸಿ ಮಾತನಾಡುವಾಗ, ಮೀಸಲಾತಿಯನ್ನು ಹಂಗಿಸಿ ಕೊಂಕು ನುಡಿಯುವಾಗ, ಶೂದ್ರರನ್ನು, ತಳಸಮುದಾಯದವರನ್ನು ವಿನಾಕಾರಣ ಅವಮಾನಿಸುವಾಗ ಈ ಸಂಪ್ರದಾಯನಿಷ್ಟ ಬ್ರಾಹ್ಮಣರು ಹಾಗೂ ಆಧುನಿಕ ಬ್ರಾಹ್ಮಣರು ಒಂದೇ ಧ್ವನಿಯಲ್ಲಿ, ಸಮಾನ ಪಾತಳಿಯಲ್ಲಿ ಮಾತನಾಡುತ್ತಾರೆ. ಇವರು ಎಂಜಲು ಮಡೆಸ್ನಾನದಂತಹ ಅಮಾನವೀಯ ಆಚರಣೆಗಳ ಬಗ್ಗೆ ಸಂಪ್ರದಾಯದ ಹೆಸರಿನಲ್ಲಿ ಅದರ ಪರವಹಿಸಿಯೋ ಇಲ್ಲವೇ ಜಾಣ ಮೌನ, ಮರೆ ಮೋಸದ ಮುಖವಾಡವನ್ನು ತೊಡುತ್ತಾರೆ.
40ರ ದಶಕದಲ್ಲಿ ಕುವೆಂಪುರವರ ಸಮತಾವಾದದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಎತ್ತಿ ಹಿಡಿಯುವ, ಪುರೋಹಿತಶಾಹಿಯ ಅನೀತಿ ಒಳ ಹುನ್ನಾರಗಳನ್ನು ತೋರಿಸುವ ಜನಪರ ನಾಟಕ “ಶೂದ್ರ ತಪಸ್ವಿ”ಯನ್ನು ಆಗ ಎಲ್ಲಿ ಇದು ಸನಾತನ ವೈದಿಕ ಧರ್ಮವನ್ನು ಶಿಥಿಲಗೊಳಿಸುತ್ತದೆಯೋ ಎನ್ನುವ ಭೀತಿಯಲ್ಲಿ ಮಾಸ್ತಿಯವರು ವಿರೋಧಿಸಿದಾಗಿನಿಂದ ಹಿಡಿದು, ಕುವೆಂಪುರವರು “ನಿರಂಕುಶಮತಿಗಳಾಗಿ”, “ನೂರು ದೇವರನ್ನು ನೂಕಾಚೆ ದೂರ,” ಎಂದು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದಾಗ ಅದನ್ನು ವೈದಿಕ ನೆಲೆಗಟ್ಟಿನಲ್ಲಿ ನಿಂತು ವಿರೋಧಿಸಿದ ಯಥಾಸ್ಥಿತಿವಾದಿಗಳಾದ ದೇವುಡುರವರಿಂದ ಹಿಡಿದು, ತಮ್ಮ ಗುಪ್ತ ಕಾರ್ಯಸೂಚಿಗಳಿಗೆ, ವೈದಿಕ ಚಿಂತನೆಗಳಿಗೆ ಧಕ್ಕೆಯುಂಟಾಗುತ್ತಿದೆ ಎನ್ನುವ ಭ್ರಮೆಯಿಂದ ಎಚ್.ನಾಗವೇಣಿಯವರಂತಹ ಕನ್ನಡದ ಪ್ರಮುಖ ಲೇಖಕಿಯ ವಿರುದ್ಧ, ಅವರ ಅರ್ಥಪೂರ್ಣ ಕಾದಂಬರಿ “ಗಾಂಧಿ ಬಂದ”ದ ವಿರುದ್ಧ ಹಾಸ್ಯಾಸ್ಪದವಾಗಿ ಚೀರಾಡುವುದು, ಅಂದಿನಿಂದ ಇಂದಿನವರೆಗೆ ಇವರ ದುರಂತದ ಮುಖವನ್ನು ತೋರಿಸುತ್ತದೆ.
ಈ ಎರಡೂ ವಿಷಯಗಳಲ್ಲಿಯೂ ಈ ಬಿಲ್ಲುವಿದ್ಯಾಪ್ರವೀಣರು ತಳಸಮುದಾಯದವರನ್ನೂ, ಶೂದ್ರರನ್ನು ಬಾಣಗಳಂತೆ ಬಳಸಿಕೊಂಡಿದ್ದಾರೆ. ಕಡೆಗೂ ಈ ರಕ್ತ ಸಿಕ್ತ ಬಾಣ ಮಾತ್ರ ತನ್ನ ಕತ್ತು ಮುರಿದುಕೊಳ್ಳುತ್ತದೆ. ಆದರೆ ಅದನ್ನು ಪ್ರಯೋಗಿಸಿದಾತ ಶ್ರೇಷ್ಟ ಬಿಲ್ಲುಗಾರನೆನೆಸಿಕೊಳ್ಳುತ್ತಾನೆ. ಪ್ರಾಚೀನ ಭಾರತದಲ್ಲಿ, ಬಹುವಾಗಿ ಆಧುನಿಕ ಭಾರತದಲ್ಲಿ, ವರ್ತಮಾನದಲ್ಲಿಯೂ ಕೂಡ ಬ್ರಾಹ್ಮಣರು ಈ ಪರಿಣಿತ ಬಿಲ್ಲುಗಾರರಾಗಿಯೇ ಗುರುತಿಸಲ್ಪಡುತ್ತಾರೆ.
ಅರ್ವೆಲ್ ಹೇಳಿದ ಹಾಗೆ “ದ್ವಂದಾಲೋಚನೆಯೆಂದರೆ ಏಕಕಾಲದಲ್ಲಿ,ಮನಸ್ಸಿನಲ್ಲಿ ಎರಡು ತದ್ವಿರುದ್ಧ ನಂಬಿಕೆಗಳನ್ನು ಇಟ್ಟುಕೊಳ್ಳುವುದು ಮತ್ತು ಅವುಗಳನ್ನು ಸ್ವೀಕರಿಸುವುದು. ಈ ದ್ವಂದಾಲೋಚನೆಯ ಉಪಯೋಗದ ಫಲವಾಗಿ ತಾನು ವಾಸ್ತವವನ್ನು ಭಂಗಗೊಳಿಸುತ್ತಿಲ್ಲವೆನ್ನುವ ಸಮಾಧಾನ ಅವನಿಗಿರುತ್ತದೆ.” ಎನ್ನುವ ಮಾತು ಇಂದಿನ ಆಧುನಿಕತೆಯ ವಿಚಾರಗಳನ್ನು ಬೆಳೆಸಿಕೊಂಡ ಅನೇಕ ಬ್ರಾಹ್ಮಣರ ಪಾಲಿಗೆ ಸತ್ಯ. Intellectual pride ಅನ್ನು  ಬೇರೆಯವರಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುವುದು ಆಧುನಿಕತೆಯ ಒಂದು ಕೆಟ್ಟ ಚಟ. ಆದರೆ ಈ ದುಷ್ಚಟಕ್ಕೆ ತಳಸಮುದಾಯದವರು ಬಲಿಯಾಗುತ್ತಿರುವುದು ಮಾತ್ರ ಒಂದು ದುರಂತ. ಇದನ್ನು 2002 ರಲ್ಲಿ ಜರುಗಿದ ಗುಜರಾತ್ ಹತ್ಯಾಕಾಂಡದಲ್ಲಿ ಸ್ಪಷ್ಟವಾಗಿ ಗುರಿತಿಸಬಹುದು. ಅಲ್ಲಿ ಮುಸ್ಲಿಂರ ವಿರುದ್ಧ ಜನಾಂಗೀಯ ದ್ವೇಷ ಹುಟ್ಟು ಹಾಕಿದವರು, ವಿಷಪೂರಿತ ಭಾಷಣ ಮಾಡಿ ರೊಚ್ಚಿಗೆಬ್ಬಿಸಿದವರು ಸಂಘಪರಿವಾರದವರು, ಮೇಲ್ಜಾತಿಯ ಜನ, ಆದರೆ ವಿನಾಕಾರಣ ಈ ರೀತಿ ರೊಚ್ಚಿಗೆದ್ದು ಅನಗತ್ಯವಾಗಿ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿ, ಕೊಲೆ ಕೇಸಿನಲ್ಲಿ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿರುವವರು ದಲಿತರು, ಆದಿವಾಸಿಗಳು.
ಅದಕ್ಕೇ ಕುವೆಂಪು ಶೂದ್ರರಿಗೆ, ದಲಿತರಿಗೆ ಅತ್ಯಂತ ಮಾರ್ಮಿಕವಾಗಿ ಹೇಳಿದ್ದು “ಈ ಪುರೋಹಿತಶಾಹಿಯನ್ನು, ವೈದಿಕ ಪರಂಪರೆಯನ್ನು ಎದುರಿಸಬೇಕೆಂದರೆ ಮೊದಲು ನಿಮ್ಮ ತಲೆಗಳನ್ನು ಶುಚಿಗೊಳಿಸಿಕೊಳ್ಳಿ, ನಿಮ್ಮ ತಲೆಯಲ್ಲಿರುವ ಪುರೋಹಿತ ಪರಂಪರೆಯ ಬಗೆಗಿನ, ಪಂಚಾಗದ ಬಗೆಗಿನ, ಬ್ರಾಹ್ಮಣೀಕರಣದ ಬಗೆಗಿನ ಗುಪ್ತ ವ್ಯಾಮೋಹವನ್ನು ಸಂಪೂರ್ಣವಾಗಿ ತೊಡೆದು ಹಾಕುವವರೆಗೂ ನೀವು ಈ ಪುರೋಹಿತಶಾಹಿ ಎಂಬ ಹುಲಿಯನ್ನು ಎದುರಿಸುವುದು ಒಂದು ಸೋಲೇ ಸರಿ.”
ಇದು ಅಂದಿಗೆ ಅಲ್ಪ ಪ್ರಮಾಣದಲ್ಲಿದ್ದರೆ ಇಂದು 21ನೇ ಶತಮಾನದಲ್ಲಿ ಶೂದ್ರರಲ್ಲಿ, ದಲಿತರಲ್ಲಿನ ಬ್ರಾಹ್ಮಣೀಕರಣ ತಾರಕಕ್ಕೇರುತ್ತಿದೆ. ಇದನ್ನು ನಾವು ಶ್ರೀರಾಮುಲು ಎನ್ನುವ ಹಿಂದುಳಿದ ಶೂದ್ರ ರಾಜಕಾರಣಿಯ ಮುಖಾಂತರ ವಿವೇಚಿಸಬಹುದು. ಆಳದಲ್ಲಿ ಮುಗ್ಧರಂತೆ, ಮಗುವಿನಂತೆ ಕಾಣುವ ಈ ಶ್ರೀರಾಮುಲು ಇಂದು ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟ, ಹುಂಬ, ಗೊತ್ತುಗುರಿಯಿಲ್ಲದ, ಅರ್ಥಹೀನ ರಾಜಕಾರಣಿಯಾಗಿ ಕಂಗೊಳಿಸುತ್ತಾರೆ. ಇವರು ತಮ್ಮ ಹುಂಬತನದಿಂದ ಗಣಿಚೋರರಾದ ರೆಡ್ಡಿಗಳ ಜೊತೆ ಸೇರಿಕೊಂಡು ಇಡೀ ಬಳ್ಳಾರಿಯನ್ನು ರೆಡ್ಡಿಗಳ ಸರ್ವಾಧಿಕಾರತ್ವಕ್ಕೆ ವಹಿಸಲು ನೆರವಾದರು. ಬಿಜೆಪಿಗೆ ಆಪರೇಷನ್ ಕಮಲ ರುಚಿ ತೋರಿಸಿ ನಮ್ಮ ರಾಜ್ಯದಲ್ಲಿಯೇ ಭ್ರಷ್ಟತೆಗೆ ಒಂದು ಹೊಸ ಪದ್ಧತಿಯನ್ನೇ ಸೃಷ್ಟಿಸಿದರು. ಇಂದು ಬಳ್ಳಾರಿಯ ಉಪಚುನಾವಣೆಯನ್ನು ಅಸಹ್ಯವಾಗಿ, ಭ್ರಷ್ಟಾಚಾರದಿಂದ ಗೆದ್ದಿರುವ ಈ ಶ್ರೀರಾಮುಲು ಇನ್ನು ತನ್ನ ಆನೀತಿ, ಭ್ರಷ್ಟ ಗೆಲುವಿನ ಠೇಕಾಂರದಿಂದ, ಮತ್ತದೇ ತನ್ನ ಗೊತ್ತು ಗುರಿಯಿಲ್ಲದ ಅಪ್ರಬುದ್ಧ ರಾಜಕಾರಣದಿಂದ ಇನ್ನು ಈ ರಾಜ್ಯದ ರಾಜಕಾರಣದಲ್ಲಿ ಹುಟ್ಟು ಹಾಕಲಿರುವ ಅನಾಹುತಾಕಾರಿ, ಆತ್ಮಹತ್ಯಾತ್ಮಕ ನಡೆಗಳು, ಆ ಮೂಲಕ ಹುಟ್ಟಿಕೊಳ್ಳುವ ರಾಜಕೀಯ ಅತಂತ್ರ ಸ್ಥಿತಿ, ಇಂತಹ ಬೌದ್ಧಿಕ ದಿವಾಳಿತನದ ಶೂದ್ರ ನಾಯಕನ ಹಿಂದೆ ಕೇವಲ ಆ ಕ್ಷಣದ ಉತ್ಸಾಹದಲ್ಲಿ ನೆರೆಯುವ, ಭವಿಷ್ಯದ ಅರಿವೇ ಇಲ್ಲದ ಹಿಂದುಳಿದ ವರ್ಗಗಳ ಜನತೆ. ಈ ತರಹದ ನಾಯಕನನ್ನು ಅರಾಧಿಸುವ ಜನತೆ ಆ ಮೂಲಕ ಪ್ರಜಾಪ್ರಭುತ್ವಕ್ಕೆ ತಂದೊಡ್ಡುವ ಸೋಲು. ಅತ್ತ ಕುಮಾರಾಸ್ವಾಮಿ ಅವರ ನಿಗೂಢ, ಅವಾಂತಕಾರಿ, ಸ್ವೇಚ್ಛಾಚಾರಿ ನಡೆಗಳು ಪ್ರಜ್ಞಾವಂತರಲ್ಲಿ ನಡುಕ ಹುಟ್ಟಿಸುತ್ತಿವೆ.
ಇವು ಈ ಶೂದ್ರ ಶಕ್ತಿಗಳು ಹುಟ್ಟುಹಾಕುತ್ತಿರುವ ದುರಂತಮಯ ವರ್ತಮಾನ ಹಾಗೂ ಭವಿಷ್ಯ. ಇಲ್ಲಿ ಇವರೇ ನಿಗೂಢ ಬಾಣ ಹಾಗೂ ಬಿಲ್ಲು. ಆದರೆ ನಿಜದ ಬಿಲ್ಲುಗಾರರಾದ ಸುಷ್ಮಾ ಸ್ವರಾಜ್, ಅಡ್ವಾನಿ, ಅನಂತಕುಮಾರ್, ನಾಗಪುರದ ಕೇಶವ ಕೃಪಾ, ಹಾಗು ಸಂಘ ಪರಿವಾರ ಈ ಶೂದ್ರರನ್ನು ಉಂಡ ನಂತರ ಬಾಳೆ ಎಲೆ ಬಿಸಾಡುವಂತೆ ಬಿಸಾಡಿ ಈಗ ತಾವು ಮಾತ್ರ ಡಿಟರ್ಜೆಂಟ್ ಸೋಪಿನಂತೆ ಹುಸಿ ಬಿಳುಪನ್ನು ತೋರುತ್ತ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಕೈ ಚಾಚುತ್ತಿದ್ದಾರೆ.
ಬಲಿಷ್ಟ ಜಾತಿಗಳ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಉತ್ತರ ಭಾರತದ ಅಹಿಂದ ವರ್ಗಗಳು 90ರ ದಶಕದಲ್ಲಿ ಹಾಗೂ ಇಲ್ಲಿವರೆಗೂ ಅಲ್ಲಿನ ಸಮಯಸಾಧಕ, ಜಾತೀವಾದಿ ರಾಜಕಾರಣಿಗಳ ಕೈಯಲ್ಲಿ ಸಿಲುಕಿಕೊಂಡು ಈಗ ಅತ್ಯಂತ ಉಸಿರುಗಟ್ಟಿಸುವ, ಕೊಳೆತ ಸ್ಥಿತಿಗೆ ತಲುಪುತ್ತಿರುವುದು ನಮ್ಮ ರಾಜ್ಯದ ಅಹಿಂದ ವರ್ಗಗಳಿಗೆ ಪಾಠವಾಗದಿದ್ದರೆ ಇಲ್ಲಿ ಭವಿಷ್ಯದಲ್ಲಿ ಪ್ರತಿಗಾಮಿ ಪರಿಸ್ಥಿತಿಯೇ ಉಂಟಾಗುವುದು, ಜೊತೆಗೆ ಈ ನಮ್ಮ ನಾಡು ತನ್ನ ಗರ್ಭದಲ್ಲಿ ತುಂಬಿಕೊಳ್ಳಲಿರುವುದು ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವುಗಳನ್ನು. ಇದು ಗರ್ಭಪಾತವಾದರೆ ಅದರ ತೀವ್ರವಾದ ಮೊದಲ ಹಾಗೂ ಕೊನೆಯ ಹೊಡೆತ ಬೀಳುವುದು ಈ ಅಹಿಂದ ವರ್ಗಗಳಿಗೆ. ಇದರಿಂದ ಉಂಟಾಗುವ ದೊಡ್ದ ದುರಂತ ಇಡೀ ರಾಜ್ಯವನ್ನು ಮತ್ತೆ ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ.
ಇಲ್ಲಿ ಒಂದು ಕಾಲದಲ್ಲಿ ಸ್ವಘೋಷಿತವಾಗಿಯೇ ಸಹಜವಾಗಿಯೇ ಹುಟ್ಟಿಕೊಂಡ, ಬೆಳೆದುಬಂದ ಸಮಾಜವಾದಿ ತತ್ವಗಳು, ಜನಪರ ಕಾಳಜಿಗಳು, ಪ್ರಗತಿಪರ ನೀತಿಗಳು, ನ್ಯಾಯವಂತಿಕೆ ಕೊನೆ ಉಸಿರೆಳೆಯುತ್ತಿವೆ. ಏಕೆಂದರೆ ಕಳೆದ 5 ವರ್ಷಗಳಿಂದ ಕರ್ನಾಟಕದಲ್ಲಿ ಆಡಳಿತ ಯಂತ್ರವೇ ಇಲ್ಲ. ಇಲ್ಲಿ ಮನೆಯಲ್ಲಿ ಮನೆಯೊಡೆಯನಿದ್ದನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ಹೊಸ್ತಿಲಲ್ಲಿ ಹುಲ್ಲು ತುಂಬಿರುವ ಮನೆಯಲ್ಲಿ ಮನೆಯೊಡೆಯನಿಲ್ಲವೇ ಇಲ್ಲ. ಅಭಿವೃದ್ದಿಯ ಯೋಜನೆಗಳು, ಕನಸುಗಳು, ಸಮತಾವಾದದ ನೀತಿ ಕಾರ್ಯಗತವಾಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ಪ್ರಭುತ್ವ ಇದನ್ನು ಗಣನೆಗೂ ಕೂಡ ತೆಗೆದುಕೊಂಡಿಲ್ಲ, ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಅವುಗಳನ್ನು ಯಾರು ಕೂಡ ಕನಸಿರಲೂ ಇಲ್ಲ. ಇದು ಕಟುವಾದ, ಭೀಕರ ವಾಸ್ತವ. ಇದು ಉತ್ಪ್ರೇಕ್ಷೆಯಲ್ಲ. ಹೊಸ ನಡೆಗೆ, ಹೊಸ ಚಿಂತನೆಗೆ, ಹೊಸ ಕನಸುಗಳಿಗೆ, ಹೊಸ ಪಲ್ಲಟಗಳಿಗೆ, ಹೊಸ ನಾಯಕನಿಗೆ ಕಾಯುತ್ತಿದೆ ಈ ರಾಜ್ಯ. ಪ್ರಗತಿಪರ ಸಂಘಟನೆಗಳಿಗೆ,ವೈಚಾರಿಕ ಶಕ್ತಿಗಳಿಗೆ ಇದು ಅತ್ಯಂತ ಸವಾಲಿನ ಆದರೆ ಅಷ್ಟೇ ಜೀವಂತಿಕೆಗಾಗಿ space ಇರುವ ಕಾಲ ಕೂಡ.
ಕೃಪೆ : http://www.vartamaana.com

Aug 8, 2012

ಅಲಂಕಾರ-ಅರ್ಥಾಲಂಕಾರಗಳು

ಅರ್ಥಾಲಂಕಾರಗಳು
() ಉಪಮಾಲಂಕಾರ
         ಈ ಕೆಳಗಿನ ಮಾತುಗಳನ್ನು ಗಮನಿಸಿರಿ.
(i) ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ.
(ii) ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ.
    ಮೊದಲನೆಯ ವಾಕ್ಯದಲ್ಲಿ ಮಗುವಿನ ಮುಖದಲ್ಲಿನ ಅಹ್ಲಾದಕತ್ವವೂ, ಚಂದ್ರನಲ್ಲಿರುವ ಅಹ್ಲಾದಕತ್ವವೂ ಸಮಾನವಾಗಿರುವುದರಿಂದ ಮಗುವಿನ ಮುಖವನ್ನು ಚಂದ್ರನಿಗೆ ಹೋಲಿಸಿದೆ.  ಚಂದ್ರನನ್ನು ನೋಡಿದಾಗ ಉಂಟಾಗುವ ಮನೋಹರತ್ವವು ಮಗುವಿನ ಮುಖ ನೋಡಿದಾಗಲೂ ಆಗುತ್ತದೆ.  ಈ ಅರ್ಥ ಚಮತ್ಕಾರ ಆ ವಾಕ್ಯದಲ್ಲಿ ಅಡಗಿದೆ.
ಎರಡನೆಯ ವಾಕ್ಯದಲ್ಲಿ ಹಾವಿಗೆ ಹಾಲೆರೆದರೆ ವಿಷವೇ ವೃದ್ಧಿಯಾಗುವುದಲ್ಲದೆ ಬೇರಿಲ್ಲ.  ಇದರ ಹಾಗೆಯೇ ನೀಚರಿಗೆ ಉಪಕಾರ ಮಾಡಿದರೆ ಅವರು ಅಪಕಾರವನ್ನೇ ಮಾಡುವರಲ್ಲದೆ ಪ್ರತಿಯಾಗಿ ಉಪಕಾರ ಮಾಡುವುದಿಲ್ಲ.  ಇಲ್ಲಿ ನೀಚರಿಗೆ ಮಾಡಿದ ಉಪಕಾರವನ್ನು ಹಾವಿಗೆ ಹಾಲೆರೆಯುವ ಕ್ರಿಯೆಗೆ ಹೋಲಿಸಲಾಗಿದೆ.  ಹೀಗೆ ಬರುವ ಹೋಲಿಕೆಗಳಿಗೆ ‘ಉಪಮಾನ’ ವೆನ್ನುತ್ತಾರೆ.  ಯಾವುದಕ್ಕೆ ಈ ಹೋಲಿಕೆಯನ್ನು ಕೊಡುವೆವೋ ಅದು ‘ಉಪಮೇಯ’.  ಅಂತೆ ಹಾಗೆ-ಎಂದು ಹೋಲಿಕೆಗೆ ಸಂಬಂಧ ಕಲ್ಪಿಸುವ ಶಬ್ದಗಳು ಉಪಮಾವಾಚಕಗಳೆನಿಸುವುವು.  ಈ ಹೋಲಿಕೆಗಳಲ್ಲಿ ಬರುವ ಸಮಾನತೆಯೇ ಸಮಾನಧರ್ಮವೆನಿಸುವುದು.
ಉದಾಹರಣೆಗೆ:                                                ಮೊದಲನೆ ವಾಕ್ಯದಲ್ಲಿ
(೧)ಮಗುವಿನ ಮುಖಉಪಮೇಯ
(೨)ಚಂದ್ರಉಪಮಾನ
(೩)ಮಗುವಿನ ಮುಖ ಮತ್ತು ಚಂದ್ರನಲ್ಲಿರುವ ಆಹ್ಲಾದಕತ್ವಸಮಾನಧರ್ಮ, (ಸಾಧಾರಣಧರ್ಮ)
(೪)ಚಂದ್ರನ ಮುಖದಂತೆ ಎಂಬಲ್ಲಿರುವ ಅಂತೆ ಎಂಬ ಶಬ್ದವೇಉಪಮಾವಾಚಕ
ಎರಡನೆಯ ವಾಕ್ಯದಲ್ಲಿ
(೧)ನೀಚರಿಗೆ ಮಾಡಿದ ಉಪಕಾರಉಪಮೇಯ
(೨)ಹಾವಿಗೆ ಹಾಲೆರೆಯುವಿಕೆಉಪಮಾನ
(೩)ಹಾವಿನಲ್ಲಿ ವಿಷಹೆಚ್ಚುವಿಕೆ ನೀಚರಿಂದ ಅಪಕಾರವಾಗುವಿಕೆ- ಎಂಬ ಎರಡರಿಂದಲೂ ಪರಿಣಾಮದಲ್ಲಿ ಅಪಕಾರವಾಗುವಿಕೆಸಮಾನಧರ್ಮ (ಸಾಧಾರಣಧರ್ಮ)
(೪)ಹಾಲೆರದಂತೆ ಎಂಬಲ್ಲಿ ಬಂದಿರುವ ಅಂತೆ ಎಂಬುದುಉಪಮಾವಾಚಕ ಶಬ್ದ
ಹೀಗೆ ಈ ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಉಪಮಾವಾಚಕ – ಈ ನಾಲ್ಕೂ ಬಂದಿದ್ದರೆ ಅದು ಪೂರ್ಣೋಪಮಾಲಂಕಾರವೆನಿಸುವುದು[1].  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಉಪಮಾಲಂಕಾರ:- "ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರವೆನಿಸುವುದು"[2]. (ಹೋಲಿಕೆಯೆಂದರೆ ಆಕರ್ಷಕವಾದ ಹೋಲಿಕೆ) ಉದಾಹರಣೆ :- (i) ಬಿರುಗಾಳಿಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ| ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿದೆರೆಗೆ ಬೀಳದಮುನ್ನ ಹಮ್ಮೈಸಿಬಿದ್ದಳಂಗನೆ ಧರೆಗೆ ನಡುನಡುಗುತ||
(-ಜೈಮಿನಿ ಭಾರತ)
(ಶ್ರೀರಾಮಚಂದ್ರನ ಮಾತಿನಂತೆ ಸೀತಾದೇವಿಯನ್ನು ಕಾಡಿಗೆ ಬಿಟ್ಟುಬರಲು ಹೋದ ಲಕ್ಷ್ಮಣನು ಶ್ರೀರಾಮನ ಅಪ್ಪಣೆಯನ್ನು ಸೀತಾದೇವಿಗೆ ತಿಳಿಸಿದ ಸಂದರ್ಭದಲ್ಲಿ ನಡೆದ ಘಟನೆಯಿದು.)
ಅರ್ಥ:-ಬಿರುಗಾಳಿ ಬೀಸಲಾಗಿ, ಗೊನೆಬಿಟ್ಟ ಬಾಳೆ ಮರವು ಅಲ್ಲಾಡಿ ಮುರಿದು ಭೂಮಿಗೆ ಬೀಳುವಂತೆ ತುಂಬು ಗರ್ಭಿಣಿಯಾದ ಸೀತಾದೇವಿಯು ಲಕ್ಷ್ಮಣನ ಮಾತು ಕರ್ಣಪಟಲ (ಕಿವಿದೆರೆ) ಕ್ಕೆ ಬೀಳದ ಮುನ್ನ ಹಮ್ಮೈಸಿ ನಡುನಡುಗಿ ಭೂಮಿಗೆ ಬಿದ್ದಳು.
ಇಲ್ಲಿ ಭೂಮಿಗೆ ಬಿದ್ದ ಸೀತಾದೇವಿ ಉಪಮೇಯ’ ಫಲಿತ ಬಾಳೆಯ ಮರ ಉಪಮಾನ’ ಧರೆಗೆ ಬೀಳುವಿಕೆಯೇ ಸಾಧಾರಣಧರ್ಮ’ (ಸಮಾನಧರ್ಮ).  ‘ಅಂತೆ’ ಎಂಬುದೇ ಉಪಮಾವಾಚಕ.  ಆದುದರಿಂದ ಇದು ಪೂರ್ಣೋಪಮಾಲಂಕಾರವಾಯಿತು.
ಉದಾಹರಣೆ:- (ii)
ಬಾಲಕರಿಲ್ಲದ ಬಾಲಿದ್ಯಾತರ ಜನ್ಮ|
ಬಾಡಿಗೆಯೆತ್ತು ದುಡಿದಂಗ| ಬಾಳೆಲೆಯ|
ಹಾಸ್ಯುಂಡು ಬೀಸಿ ಒಗೆದಂಗ||
(-ಜಾನಪದ ಸಾಹಿತ್ಯದಿಂದ)
ಅರ್ಥ:- ಬಾಲಕರಿಲ್ಲದ ಬಾಲೆಯ ಜನ್ಮವೇತರದು? ಬಾಡಿಗೆ ಎತ್ತು ದುಡಿದ ಹಾಗೆ.  ಮತ್ತು ಬಾಳೆಯೆಲೆಯನ್ನು ಹಾಸಿ ಊಟಮಾಡಿ ಬೀಸಿ ಒಗೆದ ಹಾಗೆ.  ಇಲ್ಲಿ ಮಕ್ಕಳಿಲ್ಲದ ಹೆಣ್ಣುಮಗಳಿಗೆ ಬಾಡಿಗೆ ಎತ್ತಿನ ದುಡಿಮೆಗೂ, ಬಾಳೆಯ ಎಲೆಯನ್ನು ಹಾಸಿ ಊಟಮಾಡಿ ಬಿಸಾಡುವಿಕೆಗೂ ಎರಡು ಹೋಲಿಕೆಗಳನ್ನು ಕೊಡಲಾಗಿದೆ.  ಇದೂ ಉಪಮಾಲಂಕಾರ.
() ರೂಪಕಾಲಂಕಾರ[3]
ಮಾತನಾಡುವಾಗ ಒಮ್ಮೊಮ್ಮೆ ಹೀಗೆ ಹೇಳುವುದುಂಟು.
(i) ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ.
(ii) ಆ ಮನುಷ್ಯ ನಿಜವಾಗಿ ದೇವರು.
(iii) ಈ ಶಾಲೆಗೆ ವಿದ್ಯಾರ್ಥಿಯೊಂದು ರತ್ನ.
(೧) ಇಲ್ಲಿ ಮೊದಲ ವಾಕ್ಯದಲ್ಲಿ-ವಿದ್ವಾಂಸನೂ ಸಾಕ್ಷಾತ್ ಸರಸ್ವತಿಯೂ ಒಂದೇ ಎಂದು ಭೇದವಿಲ್ಲದೆ ಹೇಳಲಾಗಿದೆ.
(೨) ಎರಡನೆಯ ವಾಕ್ಯದಲ್ಲಿ-ಮನುಷ್ಯನೂ, ದೇವರೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಿದೆ.
(೩) ಮೂರನೆಯ ವಾಕ್ಯದಲ್ಲಿ-ವಿದ್ಯಾರ್ಥಿಯೂ ರತ್ನವೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಲಾಗಿದೆ.
ಇಲ್ಲಿ ಮೂರೂ ವಾಕ್ಯಗಳಲ್ಲಿ ಒಂದರಂತೆ ಇನ್ನೊಂದಿದೆ ಎಂದು ಹೇಳಿಲ್ಲ.  ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಹೀಗೆ ಭೇದವಿಲ್ಲದೆ ಹೇಳುವುದೇ ರೂಪಕಾಲಂಕಾರ.  ಇಲ್ಲಿ ಅಭೇದದಿಂದ ಹೇಳಿರುವುದರಿಂದ ಇದು ‘ಅಭೇದ ರೂಪಕ’ ವೆಂದು ಹೇಳಲ್ಪಡುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಅಭೇದರೂಪಕಾಲಂಕಾರ:- ವರ್ಣಿಸುವ ವಸ್ತುವು ಇನ್ನೊಂದರಂತೆ (ಉಪಮಾನದಂತೆ) ಇದೆ ಎಂದು ಹೇಳದೆ, ಎರಡೂ ವಸ್ತುಗಳು ಎಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ ಅಭೇದರೂಪಕಾಲಂಕಾರವೆನಿಸುವುದು. ಉದಾಹರಣೆ:-
(i) ಪುರದಪುಣ್ಯಂ ಪುರುಷರೂಪಿಂದ ಪೋಗುತಿದೆ|ಪರಿಜನದ ಭಾಗ್ಯವಡವಿಗೆ ನಡೆಯುತಿದೆ||
                          
(-ಹರಿಶ್ಚಂದ್ರ ಕಾವ್ಯ)
ಈ ಪದ್ಯಭಾಗವು-ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ತನ್ನ ರಾಜ್ಯಾದಿಗಳನ್ನು ಕೊಟ್ಟು, ಪಟ್ಟಣ ಬಿಟ್ಟು ಹೋಗುವಾಗ ಅಯೋಧ್ಯಾನಗರದ ಜನರು ಗೋಳಿಡುವ ಸನ್ನಿವೇಶದ್ದು.
ಅರ್ಥ:- ಪುರದ ಪುಣ್ಯವು ಪುರುಷಾಕಾರದಿಂದ ಹೋಗುತ್ತಿದೆ.
ಸೇವಕ ಜನದ ಭಾಗ್ಯವು ಅಡವಿಗೆ ಹೋಗುತ್ತಿದೆ.
ಇಲ್ಲಿ ಹರಿಶ್ಚಂದ್ರನೆಂಬ ಉಪಮೇಯವೂ ಪುರದ ಪುಣ್ಯವೆಂಬ ಉಪಮಾನವೂ ಒಂದೇ ಎಂದೂ, ಎರಡನೆಯ ವಾಕ್ಯದಲ್ಲಿ ಹರಿಶ್ಚಂದ್ರನೆಂಬ ಉಪಮಾನವೂ ಪರಿಜನರ ಭಾಗ್ಯವೆಂಬ ಉಪಮಾನವೂ ಒಂದೇ ಎಂದೂ ಉಪಮಾನೋಪಮೇಯಗಳಲ್ಲಿ ಭೇದವಿಲ್ಲದೆ ಅಂದರೆ ಅಭೇದವಾಗಿ ವರ್ಣಿಸಿರುವುದರಿಂದ ಇದು ಅಭೇದರೂಪಕಾಲಂಕಾರವೆನಿಸಿತು.  ಇದರಂತೆ-
ಉದಾಹರಣೆ:-
(ii) ಮನೆಯೇ ಧರ್ಮಾಶ್ರಮ, ಮನೆವಾಳ್ತೆಯೇ ಧರ್ಮ| ವಿನಿಯನೂಳಿಗ ದೇವಪೂಜೆ|| ಮನನವಿವನ ನೆನೆವುದೆ ಸಾಧ್ವಿಯರಿಗೆ| ಮುನಿಸತಿಯರ ಮೋಡಿಯೇನು?
(-ಹದಿಬದೆಯ ಧರ್ಮ)
ಇಲ್ಲಿ ಸಾಧ್ವಿಯಾದ ಹೆಣ್ಣುಮಗಳು ತನ್ನ ಗೃಹಿಣೀ ಧರ್ಮದಲ್ಲಿ ನಡೆದುಕೊಳ್ಳುವ ನಡೆವಳಿಕೆಯು ವರ್ಣಿತವಾಗಿದೆ.
ಅರ್ಥ:- ಸಾಧ್ವಿಯರಿಗೆ ಮನೆಯು ಧರ್ಮಾಶ್ರಮ, ಮನೆಯ ಬಾಳುವೆ ಧರ್ಮ, ಗಂಡನಸೇವೆ ದೇವರ ಪೂಜೆ, ಪತಿಯನ್ನು ನೆನೆವುದು ದೇವರಧ್ಯಾನ.
ಇಲ್ಲಿ ಮನೆ ಮತ್ತು ಧರ್ಮಾಶ್ರಮ ಎರಡೂ ಒಂದೇ.  ಬಾಳುವೆ ಮತ್ತು ಧರ್ಮ ಎರಡೂ ಒಂದೇ, ಪತಿಯ ಸೇವೆ-ದೇವರ ಪೂಜೆ ಇವೆರಡೂ ಒಂದೇ-ಇತ್ಯಾದಿಯಾಗಿ ಉಪಮೇಯ-ಉಪಮಾನಗಳಲ್ಲಿ ಅಭೇದವು ಹೇಳಲ್ಪಟ್ಟ ಕಾರಣ ಅಭೇದರೂಪಕಾಲಂಕಾರವೆನಿಸಿತು.

() ಉತ್ಪ್ರೇಕ್ಷಾಲಂಕಾರ[4]
ಲವಕುಶರು ಶ್ರೀರಾಮಲಕ್ಷ್ಮಣರೊಡನೆ ಯದ್ಧಕ್ಕೆ ತೊಡಗಿದಾಗಿನ ರಾಮಾಶ್ವಮೇಧದಲ್ಲಿನ ಪ್ರಸಂಗದ ವರ್ಣನೆಯನ್ನು ಈ ಕೆಳಗೆ ನೋಡಿರಿ.
“ರಕ್ತದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ರೀತಿ ಚಿಕ್ಕ ಚಿಕ್ಕ ಬೆಟ್ಟಗಳನ್ನು ಹೊಸದಾಗಿ ಹರಡಿರುವರೋ ಎನ್ನುವಂತೆ ಸತ್ತು ಬಿದ್ದ ಆನೆಗಳ ಹಿಂಡು ಕಾಣುತ್ತಿತ್ತು.”
(-ರಾಮಾಶ್ವಮೇಧದಲ್ಲಿನ ವರ್ಣನೆಯ ಹೊಸಗನ್ನಡರೂಪಾಂತರ)
ಇಲ್ಲಿ ಸತ್ತು ಬಿದ್ದ ಆನೆಗಳು ರಣರಂಗದ ಸುತ್ತೆತ್ತಲೂ ಹರಡಿ ಬಿದ್ದಿದ್ದವು.  ರಣರಂಗವೆಲ್ಲ ರಕ್ತಮಯವಾಗಿತ್ತು.  ಈ ಸನ್ನಿವೇಶವನ್ನು ಕವಿ ಬೇರೊಂದು ರೀತಿಯಲ್ಲಿ ಕಲ್ಪಿಸಿಕೊಂಡನು (ಸಂಭಾವಿಸಿದನು).  ರಾಮಲಕ್ಷ್ಮಣರು ಹಿಂದೆ ಸಮುದ್ರಕ್ಕೆ ಸೇತುವೆ ಕಟ್ಟಲು ಬೆಟ್ಟಗಳನ್ನು ಕಿತ್ತು ತಂದು ಹರಡಿಸಿದ್ದರೆಂಬ ಪ್ರಸಿದ್ಧಾಂಶವನ್ನು ಜ್ಞಾಪಿಸಿಕೊಂಡ ಕವಿ, ಈಗ ಅವನ ಮಕ್ಕಳೇ ಆದ ಲವಕುಶರು ರಕ್ತದ ಸಮುದ್ರಕ್ಕೆ ಸೇತುವೆ ಕಟ್ಟಲು ಚಿಕ್ಕ ಚಿಕ್ಕ ಬೆಟ್ಟಗಳನ್ನು ತರಿಸಿ ಹರಡಿಸಿರುವರೋ-ಎನ್ನುವ ಹಾಗೆ ರಕ್ತಮಡುವಿನಿಂದ ಕೂಡಿದ ರಣರಂಗದಲ್ಲಿ ಸತ್ತು ಬಿದ್ದು ಸುತ್ತಲೂ ಹರಡಿಕೊಂಡಿರುವ ಆನೆಗಳು ಕಂಡವೆಂದು ಕಲ್ಪಿಸಿ ಹೇಳಿದ್ದಾನೆ.  ಹೀಗೆ ಕವಿ ಕಲ್ಪಿತಜ್ಞಾನದಿಂದ ಹೇಳುವುದು ಉತ್ಪ್ರೇಕ್ಷೆಯೆನಿಸುವುದು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
 ಉತ್ಪ್ರೇಕ್ಷಾಲಂಕಾರ:- "ಒಂದಾನೊಂದು ಪದಾರ್ಥವನ್ನೋ, ಅಥವಾ ಸನ್ನಿವೇಶವನ್ನೋ ಮತ್ತೊಂದನ್ನಾಗಿ ಸಂಭಾವಿಸಿ (ಕಲ್ಪಿಸಿ) ವರ್ಣಿಸುವುದೇ ಉತ್ಪ್ರೇಕ್ಷೆಯೆನಿಸುವುದು."
ಆದರೆ ವರ್ಣಿಸುವ ವಸ್ತುವಿನಲ್ಲಿ ಅಥವಾ ಸನ್ನಿವೇಶದಲ್ಲಿ ಸಂಭಾವನೆ ಮಾಡುವ (ಕಲ್ಪಿಸಿಕೊಳ್ಳುವ) ವಸ್ತುವಿನ ಧರ್ಮವು ಇದ್ದೇ ಇರಬೇಕು.
ಉದಾಹರಣೆ:- (i)
ಆಸೇನಾರಜದಿಂ ಪರಿಧೂಸರಮಾದುದು ನಿಜಾಂಗಮಂ ತೊಳೆಯಲ್ಕೆಂದೋಸರಿಸದೆ ಪೊಕ್ಕಂತಿರೆವಾಸರಕರನಪರ ವಾರಿನಿಧಿಯಂ ಪೊಕ್ಕಂ||
                                  (-ಕನ್ನಡ ಕೈಪಿಡಿ)
ಇದೊಂದು ಯದ್ಧ ಸಮಯದ ಸಾಯಂಕಾಲದ ವರ್ಣನೆ.
ಅರ್ಥ:- ಸೇನೆಯ ಕಾಲ್ತುಳಿತದಿಂದ ಎದ್ದ ಧೂಳು ಮೈಗೆ ಮೆತ್ತಲಾಗಿ, ಅಂಥ ಕೆಂಪು ಧೂಳಿನಿಂದ ಧೂಸರವಾದ ತನ್ನ ದೇಹವನ್ನು ತೊಳೆಯುವುದಕ್ಕೋಸುಗ ಪಶ್ಚಿಮ ಸಮುದ್ರವನ್ನು ಸೂರ‍್ಯನು ಹೊಕ್ಕನು.
ಸಹಜವಾಗಿ ಮುಳುಗಿದ ಸೂರ‍್ಯನನ್ನು, ಕವಿ ಸ್ನಾನಕ್ಕೋಸುಗವೇ ಪಶ್ಚಿಮ ಸಮುದ್ರಕ್ಕೆ ಮುಳುಗಿದನೆಂದು ಕಲ್ಪಿಸಿ ಹೇಳಿದ್ದಾನೆ.
ಸಾಯಂಕಾಲದಲ್ಲಿ ಸೂರ‍್ಯನ ಬಣ್ಣ ಕೆಂಪಾಗಿರುತ್ತದೆ ಮತ್ತು ಪಶ್ಚಿಮದಲ್ಲಿ ಅವನು ಮರೆಯಾಗುತ್ತಾನೆ.  ಆದ್ದರಿಂದ ಕಲ್ಪಿಸಿ ಹೇಳುವ ಧೂಳುಮೆತ್ತಿ ಕೆಂಪಾದ ಮೆಯ್ಯಿ, ಪಶ್ಚಿಮದಲ್ಲಿರುವ ಸಮುದ್ರದಲ್ಲಿ ಕಾಣದಾಗುವನೆನ್ನುವಲ್ಲಿನ ಧರ್ಮವು ಇದೆ.  ಆದ್ದರಿಂದ ಇದು ಉತ್ಪ್ರೇಕ್ಷಾಲಂಕಾರವೆನಿಸಿತು.
ಉದಾಹರಣೆ:-
(iii) ಪಾಲ್ದುಂಬಿದ ಸಾಲ್ದೆನೆಗಳ| ನೆಲ್ದುರುಗಲನೊಲ್ದು ಸೀಳಿಗಿಳಿಭಯ ಭರದಿಂ|| ಜೋಲ್ದಿಳೆಗಿಳಿವಂತಿರಬಂ| ಬಲ್ದೆರೆಯೊಳ್ ಪೊಳೆದು ಮಡಿಯ ನೀರೋಳ್ ತೋರ್ಕುಂ||
                                         (-ರಾಜಶೇಖರ ವಿಳಾಸ)
ಗದ್ದೆಯಲ್ಲಿ ನೀರಿದೆ.  ಆ ನೀರಿನಲ್ಲಿ ಬತ್ತದ ತೆನೆಗಳ ಪ್ರತಿಬಿಂಬ ಕಾಣುತ್ತಿದೆ.
ಅರ್ಥ:- ಹಾಲುತುಂಬಿದ ಸಾಲುಸಾಲಾಗಿ ಕಾಣುವ ಬತ್ತದ ತೆನೆಗಳು ತಮ್ಮನ್ನು ಗಿಳಿಗಳು ಬಂದು ಸೀಳಿಬಿಡುತ್ತವೆಂಬ ಭಯದಿಂದ ಭೂಮಿಗೆ ಇಳಿದುಹೋದವೋ ಎಂಬಂತೆ ಗದ್ದೆಯ ನೀರಿನಲ್ಲಿ ಅವು ಪ್ರತಿಫಲಿಸಿ ಕಾಣುತ್ತಿದ್ದವು.
ಇಲ್ಲಿ ಸಹಜವಾಗಿ ನೀರಿನಲ್ಲಿ ಪ್ರತಿಫಲಿಸಿ ಕಾಣುವ ಬತ್ತದ ತೆನೆಗಳ ಆ ಸನ್ನಿವೇಶವನ್ನು ಕವಿಯು ಬೇರೊಂದು ಕಾರಣ ಕೊಟ್ಟು ಕಲ್ಪಿಸಿ ಗಿಳಿಗಳ ಭಯದಿಂದ ಅವು ಭೂಮಿಗೆ ಇಳಿದು ಹೋಗಿವೆ ಎಂದು ಸಂಭಾವನೆ ಮಾಡಿ ಹೇಳುವ ಇದು ಉತ್ಪ್ರೇಕ್ಷಾಲಂಕಾರವಾಗುವುದು.

() ದೃಷ್ಟಾಂತಾಲಂಕಾರ[5]
(i) ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು. (ii) ಅಟ್ಟಮೇಲೆ ಒಲೆ ಉರಿಯಿತು; ಕೆಟ್ಟಮೇಲೆ ಬುದ್ಧಿಬಂತು. (iii) ಮಾತುಬಲ್ಲವನಿಗೆ ಜಗಳವಿಲ್ಲ; ಊಟಬಲ್ಲವನಿಗೆ ರೋಗವಿಲ್ಲ.
ಇತ್ಯಾದಿಯಾಗಿ ಹೇಳುವ ನಾಣ್ಣುಡಿಗಳನ್ನು ವಿಚಾರ ಮಾಡಿದರೆ, ಮೊದಲನೆಯ ವಾಕ್ಯದಲ್ಲಿ ಊರಿಗೆ ಉಪಕಾರ ಮಾಡುವುದೂ, ಹೆಣಕ್ಕೆ ಶೃಂಗಾರಮಾಡುವುದೂ ಒಂದೇ.  ಎರಡನೆಯ ವಾಕ್ಯದಲ್ಲಿ ಅಡಿಗೆಯಾದ ಮೇಲೆ ಒಲೆ ಉರಿಯಹತ್ತಿತು.  ಮನುಷ್ಯ ಕೆಟ್ಟ ಮೇಲೆ ಬುದ್ಧಿ ಬಂತು.  ಮೂರನೆಯ ವಾಕ್ಯದಲ್ಲಿ ಮಾತಿನ ಮಹತ್ವ ತಿಳಿದವನು ಜಗಳ ಮಾಡಬೇಕಾದ ಪ್ರಮೇಯವೇ ಇಲ್ಲ; ಊಟದ ಮರ್ಮವರಿತವನು ರೋಗದಿಂದ ನರಳುವ ಭಯವಿಲ್ಲ.  ಇತ್ಯಾದಿಯಾಗಿ ಎರಡೆರಡು ಮಾತುಗಳು ಅರ್ಥದ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬಗಳಂತೆ ಕಾಣುತ್ತವೆ.  ಬಿಂಬ ಪ್ರತಿಬಿಂಬವೆಂದರೆ ತಾನು ಮತ್ತು ಕನ್ನಡಿಯಲ್ಲಿ ಕಾಣುವ ತನ್ನ ಪ್ರತಿಬಿಂಬವಿದ್ದ ಹಾಗೆ.  ಹೀಗೆ ವರ್ಣಿಸುವ ವಿಷಯಕ್ಕೆ ಬೇರೊಂದು ವಿಷಯದ ದೃಷ್ಟಾಂತವು ಪ್ರತಿಬಿಂಬದ ಹಾಗೆ ಕಾಣುವಂತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ದೃಷ್ಟಾಂತಾಲಂಕಾರ:- "ಎರಡು ಬೇರೆ ಬೇರೆ ವಾಕ್ಯಗಳು (ವರ್ಣಿಸುವ ವಿಷಯದ ವಾಕ್ಯ ಅವರ್ಣ್ಯವಿಷಯ ವಾಕ್ಯಗಳು) ಅರ್ಥಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬವಾದಂತೆ (ಒಂದರ ಪ್ರತಿಬಿಂಬ ಮತ್ತೊಂದೆನ್ನುವ ಭಾವದಂತೆ) ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು." ಉದಾಹರಣೆ:-
(i) ನಿಂದಿಸುವರ್ ದುರ್ಜನರ್ ಎಂ|ಬೊಂದುಭಯಂಬೆತ್ತು ಸುಕವಿರಚಿಸನೆಕೃತಿಯಂ?||ಮಂದೇಹರಭಯದಿಂದರ|ವಿಂದಸಖಂ ನಿಜಮಯೂಖನಂ ಪ್ರಸರಿಸನೇ?||
                        
(-ರಾಜಶೇಖರ ವಿಲಾಸ)
ಅರ್ಥ:- ದುರ್ಜನರು ನಿಂದಿಸುತ್ತಾರೆ ಎಂಬ ಹೆದರಿಕೆಯಿಂದ ಒಳ್ಳೆಯ ಕವಿಯಾದವನು ಕೃತಿಯನ್ನು ರಚಿಸುವುದಿಲ್ಲವೆ? ಅಂದರೆ ರಚಿಸಿಯೇ ರಚಿಸುತ್ತಾನೆ.  ಕತ್ತಲೆಯ ಭಯದಿಂದ ಸೂರ‍್ಯನು ತನ್ನ ಕಿರಣಗಳನ್ನು ಪ್ರಸರಿಸುವುದಿಲ್ಲವೆ? ಅಂದರೆ ಪ್ರಸರಿಸಿಯೇ ಪ್ರಸರಿಸುತ್ತಾನೆ.
ಇಲ್ಲಿ-ದುರ್ಜನರು ನಿಂದೆ ಮಾಡುತ್ತಾರೆಂಬ ಹೆದರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಸತ್ಕವಿಯಾದವನು ಕೃತಿ ರಚಿಸಿಯೇ ರಚಿಸುತ್ತಾನೆಂಬ ಮಾತಿಗೂ, ಕತ್ತಲೆಯ ಹೆದರಿಕೆಯಿಂದ ಸೂರ‍್ಯನು ಸುಮ್ಮನಿರದೆ ತನ್ನ ಕಿರಣಗಳನ್ನು ಪ್ರಸರಿಸಿಯೇ ಪ್ರಸರಿಸುತ್ತಾನೆ-ಎಂಬ ಮಾತಿಗೂ ಅರ್ಥ ಸಾದೃಶ್ಯದಿಂದ ಬಿಂಬಪ್ರತಿಬಿಂಬ ಭಾವವು ಉಪಮೇಯ-ಉಪಮಾನಗಳೆರಡಕ್ಕೂ ತೋರುವುದರಿಂದ ಇದು ದೃಷ್ಟಾಂತಾಲಂಕಾರವಾಗುವುದು.  ಇದರ ಹಾಗೆಯೇ-
ಉದಾಹರಣೆ:-
(ii) ಎನಿತೊಳವಪಾಯ ಕೋಟಿಗ| ಳನಿತರ್ಕಂ ಗೇಹಮಲ್ತೆ ದೇಹಮಿದಂನೆ| ಟ್ಟನೆ ಪೊತ್ತು ಸುಖವನರಸುವ| ಮನುಜಂ ಮೊರಡಿಯೊಳೆ ಮಾದುಫಳಮನರಸದಿರಂ||
                                   (-ಯಶೋಧರ ಚರಿತೆ)
ಅರ್ಥ:- ಅಪಾಯಗಳೆಷ್ಟಿವೆಯೋ ಅಷ್ಟೆಲ್ಲಕ್ಕೂ ಮನೆಯಂತಿರುವ ಈ ದೇಹವನ್ನು ಧರಿಸಿ ಸುಖವೇ ಬೇಕು; ದುಃಖವು ಬೇಡ; ಎನ್ನುವ ಮನುಷ್ಯನು ಕಲ್ಲು ಮೊರಡಿಯಲ್ಲಿ ಮಾದಳ ಫಲವನ್ನು ಅರಸದೆ ಇರುವನೇ?
ಇಲ್ಲಿ-ಅನೇಕ ಅಪಾಯಗಳನ್ನು ಪಡೆಯುವುದಕ್ಕೆ ಕಾರಣವಾದ ಈ ದೇಹವನ್ನು ಧರಿಸಿ ಕೇವಲ ಸುಖವೇ ಬೇಕು ಎನ್ನುವ ಮನುಷ್ಯನೂ, ಕಲ್ಲುಮೊರಡಿಯ ಪ್ರದೇಶದಲ್ಲಿ ಮಾದಳ ಹಣ್ಣನ್ನು ಹುಡುಕುವ ಮನುಷ್ಯನೂ ಒಂದೇ.  ಏಕೆಂದರೆ ಕಲ್ಲುಮೊರಡಿಯಲ್ಲಿ ಮಾದಳ ಫಲವು ಸಿಗದು.  ಅದರಂತೆ ಮನುಷ್ಯ ದೇಹಕ್ಕೂ ಅಪಾಯಗಳು ಅನಿವಾರ‍್ಯ.  ಅವು ಬಂದೇ ಬರುತ್ತವೆ.  ಹೀಗೆ ಉಪಮೇಯ-ಉಪಮಾನ ವಾಕ್ಯಗಳಿಗೆ ಬಿಂಬ ಪ್ರತಿಬಿಂಬಭಾವ ತೋರುವುದರಿಂದ ಇದು ದೃಷ್ಟಾಂತಾಲಂಕಾರವಾಗುವುದು.

(೫) ಅರ್ಥಾಂತರನ್ಯಾಸಾಲಂಕಾರ[6] (i) ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು; ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ? (ii) ಆತನು ಉಂಡಮನೆಗೆ ಕೇಡುಬಗೆದನು; ಕೃತಘ್ನರು ಏನನ್ನು ತಾನೆ ಮಾಡುವುದಿಲ್ಲ?
ಇತ್ಯಾದಿಯಾಗಿ ಮಾತನಾಡುವುದುಂಟು.  ಇಲ್ಲಿ ಮೊದಲನೆಯ ವಾಕ್ಯದಲ್ಲಿ ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿ ಉತ್ತೀರ್ಣನಾದನು ಎಂದು ವರ್ಣಿಸುವ ವಿಶೇಷ ವಾಕ್ಯವನ್ನು-ಲೋಕದಲ್ಲಿ ಎಲ್ಲ ಬುದ್ಧಿವಂತ ಮಕ್ಕಳಿಗೂ ಅನ್ವಯವಾಗುವಂಥ ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ? ಎಂಬ ಸಾಮಾನ್ಯ ನುಡಿಯಿಂದ ಸಮರ್ಥನೆ ಮಾಡಿದೆ.  ಅದರಂತೆ, ಎರಡನೆಯ ವಾಕ್ಯದಲ್ಲಿಯೂ ಕೂಡ ಉಂಡಮನೆಗೆ ಕೇಡು ಬಗೆದನು ಎಂಬ ಈ ವರ್ಣ್ಯವಾದ ಮಾತನ್ನು ಕೃತಘ್ನತಾ ಬುದ್ಧಿಯುಳ್ಳ ಜನಗಳು ಏನನ್ನು ತಾನೆ ಮಾಡುವುದಿಲ್ಲ? ಅಂದರೆ-ಎಲ್ಲ ಕೆಡುಕನ್ನು ಮಾಡುತ್ತಾರೆಂಬ ಲೋಕ ಸಾಮಾನ್ಯ ಮಾತಿನಿಂದ ಸಮರ್ಥನೆ ಮಾಡಿ ಹೇಳುವುದುಂಟು.  ಇದರ ಹಾಗೆಯೇ ಈ ಕೆಳಗಿನ ಮಾತನ್ನು ನೋಡಿರಿ.
“ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆಭಕ್ತನಾದ ಪ್ರಹ್ಲಾದನಿಗೆ ತಂದೆಯಿಂದ ಗಂಡಾಂತರ ಬಂದಾಗ ಪರಮಾತ್ಮನು ಕಾಪಾಡಿದನು.”
ಈ ಮಾತಿನಲ್ಲಿ ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ ಎಂಬುದು ಸಾಮಾನ್ಯ ವಾಕ್ಯ; ಏಕೆಂದರೆ ಎಲ್ಲ ಪರಮಾತ್ಮನ ಭಕ್ತರಿಗೂ ಅನ್ವಯವಾಗುವ ಮಾತು ಅದು.  ಈ ಸಾಮಾನ್ಯವಾದ ಮಾತನ್ನು ಭಕ್ತನಾದ ಪ್ರಹ್ಲಾದನಿಗೆ ಗಂಡಾಂತರ ಪ್ರಾಪ್ತವಾದಾಗ ಪರಮಾತ್ಮನು ಸಂರಕ್ಷಿಸಿದನೆಂಬ ವಿಶೇಷ ವಾಕ್ಯದಿಂದ ಈ ಮಾತಿನಲ್ಲಿ ಸಮರ್ಥನೆ ಮಾಡಲಾಗಿದೆ.  ಹೀಗೆ ಅರ್ಥ ಚಮತ್ಕಾರದಿಂದ ವರ್ಣಿಸುವ ಅಲಂಕಾರವೇ ಅರ್ಥಾಂತರನ್ಯಾಸಾಲಂಕಾರವೆನಿಸುವುದು.  ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಅರ್ಥಾಂತರನ್ಯಾಸಾಲಂಕಾರ:- "ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ ಅರ್ಥಾಂತರನ್ಯಾಸಾಲಂಕಾರವೆನಿಸುವುದು. (ಅಲ್ಲಿ ಸಾಮಾನ್ಯವಾಕ್ಯ ವಿಶೇಷ ವಾಕ್ಯಗಳೆರಡೂ ಉಕ್ತವಾಗಿರಬೇಕು)"[7] ಉದಾಹರಣೆಗೆ:
(i) ಎನಗೆ ಹಿತಂ ಬ್ರಾಹ್ಮಣ ನೀ-| ತನೆನ್ನದೆ ಅವಿವೇಕಿಯಾಗಿ ಶಿವಭೂತಿ ತೊ-| ಟ್ಟನೆ ಬಗೆದನಹಿತಮಂ| ತದ್ವನಚರಂ ಎಂತುಂ ಕೃತಘ್ನರೇನಂ ಮಾಡರ್?
                                    (-ಕರ್ಣಾಟಕ ಪಂಚತಂತ್ರ)
ಅರ್ಥ:- ನನಗೆ ಈ ಬ್ರಾಹ್ಮಣನು ಹಿತವನ್ನುಂಟುಮಾಡಿದವನು, ಎಂದು ಯೋಚಿಸದೆ ಆ ಬೇಡನು ಒಮ್ಮೆಲೆ ಅವನಿಗೆ ಕೇಡನ್ನು ಬಗೆದನು.  ಕೃತಘ್ನರಾದವರು ಏನನ್ನು ತಾನೆ ಮಾಡುವುದಿಲ್ಲ?
ಇಲ್ಲಿ ವರ್ಣಿಸಲ್ಪಡುವ ವಿಷಯವಾದ ಬೇಡನು ಬ್ರಾಹ್ಮಣನಿಗೆ ಅಹಿತವನ್ನು ಯೋಚಿಸಿದ ವಿಶೇಷ ವಿಷಯವನ್ನು -ಕೃತಘ್ನರಾದವರು ಏನೆಲ್ಲವನ್ನೂ ಮಾಡುತ್ತಾರೆ ಎಂಬ ಲೋಕಸಾಮಾನ್ಯವಾದ ಪ್ರಸಿದ್ಧ ವಿಷಯದಿಂದ ಸಮರ್ಥನೆ ಮಾಡಿದುದರಿಂದ ಇದು ಅರ್ಥಾಂತರನ್ಯಾಸಾಲಂಕಾರವಾಗುವುದು.  ಇಲ್ಲಿ ವಿಶೇಷವು ಸಾಮಾನ್ಯದಿಂದ ಸಮರ್ಥಿತವಾಗಿದೆ.
ಉದಾಹರಣೆ:
(ii) [8]ದೊರೆಯೊಳ್ಸೆಣಸುಗೆ ತನ್ನಿಂ| ಪಿರಿಯರೊಳುರವಣಿಸಿ ಪೊಣರ್ದೊಡೆ ಅಳಿವುದು ದಿಟಮೀ| ನರಪತಿಯೊಳ್ ಪೊಣರ್ದು ಅಳಿದರ್|| ಪರಿಕಿಪೊಡಾ ಕೆಳದಿ, ಮಧುರೆ, ಬೇಡ, ಮರಾಟರ್||
             (-ಅಪ್ರತಿಮವೀರಚರಿತೆ)
ಅರ್ಥ:- ಸರಿಸಮಾನರಾದವರಲ್ಲಿ ಯದ್ಧಮಾಡಬೇಕು.  ತನಗಿಂತಲೂ ಬಲಿಷ್ಠರಾದವರಲ್ಲಿ ಯದ್ಧಮಾಡಿದರೆ ಸಾಯುವುದು ನಿಶ್ಚಯ.  ಮಹಾರಾಜನಾದ ಚಿಕ್ಕದೇವರಾಜ ಒಡಯನೊಡನೆ ಯದ್ಧಮಾಡಿ ಕೆಳದಿಯವರೂ, ಮಧುರೆಯವರೂ, ಬೇಡರೂ, ಮರಾಟೆಯವರೂ ಸತ್ತರು.
ಇಲ್ಲಿ-ತನಗೆ ಸರಿಸಮಾನರಾದವರೊಡನೆ ಸೆಣಸಬೇಕಲ್ಲದೆ, ತನಗಿಂತಲೂ ಪರಾಕ್ರಮಶಾಲಿ ಗಳಾದವರಲ್ಲಿ ಸೆಣಸಬಾರದು ಎಂಬ ಸಾಮಾನ್ಯವಾದ ಅಂದರೆ ಲೋಕ ಪ್ರಸಿದ್ಧವಾದ ಮಾತನ್ನು, ಚಿಕ್ಕದೇವರಾಜರಂತಹ ಬಲಿಷ್ಠರೊಡನೆ ಸೆಣಸಿ ಕೆಳದಿಯವರೂ, ಮಧುರೆಯವರೂ, ಬೇಡರೂ, ಮರಾಟೆಯವರೂ ಸತ್ತರು ಎಂಬ ವಿಶೇಷ ವಾಕ್ಯದಿಂದ ಅಂದರೆ ವರ್ಣ್ಯವಾದ ಮಾತಿನಿಂದ ಸಮರ್ಥನೆ ಮಾಡಿರುವುದರಿಂದ ಇದು ವಿಶೇಷದಿಂದ ಸಾಮಾನ್ಯವನ್ನು ಸಮರ್ಥನೆ ಮಾಡಿದ ಅರ್ಥಾಂತರನ್ಯಾಸಾಲಂಕಾರವೆನಿಸಿತು.
     (iii) ಕೋಪಾನಳನಳುರೆ ಮಹಾ
            ಕೂಪದೊಳಿಭವೈರಿ ಪಾಯ್ದು ಸತ್ತುದು ಘನ ಶೌ
            ರ್ಯೋಪೇತನಾದೊಡಂ ಸಲೆ
            ಕೋಪಾತುರನಪ್ಪನಾವನುಂ ಬಳ್ದಪನೇ
                           (-ಕರ್ಣಾಟಕ ಪಂಚತಂತ್ರ)
ಅರ್ಥ:- ಕೋಪವೆಂಬ ಬೆಂಕಿ ಹೆಚ್ಚಾಗಿ ದೊಡ್ಡ ಬಾವಿಯಲ್ಲಿ ಇಭವೈರಿ (ಸಿಂಹ) ಸತ್ತುಹೋಯಿತು. ಎಷ್ಟೇ ಶೌರ್ಯವಂತನಾದರೂ ಬಹಳ ಕೋಪ-ಆತುರಗಳನ್ನು ಹೋಂದಿದವರು ಬದುಕುತ್ತಾರೆಯೇ?

ಇಲ್ಲಿ-ಮೃಗರಾಜನಾದ ಸಿಂಹವು ಮೊಲದ ಮಾತಿನ ಬಲೆಗೆ ಸಿಲುಕಿ ಹಸಿವಿನ ಜೊತೆಗೆ ಮತ್ತಷ್ಟು ಕೋಪಗೊಂಡ ಕಾರಣ ಅದರ ಬುದ್ದಿ ಮಂಕಾಗಿ ಬಾವಿಯಲ್ಲಿ ನೋಡಿದ ತನ್ನ ಪ್ರತಿಬಿಂಬವನ್ನು ಮತ್ತೊಂದು ಸಿಂಹವೆಂದು ಭಾವಿಸಿ ಆ ದೊಡ್ಡ ಬಾವಿಗೆ ನೆಗೆದು ಪ್ರಾಣ ಬಿಟ್ಟಿತು. ಇಲ್ಲಿ 'ಕೋಪವೆಂಬ ಬೆಂಕಿ ಹೆಚ್ಚಾಗಿ ದೊಡ್ಡ ಬಾವಿಯಲ್ಲಿ ಇಭವೈರಿ (ಸಿಂಹ) ಸತ್ತುಹೋಯಿತು' ಎಂಬ ವಿಶೇಷ ವಾಕ್ಯವನ್ನು 'ಎಷ್ಟೇ ಶೌರ್ಯವಂತನಾದರೂ ಬಹಳ ಕೋಪ-ಆತುರಗಳನ್ನು ಹೋಂದಿದವರು ಬದುಕುತ್ತಾರೆಯೇ?' ಎಂಬ ಲೋಕರೂಢಿಯಾದ ಸಾಮಾನ್ಯ ವಾಕ್ಯವು ಸಮರ್ಥಿಸುತ್ತದೆ ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರವೆನಿಸುತ್ತದೆ.

() ಶ್ಲೇಷಾಲಂಕಾರ[9]
ಈ ಕೆಳಗಿನ ಒಂದು ವಾಕ್ಯವನ್ನು ವಿಚಾರಮಾಡಿರಿ-
ವಿವಾಹ ಮಂಟಪವು ಪುರಂದರ ಪುರದಂತೆಸದಾರಂಭಾನ್ವಿತ ವಿಬುಧಮಿಳಿತವಾಗಿತ್ತು”
ಇದೊಂದು ವಿವಾಹ ಮಂಟಪದ ವರ್ಣನೆ.  ಅದು ಪುರಂದರನ ಎಂದರೆ ದೇವೇಂದ್ರನ ಪಟ್ಟಣದ ಹಾಗೆ ಸದಾರಂಭಾನ್ವಿತವಾಗಿತ್ತು.  ಮತ್ತು ವಿಬುಧರಿಂದ ಮಿಳಿತವೂ ಆಗಿತ್ತು.  ಇಲ್ಲಿ ರಂಭಾ ಶಬ್ದಕ್ಕೂ ವಿಬುಧ ಎಂಬ ಶಬ್ದಕ್ಕೂ ವಿವಾಹಮಂಟಪದ ಪರವಾಗಿ ಮತ್ತು ಇಂದ್ರನಗರವಾದ ಅಮರಾವತಿಯಪರವಾಗಿ ಬೇರೆ ಬೇರೆ ಅರ್ಥಮಾಡಬೇಕು.
ವಿವಾಹ ಮಂಟಪವು-(i) ರಂಭಾನ್ವಿತವಾಗಿತ್ತು ಎಂದರೆ ಬಾಳೆ ಗಿಡಗಳಿಂದ ಕೂಡಿತ್ತು.  ಎಂದು ಅರ್ಥಮಾಡಬೇಕು.  (ರಂಭಾ=ಬಾಳೆ)   (ii) ವಿಬುಧ ಮಿಳಿತವಾಗಿತ್ತು.  ಎಂದರೆ ಬ್ರಾಹ್ಮಣರ ಸಮೂಹದಿಂದ ಕೂಡಿತ್ತು-ಎಂದು ಅರ್ಥಮಾಡ ಬೇಕು.  (ವಿಬುಧ=ಬ್ರಾಹ್ಮಣ) ಅಮರಾವತಿಯು-(iii) ರಂಭಾನ್ವಿತವಾಗಿತ್ತು ಎಂದರೆ ರಂಭೆಯೆಂಬ ಅಪ್ಸರ ಸ್ತ್ರೀಯಿಂದ ಕೂಡಿತ್ತು ಎಂದರ್ಥ ಮಾಡಬೇಕು.  ರಂಭಾ=ಅಪ್ಸರೆ (ಒಬ್ಬಳು). (iv) ವಿಬುಧ ಮಿಳಿತವಾಗಿತ್ತು.  ಎಂದರೆ ದೇವತೆಗಳಿಂದ ತುಂಬಿತ್ತು ಎಂದು ಅರ್ಥ ಮಾಡಬೇಕು.
(ವಿಬುಧ=ದೇವತೆ)
ಹೀಗೆ ‘ರಂಭಾ’ ಶಬ್ದವು ಬಾಳೆ-ಅಪ್ಸರ ಸ್ತ್ರೀಯೆಂದೂ, ‘ವಿಬುಧ’ ಶಬ್ದವು ಬ್ರಾಹ್ಮಣ ಮತ್ತು ದೇವತೆಯೆಂದೂ ಎರಡರ್ಥಗಳಿಂದ ಕೂಡಿರುತ್ತವೆ.  ಒಂದೇ ಶಬ್ದವು ವರ್ಣಿಸುವ ವಿವಾಹ ಮಂಟಪದ ಪರವಾಗಿಯೂ, ವರ್ಣಿಸುವ ವಿಷಯವಲ್ಲದ ದೇವೇಂದ್ರನ ಅಮರಾವತಿಯ ಪರವಾಗಿಯೂ ಎರಡು ಬೇರೆ ಬೇರೆ ಅರ್ಥ ಕೊಡುತ್ತದೆ.  ಇಂಥ ಪದಗಳೇ ‘ಶ್ಲೇಷೆಯೆನಿಸುವುವು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಶ್ಲೇಷಾಲಂಕಾರ:- "ಬೇರೆಬೇರೆ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ವರ್ಣಿಸುವ ವಿಷಯ ಮತ್ತು ಅವರ್ಣ್ಯವಾದ ವಿಷಯಗಳ ಪರವಾಗಿ ಬೇರೆಬೇರೆ ಅರ್ಥ ಕೊಡುವುದೇ ಶ್ಲೇಷಾಲಂಕಾರವೆನಿಸುವುದು."[10]
ಉದಾಹರಣೆಗೆ:
ಕಲಿಯಂತೆ ಸಶರಂ, ಅಂಬರ|
ತಲದಂತೆ ಸಹಂಸಂ, ಅಮರಪುರಮೆನೆಸುಮನೋ|
ನಿಲಯಂ ಸಕವಿ ನೃಪಸಭಾ|
ತಲದಂತೆ ಅಹಿಯಂತೆ ಸವಿಷಮೊಪ್ಪಿದುದು ಸರಂ||
ಇದು ಒಂದು ಸರೋವರದ ವರ್ಣನೆಯಾಗಿದೆ.  ಆ ಸರವು ಒಪ್ಪಿದುದು ಹೇಗೆ? ಅದರ ಅರ್ಥ ನೋಡಿರಿ;
ಆ ಸರವು-       
(i) ಕಲಿಯಂತೆ ಸಶರವಾಗಿತ್ತು.
(ii) ಅಂಬರ ತಲದಂತೆ ಸಹಂಸವಾಗಿತ್ತು.
(iii) ಅಮರಪುರದಂತೆ ಸುಮನೋನಿಲಯವಾಗಿತ್ತು.
(iv) ನೃಪಸಭೆಯಂತೆ ಸಕವಿಯಾಗಿತ್ತು.
(v) ಹಾವಿನಂತೆ ಸವಿಷವಾಗಿತ್ತು.
ಹೀಗಿತ್ತು.  ಈಗ ಸಶರ, ಸಹಂಸ, ಸುಮನೋನಿಲಯ, ಸಕವಿ, ಸವಿಷ-ಈ ಐದು ಪದಗಳ ಅರ್ಥಗಳೂ ಸರೋವರದ ಪರವಾಗಿ ಬೇರೆಬೇರೆ ಅರ್ಥ ಕೊಡಬೇಕು.  ಸಶರ ಅಂದರೆ ಶರಸಮೇತ ಎಂದು ಅರ್ಥ.  ಇದರಂತೆ ಸ ಬಂದಿರುವಲ್ಲೆಲ್ಲ ಸಮೇತ ಎಂದು ಅರ್ಥ ಮಾಡಬೇಕು.
(i)ಶರ:-ಸರೋವರ ಪರವಾಗಿನೀರು ಸರೋವರ ಪರವಾಗಿಕಲಿಯ ಪರವಾಗಿ
ಬಾಣ
ಅಂಬರತಲ ಆಕಾಶ ಪರವಾಗಿ
(ii)ಸಹಂಸ:-ಹಂಸಪಕ್ಷಿಯಿಂದ ಕೂಡಿತ್ತು
(ಹಂಸ=ಹಂಸಪಕ್ಷಿ)
ಸೂರ‍್ಯನಿಂದ ಕೂಡಿತ್ತು
(ಹಂಸ=ಸೂರ‍್ಯ)
(iii)ಸುಮನೋನಿಲಯ:-ಸರೋವರ ಪರವಾಗಿ
(ತಾವರೆ) ಹೂಗಳಿಂದ ಕೂಡಿತ್ತು (ಸುಮನ=ಹೂವು)
ಅಮರಪುರದ ಪರವಾಗಿ ದೇವತೆಗಳಿಂದ ಕೂಡಿತ್ತು
(ಸುಮನ=ದೇವತೆ)
(iv)ಸಕವಿ:-ಸರೋವರ ಪರವಾಗಿ ನೀರುಹಕ್ಕಿಯಿಂದ ಕೂಡಿತ್ತು (ಕವಿ=ನೀರುಹಕ್ಕಿ)ನೃಪಸಭೆಯಪರವಾಗಿ ಕವಿಗಳಿಂದ ಕೂಡಿತ್ತು (ಕವಿ-ಕಾವ್ಯ ಬರೆಯುವವ)
(v)ಸವಿಷ:-ಸರೋವರ ಪರವಾಗಿ
ನೀರಿನಿಂದ ಕೂಡಿತ್ತು (ವಿಷ=ನೀರು)
ಹಾವಿನ ಪರವಾಗಿ
ವಿಷದಿಂದ ಕೂಡಿತ್ತು
ಹೀಗೆ- (೧) ಶರ = (i) ಬಾಣ  (ii) ನೀರು
(೨) ಸುಮನ = (i) ಹೂವು  (ii) ದೇವತೆ
(೩) ಹಂಸ = (i) ಹಂಸ ಪಕ್ಷಿ (ii) ಸೂರ‍್ಯ
(೪) ಕವಿ = (i) ನೀರುಹಕ್ಕಿ (ii) ಕವಿ
(೫) ವಿಷ = (i) ನೀರು (ii) ವಿಷ
ಒಂದೇ ಶಬ್ದವು ವರ್ಣಿಸುವ ಸರೋವರದ ಪರವಾಗಿಯೂ ಅವರ್ಣ್ಯವಾದ ಮತ್ತೊಂದು ವಿಷಯದ ಪರವಾಗಿಯೂ ಬೇರೆಬೇರೆ ಅರ್ಥಗಳನ್ನು ಕೊಡುವುದರಿಂದ ಶ್ಲೇಷಾಲಂಕಾರವೆನಿಸುವುದು.

[1] ಉಪಮೇಯ, ಉಪಮಾನ, ಸಮಾನಧರ್ಮ, ಉಪಮಾವಾಚಕಗಳಲ್ಲಿ ಒಂದಾದರೂ, ಕೆಲವಾದರೂ ಸ್ಪಷ್ಟವಾಗಿ ಹೇಳಿರದಿದ್ದರೆ ಅದು ಲುಪ್ತೋಪಮೆಯೆನಿಸುವುದು.
[2] ಉಪಮಾಯತ್ರ ಸಾದೃಶ್ಯ ಲಕ್ಷ್ಮೀರುಲ್ಲಸತಿ ದ್ವಯೋಃ ||
ಅರ್ಥ:- ಪ್ರಸ್ತುತವಾದ ವಸ್ತುವಿಗೆ ಪೆರತೊಂದು ವಸ್ತುವಿನೊಡನೆ ಒಂದು ಧರ್ಮದಿಂ ಸಾದೃಶ್ಯವ್ಯಕ್ತವಾಗಿ ತೋರೆಯದು ಉಪಮೇಯೆನಿಪುದು  (- ಅಪ್ರತಿಮವೀರಚರಿತೆ) (ವಿಶೇಷ ತಿಳಿವಳಿಕೆಗಾಗಿ ಅಪ್ರತಿಮ ವೀರ ಚರಿತೆಯಲ್ಲಿನ ವಿಷಯ ಕೊಡಲಾಗಿದೆ.)
[3] ವಿಷಯ್ಯಭೇದ ತಾದ್ರೂಪ್ಯರಂಜನಂ ವಿಷಯಸ್ಯಯತ್ ರೂಪಕಂ.. .. ..
ಅರ್ಥ:-ವರ್ಣಿಸುವ ವಸ್ತುವನುಪಮಾನವಸ್ತುವೆಂದೇ ಪೇಳ್ವುದು ಅಭೇದರೂಪಕಂ.
(-ಅಪ್ರತಿಮವೀರಚರಿತ್ರೆ)
(ಈ ಅಲಂಕಾರದಲ್ಲಿ ಆರು ಬಗೆ.  ಪ್ರಕೃತ ಅಭೇದರೂಪಕವೊಂದನ್ನು ತಿಳಿದರೆ ಸಾಕು.  ಸೂತ್ರದಲ್ಲಿ ತಾದ್ರೂಪ್ಯರೂಪಕದ ಪ್ರಸ್ತಾಪವೂ ಇದೆ.  ಅದು ಅನವಶ್ಯಕ.)
[4] ಸಂಭಾವನಾಸ್ಯುರುತ್ಪ್ರೇಕ್ಷಾ …… (ಸಂಭಾವನಾಸ್ಯಾದುತ್ಪ್ರೇಕ್ಷಾ.. .. .. )
ವರ್ಣಿಸುವ ಉಪಮೇಯಕ್ಕೆ ಉಪಮಾನದ ಸಾದೃಶ್ಯವಿರ್ಪುದರಿಂದ ಉಪಮಾನಮೆಂದೆಣಿಸುವುದು (ಊಹಿಸುವುದು), ಉತ್ಪ್ರೇಕ್ಷೆಯೆನಿಸುವುದು.  (ಎಂದರೆ ವಸ್ತುಸ್ವರೂಪದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಸಂಭಾವಿಸುವುದು, ಎಂದರೆ ಕಲ್ಪಿಸುವುದು ಮುಖ್ಯವಾದ ಅಂಶ.)
[5] ಚೇದ್ಬಿಂಬ ಪ್ರತಿಬಿಂಬತ್ವಂ ದೃಷ್ಟಾಂತಸ್ತದಲಂಕೃತಿಃ
ಅರ್ಥ:- ಎರಡು ವಾಕ್ಯಂಗಳ್ ಬೇರಾಗಿ ಒಂದರ್ಕೊಂದು ಸಾದೃಶ್ಯದಿಂ ಪ್ರತಿಬಿಂಬದಂತೆ ತೋರೆಯದು ದೃಷ್ಟಾಂತಾಲಂಕಾರಂ. (-ಅಪ್ರತಿಮವೀರಚರಿತ್ರೆ)
[6] ಉಕ್ತಿರರ್ಥಾಂತರನ್ಯಾಸಃ ಸ್ಯಾತ್ ಸಾಮಾನ್ಯ ವಿಶೇಷಯೋಃ
ಅರ್ಥ:- ಸಾಮಾನ್ಯ ವಿಶೇಷಂಗಳಂ ಪೇಳ್ವದು ಅರ್ಥಾಂತರನ್ಯಾಸಂ.  ಅದುವುಂ ಪ್ರಸ್ತುತಮಾದರ್ಥಂ ವಿಶೇಷಮಾಗಿ, ಅಪ್ರಸ್ತುತಮಾದರ್ಥಂ ಸಾಮಾನ್ಯ ಮಾಗೆಯದು (೧) ಸಾಮಾನ್ಯದಿಂ ವಿಶೇಷ ಸಮರ್ಥನ ರೂಪಮಾದ ಅರ್ಥಾಂತರನ್ಯಾಸಂ.  ಸಾಮಾನ್ಯಂ ಪ್ರಸ್ತುತಮಾಗೆ ವಿಶೇಷಂ ಅಪ್ರಸ್ತುತ ಮಾಗೆ (೨) ವಿಶೇಷದಿಂ ಸಾಮಾನ್ಯ ಸಮರ್ಥನ ರೂಪಮಾದ ಅರ್ಥಾಂತರ ನ್ಯಾಸಾಲಂಕಾರಂ.    (-ಅಪ್ರತಿಮವೀರ ಚರಿತೆ)
[7] ದೃಷ್ಟಾಂತವಾಗಿ ಹೇಳಿದ ವಿಚಾರವು ಸಾಮಾನ್ಯವಾದ ಮಾತಾಗಿ ಲೋಕ ಪ್ರಸಿದ್ಧವಾಗಿದ್ದರೆ ಅರ್ಥಾಂತರನ್ಯಾಸಾಲಂಕಾರವಾಗುವುದು.
[8] ಚಿಕ್ಕದೇವರಾಜರ ಶೌರ್ಯವನ್ನು ವರ್ಣಿಸುವ ಒಂದು ಸಂದರ್ಭದ ಪದ್ಯ.
[9] ನಾನಾರ್ಥ ಸಂಶ್ರಯಃ ಶ್ಲೇಷಃ ವರ್ಣಾವರ್ಣ್ಯೋ ಭಯಾತ್ಮಕಂ
ಅರ್ಥ:- ವಾಕ್ಯದೊಳ್ ಪದಂಗಳ್ ನಾನಾರ್ಥಮಾಗಿರೆ ಅದು ಶ್ಲೇಷಾಲಂಕಾರಮೆನಿಸುವುದು.  (ಇದರಲ್ಲಿ ಹಲವಾರು ವಿಧಗಳುಂಟು.  ಆ ಪ್ರಕಾರಗಳೆಲ್ಲ ಪ್ರಕೃತ ಅನವಶ್ಯ.)     (-ಅಪ್ರತಿಮವೀರ ಚರಿತೆ)
[10] ಶಬ್ದಗಳನ್ನು ಒಡೆದು ಬೇರೆಬೇರೆ ಅರ್ಥ ಮಾಡುವುದೂ ಉಂಟು.  ಒಡೆಯದೆ ಬೇರೆಬೇರೆ ಅರ್ಥ ಮಾಡುವುದೂ ಉಂಟು.  ಶಬ್ದವನ್ನು ಒಡೆದು ಬೇರೆಬೇರೆ ಅರ್ಥ ಮಾಡಿದರೆ ಸಭಂಗ ಶ್ಲೇಷೆಯೆಂದೂ ಒಡೆಯದೇ ಅರ್ಥ ಮಾಡಿದರೆ ಅಭಂಗಶ್ಲೇಷೆಯೆಂದೂ ಕರೆಯುವರು.  ಸಭಂಗಶ್ಲೇಷೆ ಪ್ರಕೃತ ಅನವಶ್ಯಕ.

ಅಲಂಕಾರ-ಶಬ್ದಾಲಂಕಾರಗಳು

ಅಲಂಕಾರ-ಶಬ್ದಾಲಂಕಾರಗಳು
ಶಬ್ದ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ ವೆನ್ನುವರೆಂದು ಪೂರ್ವದಲ್ಲಿ ಉದಾಹರಣೆ ಸಮೇತ ವಿವರಿಸಲಾಗಿದೆ. ಶಬ್ದಾಲಂಕಾರಗಳು ಎರಡು ವಿಧ.
() ಅನುಪ್ರಾಸ () ವೃತ್ತ್ಯನುಪ್ರಾಸ
ಈ ಗಾದೆಗಳನ್ನು ನೋಡಿರಿ
() ತುಪ್ಪದ ಮಾತಿಗೆ ಒಪ್ಪಿಕೊಂಡು ತಿಪ್ಪೆಪಾಲಾದ () ತುಂಟನಾದವ ಮಂಟಪದಲ್ಲಿ ಕೂತರೂ ತಂಟೆ ಬಿಡಲಾರ
ಇತ್ಯಾದಿ ಮಾತುಗಳಲ್ಲಿ ಒಂದೇ ಅಕ್ಷರ ಎರಡು ಮೂರು ಸಲ ಬಂದು ವಾಕ್ಯಗಳ ಸೊಬಗನ್ನು ಹೆಚ್ಚಿಸಿದೆ.  ಹಾಗೆಯೇ ಈ ಕೆಳಗಿನ ಒಂದು ಪದ್ಯವನ್ನು ನೋಡಿ.
ಮುರಾರಿ ಶಂಬರಾರಿ ವಾಗ್ವರಾರಿ ನಿರ್ಜರಾರ್ಜಿತೇ ಧರಾಧರೇಶ್ವರಾತ್ಮಜೇಹರ ಪ್ರಿಯೇ ಜಯಾಂಬಿಕೆ ||”
(-ವೃಷಭೇಂದ್ರ ವಿಜಯ)
ಈ ಪದ್ಯದಲ್ಲಿ ರಕಾರವು ಹಲವಾರು ಸಲ ಪುನರುಕ್ತವಾಗಿ ಪದ್ಯದ ಸೌಂದರ‍್ಯವು ಶಬ್ದಗಳಿಂದ ಹೆಚ್ಚಿದೆ.  ಇದಕ್ಕೆ ಸೂತ್ರವನ್ನು ಹೀಗೆ ಹೇಳಬಹುದು.

ವೃತ್ತ್ಯನುಪ್ರಾಸ:- "ಒಂದಾಗಲಿ, ಎರಡಾಗಲಿ ವ್ಯಂಜನಗಳು ಪುನಃ ಪುನಃ ಹೇಳಲ್ಪಟ್ಟಿದ್ದರೆ ಅದು ವೃತ್ತ್ಯನುಪ್ರಾಸವೆನಿಸುವುದು."
ಉದಾಹರಣೆಗೆ:
ಎಳೆಗಿಳಿಗಳ ಬಳಗಂ ಗಳ
ಗಳನಿಳಿ ತಂದೆಳಸಿ ಬಳಸಿ ಸುಳಿದೊಳವುಗುತುಂ
ನಳನಳಿಸಿ ಬೆಳೆದು ಕಳಿಯದ |ಕಳವೆಯಕಣಿಶಂಗಳಂ ಕರಂ ಖಂಡಿಸುಗುಂ ||
                                     
(-ರಾಜಶೇಖರ ವಿಳಾಸ)
ಅರ್ಥ:- ಎಳೆಯ ಗಿಳಿಗಳ ಸಮೂಹವು ಗಳಗಳನೆ ಇಳಿದು ಬಂದು ಬತ್ತದ ಹಾಲುಗಾಳನ್ನು ಬಯಸಿ ಸುತ್ತುತ್ತಾ, ಸುಳಿಯುತ್ತಾ ನಳನಳಿಸಿ ಬೆಳೆದುನಿಂತ ಬತ್ತದ ಎಳೆಗಾಳುಗಳ ಗೊನೆಗಳನ್ನು ಸೀಳುತ್ತಿದ್ದವು.
ಇಲ್ಲಿ ಳ ಕಾರವು ಅನೇಕ ಸಲ ಪುನರುಕ್ತಿಗೊಂಡು ಪದ್ಯದ ಸೌಂದರ‍್ಯವು ಹೆಚ್ಚಿದೆ.  ಆದ್ದರಿಂದ ಇದು ವೃತ್ತ್ಯನುಪ್ರಾಸ ಅಲಂಕಾರವೆನಿಸಿದೆ.

() ಛೇಕಾನುಪ್ರಾಸ
(i)ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ (-ಬಸವಣ್ಣ)
(i) ಹಾಡಿ ಹಾಡಿ ರಾಗ ಬಂತು
ಉಗುಳಿ ಉಗುಳಿ ರೋಗ ಬಂತು (-ಗಾದೆ)
ಮೇಲಿನ ಒಂದು ವಚನ ಮತ್ತು ಒಂದು ಗಾದೆ ಇವುಗಳಲ್ಲಿ ಬಂದಿರುವ ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದಗಳ ಆವೃತ್ತಿಯು ಆ ಮಾತುಗಳ ಸೌಂದರ‍್ಯವನ್ನು ಹೆಚ್ಚಿಸಿದೆ.  ಮಾಡಿ ಮಾಡಿ ಎಂಬಲ್ಲಿ ಮಕಾರ ಡಕಾರಗಳು ಸೇರಿದ ಶಬ್ದ ಎರಡು ಸಲ ಬಂದಿದೆ.  ಅನಂತರ ನೀಡಿ ನೀಡಿ ಎಂಬ ಶಬ್ದ ಎರಡು ಸಲ ಬಂದಿದೆ.  ಅದರಂತೆ ಗಾದೆಯಲ್ಲೂ ಎರಡೆರಡು ವ್ಯಂಜನಗಳನ್ನೊಳಗೊಂಡ ಶಬ್ದ ಜೊತೆ ಜೊತೆಯಾಗಿ ಬಂದಿವೆ.  ಹೀಗೆ ಬಂದರೆ ಅದು ‘ಛೇಕಾನುಪ್ರಾಸ’ವೆನಿಸುವುದು.
ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಛೇಕಾನುಪ್ರಾಸ:- "ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದವು ಪುನಃ ಪುನಃ (ಆವೃತ್ತಿಯಾಗಿ) ಪದ್ಯದಲ್ಲಿ ಬಂದಿದ್ದರೆ ಅದು ಛೇಕಾನುಪ್ರಾಸವೆನಿಸುವುದು."
ಉದಾಹರಣೆಗೆ:-
ಸುತ್ತುಲುಂ ಪರಿವ ಪ್ರಚಾರದಿಂ ಪೂರದಿಂ|ದೊತ್ತಿರಿಸಿಬರ್ಪ ಬಲ್ದೆರೆಗಳಿಂ ನೊರೆಗಳಿಂ|ದೆತ್ತೆತ್ತಲೊಗೆವ ಸವ್ವಳೆಗಳಿಂ ಸುಳಿಗಳಿಂ ನಾನಾಪ್ರಕಾರದಿಂದೆ||ಒತ್ತಿಭೋರ್ಗರೆವ ರವದುರ್ಬಿನಿಂ ಪರ್ಬಿನಿಂ|ಹತ್ತೊಂದುಗೂಡಿ ವಿಸ್ತೀರ್ಣದಿಂ ಪೂರ್ಣದಿಂ|ತುತ್ತಿದುದು ಸಕಲಲೋಕಂಗಳಂ ತಿಂಗಳಂ ಪೋತ್ತವಂಬೆರಗಾಗಲು||
                                                              
(-ಚನ್ನಬಸವ ಪುರಾಣ)
ಇದು ಜಲಪ್ರಳಯವಾದ ಒಂದು ಸಂದರ್ಭದ ವರ್ಣನೆ.  ಪಾರ್ವತಿಯು ಈಶ್ವರನ ಕಣ್ಣನ್ನು ಹಿಂದಿನಿಂದ ಬಂದು ಮುಚ್ಚಿದಳು.  ಈಶ್ವರನ ಆನಂದಾಶ್ರುಗಳು ಪಾರ್ವತಿಯ ಬೊಗಸೆಯಲ್ಲಿ ತುಂಬಿದವು.  ಆ ಆನಂದಾಶ್ರುಗಳು ಪಾರ್ವತಿಯ ಹತ್ತು ಬೆರಳುಗಳಿಂದ ಹತ್ತು ನದಿಗಳಾಗಿ ಹರಿದು ಜಗತ್ತನ್ನೆಲ್ಲ ಆ ನೀರು ಆವರಿಸಿ ಜಲ ಪ್ರಳಯವಾಯಿತೆಂದು ಹೇಳುವ ಒಂದು ಭವ್ಯವರ್ಣನೆಯಿದು.  ಇಲ್ಲಿ ಎರಡೆರಡು ವ್ಯಂಜನಗಳ ಆವೃತ್ತಿಯು ಹಲವಾರು ಕಡೆಗಳಲ್ಲಿ ಬಂದು ಪದ್ಯದ ಸೌಂದರ‍್ಯವನ್ನು ಹೆಚ್ಚಿಸಿವೆ.  ಆದ್ದರಿಂದ ಇದು ಛೇಕಾನುಪ್ರಾಸ.
() ಯಮಕಾಲಂಕಾರ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಪದಭಾಗವೋ ಒಂದು ಪದ್ಯದ ಆದಿ, ಮಧ್ಯ, ಅಂತ್ಯ ಸ್ಥಾನಗಳಲ್ಲಿ ಎಲ್ಲಿಯಾದರೂ ನಿಯತವಾಗಿ ಬಂದಿದ್ದರೆ ಅದು ಯಮಕಾಲಂಕಾರವೆನಿಸುವುದು.
ಉದಾ:-
ಬರಹೇಳ್ ನಿಕುಂಭನಂ ಶುಂಭನಂ ಜಂಭನಂ|ಬರಹೇಳ್ ಸಶಬಲನಂ, ಪ್ರಬಲನಂ, ಸುಬಲನಂ|ಬರಹೇಳ್ ಪ್ರವೀರನಂ, ಘೋರನಂ, ಶೂರನಂ, ಬರಹೇಳ್ ಮಹಾನಾಭನಂ||ಬರಹೇಳ್ ನಿಶುಂಭನಂ ಕುಂಭನಂ ಲಂಬನಂ|ಬರಹೇಳ್ ಸುವಿಪುಳನಂ ಚಪಳನಂ ಕಪಿಳನಂ|ಬರಹೇಳ್ ಮುಹುಂಡನಂ ಮುಂಡನಂ ಹುಂಡಮುಖ್ಯರನೆನುತ್ತುರಿದೆದ್ದನು||
                                                       
(-ಚೆನ್ನಬಸವಪುರಾಣ)
ಅಂಧಕಾಸುರನು ಶಿವನ ಮೇಲೆ ಯದ್ಧಕ್ಕೆ ಹೊರಟಾಗಿನ ಸಂದರ್ಭದ ಒಂದು ಪದ್ಯವಿದು.  ಇಲ್ಲಿ ಆರೂ ಸಾಲುಗಳ ಆದಿಯಲ್ಲಿ ಬರಹೇಳ್ ಎಂಬ ನಾಲ್ಕು ವ್ಯಂಜನಗಳ ಶಬ್ದವೊಂದು ಕ್ರಮವಾಗಿ ಬರುವುದು.  ಆದ್ದರಿಂದ ಇದು ಯಮಕಾಲಂಕಾರ ವಾಯಿತು.
(ಯಮಕಾಲಂಕಾರಗಳಲ್ಲಿ ಹೀಗೆ ಒಂದೇ ಶಬ್ದ ಒಂದು ಗೊತ್ತಾದ ಕಡೆ ಬಂದಿದ್ದರೂ ಒಂದೊಂದು ಕಡೆಯಲ್ಲಿ ಒಂದೊಂದರ್ಥವಾಗುವಂತಹ ರೀತಿಯಲ್ಲೂ ಇರುವುದುಂಟು.  ಪ್ರಕೃತ ಅಂಥ ಪದ್ಯದ ವಿವರಣೆ ಅನವಶ್ಯಕ.)

[1] ಏಕದ್ವಿಪ್ರಭೃತೀನಾಂತು ವ್ಯಂಜನಾನಾಂ ಯದಾ ಭವೇತ್ ಪುನರುಕ್ತಿರಸೌ ನಾಮ ವೃತ್ಯನುಪ್ರಾಸ ಇಷ್ಯತೇ.
ಅರ್ಥ:- ಒಂದಕ್ಕರಮಾದೊಡಂ ಎರಡಕ್ಕರಮಾದೊಡಂ ಪಲವುಂ ವೇಳೆಯೊಳ್ ಬಳಸಿ ಬರುತ್ತಿರೆಯದು ವೃತ್ತ್ಯನುಪ್ರಾಸವೆನಿಪ್ಪುದು.        (-ಅಪ್ರತಿಮವೀರ ಚರಿತೆ)
[2] ಭವೇದವ್ಯವಧಾನೇನ ದ್ವಯೋರ್ವ್ಯಂಜನ ಯುಗ್ಮಯೋಃ |
ಆವೃತ್ತಿರ‍್ಯತ್ರ ಸ ಬುಧೈಃ ಛೇಕಾನುಪ್ರಾಸ ಇಷ್ಯತೇ ||
ಅರ್ಥ:- ಒಂದು ಪದ್ಯದೊಳ್ ಎರಡೆರಡುಂ ಅಕ್ಕರಂ ಜತೆಜತೆಯಾಗಿ ಪಲವುಂ ಬಳಿಯೊಳ್ ಬರೆ, ಅದು ಛೇಕಾನುಪ್ರಾಸವೆನಿಪುದು.      (-ಅಪ್ರತಿಮವೀರ ಚರಿತೆ)
[3] ಯಮಕಂ ಪೌನರುಕ್ತೇತು ಸ್ವರವ್ಯಂಜನ ಯುಗ್ಮಯೋಃ
ಅರ್ಥ:- ಸ್ವರಭೇದಮಿಲ್ಲದೆ, ಪಲವುಮಕ್ಕರಂಗಳ್, ಎರಡುಂ ಪಾದದೊಳಾದೊಡಂ, ಮಿತಿಯಾದ ತಾಣದೊಳ್ ಬಳಸಿಬರೆ ಅದು ಯಮಕಮೆನಿಪುದು.   (-ಅಪ್ರತಿಮವೀರ ಚರಿತೆ)
(ಈ ಅಲಂಕಾರವನ್ನು ಹೆಚ್ಚಿನ ತಿಳಿವಳಿಕೆಗಾಗಿ ಮಾತ್ರ ಕೊಟ್ಟಿದೆ.  ಹೈಸ್ಕೂಲುಗಳಲ್ಲಿ ಓದುವ ಮಕ್ಕಳಿಗೆ ಛೇಕಾನುಪ್ರಾಸ ತಿಳಿದರೆ ಸಾಕು.)

ಅಲಂಕಾರ-ಪೀಠಿಕೆ

          ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಅಥವಾ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಕಾರಣದಿಂದ ಬಟ್ಟೆ ಬರೆ, ವಸ್ತು, ಒಡವೆ-ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ.  ಇವನ ಈ ಅಲಂಕಾರದಿಂದ ಜನರೂ ಆಕರ್ಷಿತರಾಗುತ್ತಾರೆ.  ಇದರ ಹಾಗೆಯೆ ಮಾತನಾಡುವಾಗಲೂ, ಕೇಳುವವರಿಗೆ ಹರ್ಷವಾಗುವಂತೆ, ಕಿವಿಗೆ ಇಂಪಾಗುವಂತೆ ಚಮತ್ಕಾರವಾದ ರೀತಿಯಲ್ಲಿ ಮಾತನಾಡುವುದೂ ಉಂಟು.  ಉದಾಹರಣೆಗೆ ನಿಮ್ಮ ಹೆಸರೇನು?’ ಎಂದು ಕೇಳುವುದಕ್ಕೆ ಬದಲಾಗಿ ’ತಮ್ಮ ಹೆಸರು ಯಾವ ಅಕ್ಷರಗಳಿಂದ ಅಲಂಕೃತವಾಗಿದೆ?’ ಎಂದು ಕೇಳಿದಾಗ ಎರಡೂ ಮಾತಿನ ಅರ್ಥ ಒಂದೇ ಆದರೂ ಎರಡನೆಯ ಮಾತಿನಲ್ಲಿ ಚಮತ್ಕಾರದ ವಾಣಿ ಕಾಣುವುದು.  ಇದರ ಹಾಗೆ ’ಪೂರ್ವದಿಕ್ಕಿನಲ್ಲಿ ಸೂರ್ಯ ಹುಟ್ಟಿದನು’ ಎನ್ನುವ ಮಾತನ್ನು – ಪೂರ್ವದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತ್ತೈದೆಯ ಹಣೆಯ ಕುಂಕುಮದಂತೆ ಕಾಣುತ್ತಿದ್ದನು.  ಹೀಗೆ ಹೇಳಿದಾಗ ಸೌಂದರ‍್ಯದ ಚಿತ್ರ, ಅರ್ಥ ಚಮತ್ಕಾರ, ಕೇಳುವವರ ಮನಸ್ಸಿನ ಮೇಲೆ ಪರಿಣಾಮಕಾರಿಯಾಗುವುದು. ಇವೆಲ್ಲ ಅಲಂಕಾರದ ಮಾತುಗಳು.
ಇದರ ಹಾಗೆಯೆ ಶಬ್ದಗಳ ಜೋಡಣೆಯನ್ನೂ ಚಮತ್ಕಾರವಾಗಿ ಮಾಡಿ ಕೇಳುವುದಕ್ಕೆ ಹಿತವಾಗಿರುವಂತೆ ಮಾತನಾಡುವುದೂ ಉಂಟು.  ಉದಾಹರಣೆಗೆ-

() ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
() ಕತ್ತೆಗೆ ಗೊತ್ತೆ? ಹೊತ್ತ ಕತ್ತುರಿಯ ಪರಿಮಳ?
() ಎಳೆಗಿಳಿಗಳ ಬಳಗಗಳು ನಳನಳಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದವು.
          
          ಮೇಲಿನ ವಾಕ್ಯಗಳಲ್ಲಿ ಒಂದೇ ವಾಕ್ಯದಲ್ಲಿ-ಬಲ್ಲ, ಬೆಲ್ಲ, ಬಲ್ಲ ಇತ್ಯಾದಿ ಶಬ್ದಗಳೂ, ಕತ್ತೆ, ಹೊತ್ತ, ಗೊತ್ತೆ, ಕತ್ತುರಿ ಇತ್ಯಾದಿ ಶಬ್ದಗಳೂ, ಎಳೆ, ಗಿಳಿ, ಗಳೆ, ಬಳಗ, ಗಳು, ನಳ, ನಳ ಕಳವೆ, ಎಳೆ, ಕಾಳು-ಇತ್ಯಾದಿ ಒಂದೇ ಶಬ್ದ ಅಥವಾ ಅಕ್ಷರಗಳು ಪದೇ ಪದೇ ಬಂದು ಶಬ್ದಗಳ ರಚನೆಯಲ್ಲಿ ಬುದ್ಧಿವಂತಿಕೆ ಕಂಡಂತಾಗಿ ಕೇಳುವವರಿಗೆ ಒಂದು ಬಗೆಯ ಹಿತವನ್ನುಂಟು ಮಾಡುವುವು.  ಇವೆಲ್ಲ ಶಬ್ದಗಳ ಅಲಂಕಾರಗಳು.
ಹೀಗೆ ಅರ್ಥದ ಚಮತ್ಕಾರದಿಂದಲೂ, ಶಬ್ದಗಳ ಚಮತ್ಕಾರದಿಂದಲೂ ಮಾತಿನ ಸೌಂದರ‍್ಯವನ್ನು ಹೆಚ್ಚು ಮಾಡಿ ಮಾತನಾಡುವುದೂ ಒಂದು ಕಲೆ; ಕವಿಗಳು ಕಾವ್ಯಗಳಲ್ಲಿ ಬರೆದ ಈ ರೀತಿಯ ಚಮತ್ಕಾರದ ನುಡಿಗಳು ಆ ಕಾವ್ಯಕ್ಕೆ ಒಂದು ಬಗೆಯ ಅಲಂಕಾರ.  ಅಂದರೆ, ಒಡವೆಗಳು ವಸ್ತ್ರಗಳು ಶರೀರಕ್ಕೆ ಹೇಗೆ ಭೂಷಣವೋ ಹಾಗೆಯೆ ಇಂತಹ ಮಾತುಗಳು ಕಾವ್ಯಕ್ಕೆ ಭೂಷಣ ಅಥವಾ ಅಲಂಕಾರಗಳು.
ಕಾವ್ಯಗಳಲ್ಲಿನ ಕವಿಗಳ ಇಂತಹ ಅಲಂಕಾರ ಮಾತುಗಳು ಅರ್ಥಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ, ಅವುಗಳಿಗೆ ‘ಅರ್ಥಾಲಂಕಾರ’ಗಳೆನ್ನುವರು.  ಶಬ್ದಗಳ ಚಮತ್ಕಾರ ದಿಂದ ಕಾವ್ಯದ ಸೊಬಗು ಹೆಚ್ಚುವಂತೆ ರಚಿಸಿದ್ದರೆ, ಅಂಥವುಗಳನ್ನು ‘ಶಬ್ದಾಲಂಕಾರ’ಗಳೆಂದು ಕರೆಯುವರು.
(i) ಅರ್ಥಾಲಂಕಾರಕ್ಕೆ ಕೆಳಗಿನ ಒಂದು ಉದಾಹರಣೆಯನ್ನು ನೋಡಿರಿ-
“ಬರು ಶಠಗನ ಭಕ್ತಿ ದಿಟವೆಂದು ನಂಬಬೇಡ; ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ ರಾಮನಾಥ” (-ದೇವರದಾಸಿಮಯ್ಯ)
ಇಲ್ಲಿ ವಚನಕಾರನ ಮಾತುಗಳಲ್ಲಿ ಡಾಂಭಿಕನಾದ ಮನುಷ್ಯನ ಭಕ್ತಿಯನ್ನು ನಂಬಲಾಗದು ಎಂದು ಹೇಳುವ ಮಾತಿಗೆ ಮಠದೊಳಗೆ ವಾಸಮಾಡುವ ಬೆಕ್ಕಿನ ಹೋಲಿಕೆಯಿದೆ.  ಮಠದಂಥ ಪವಿತ್ರ ಸ್ಥಳದಲ್ಲಿ ಬೆಕ್ಕು ಎಷ್ಟೇ ದಿನ ವಾಸವಾಗಿದ್ದರೂ, ಅದಕ್ಕೆ ಮಠದ ಸಭ್ಯತೆ ಗೊತ್ತಿದ್ದರೂ, ಮಠದಲ್ಲಿ ಅದಕ್ಕೆ ಉತ್ತಮ ತಿಂಡಿತಿನಸುಗಳು ಸಿಗುತ್ತಿದ್ದರೂ, ಇಲಿಯನ್ನು ಕಂಡಕೂಡಲೆ, ಅದರ ಮೂಲಹಿಂಸೆಯ ಗುಣವು ಪ್ರಕಟಗೊಂಡು ಇಲಿಯ ಮೇಲೆ ನೆಗೆದು ಅದನ್ನು ತಿನ್ನುವ ಕ್ರಿಯೆಯನ್ನು ಮಾಡಿಬಿಡುವುದು.  ಇದರ ಹಾಗೆಯೇ ಡಂಭಾಚಾರ ಭಕ್ತಿಯನ್ನು ನಟಿಸುವ ಮನುಷ್ಯ.  ಅವನು ಎಷ್ಟೇ ದಿನ ಡಂಭದಿಂದ ಕೂಡಿದ ಭಕ್ತಿಯನ್ನು ಆಚರಿಸಿದರೂ ಅದು ನಿಜವಾದ ಭಕ್ತಿ ಆಗುವುದಿಲ್ಲ.  ನಿಜವಾದ ಭಕ್ತಿಜೀವನದಿಂದ ಉಂಟಾಗುವ ಸಂಸ್ಕಾರ ಉಂಟಾಗುವುದಿಲ್ಲ.-ಇತ್ಯಾದಿ ಅರ್ಥ ಚಮತ್ಕಾರ ಆ ಎರಡು ಸಣ್ಣ ವಾಕ್ಯಗಳಲ್ಲಿ ಅಡಕವಾಗಿದೆ.  ಹೀಗೆ ಅರ್ಥ ಚಮತ್ಕಾರವುಂಟಾಗುವಂತೆ ಹೇಳುವ ಮಾತುಗಳೇ ಅರ್ಥಾಲಂಕಾರಗಳು.

(ii) ಶಬ್ದಾಲಂಕಾರಕ್ಕೆ ಕೆಳಗಿನ ಇನ್ನೊಂದು ಪದ್ಯವನ್ನು ಗಮನಿಸಿರಿ-
ಈ ವನದ ನಡುನಡುವೆ ತೊಳತೊಳಗುತಿರುತಿಹ
ಸರೋವರ ವರದೊಳೆ ದಳೆದಳೆದು ಬೆಳೆಬೆಳೆದು
ರಾಜೀವದಲರಲರ, ತುಳಿತುಳಿದು ಇಡಿದಿಡಿದ
ಬಂಡನೊಡನೆ ಸವಿದು ಸವಿದು-
ಅವಗಮಗಲದೆ ಯುಗಯುಗಮಾಗಿ ನೆರೆನೆರೆದು,
ಕಾವಸೊಗಸೊಗಸಿನಲಿ ನಲಿದು ಮೊರೆಮೊರೆವ,
ಬೃಂಗಾವಳಿಯ ಗಾವಳಿಯ, ಕಳಕಳಂಗಳೆ
ನೋಡುನೋಡು ರವಿತನಯ ತನಯ
-ಜೈಮಿನಿ ಭಾರತ
ಅರಣ್ಯಮಧ್ಯದ ಸರೋವರವೊಂದರಲ್ಲಿ ಅರಳಿರುವ ಕಮಲದಲ್ಲಿ ದುಂಬಿಗಳು ಮಕರಂದ ಪಾನಮಾಡಿ, ಜೊತೆಜೊತೆಯಾಗಿ ಝೇಂಕಾರಮಾಡುತ್ತ ನಲಿಯುತ್ತಿರುವ ದೃಶ್ಯದ ಈ ವರ್ಣನೆಯಲ್ಲಿ ಒಂದೇ ಅನುಪೂರ್ವಿಯ ಅನೇಕ ಶಬ್ದಗಳು ಜೊತೆಜೊತೆಯಾಗಿ ಬಂದು, ನೃತ್ಯ ಮಾಡುವಾಗ ಕಾಲಲ್ಲಿ ಕಟ್ಟಿಕೊಂಡು ಧ್ವನಿಮಾಡುತ್ತಿರುವ ಗೆಜ್ಜೆಗಳ ಸದ್ದಿನಂತೆ ಪದ್ಯದಲ್ಲಿ ಒಂದು ಬಗೆಯ ಶಬ್ದ ಸೌಂದರ‍್ಯವನ್ನುಂಟುಮಾಡುತ್ತಿವೆ.  ಈ ರೀತಿ ಶಬ್ದಗಳಿಂದ ಪದ್ಯದ ಸೌಂದರ‍್ಯ ಹೆಚ್ಚಿದಾಗ ಅದಕ್ಕೆ ನಾವು ‘ಶಬ್ದಾಲಂಕಾರ’ ಎಂದು ಕರೆಯುತ್ತೇವೆ.  ಹೀಗೆ ಕಾವ್ಯಗಳಲ್ಲಿ ಅರ್ಥಾಲಂಕಾರ ಶಬ್ದಾಲಂಕಾರಗಳು ಎಷ್ಟು ಬಗೆಯಾಗಿ ಬರುತ್ತವೆ? ಅವುಗಳ ಲಕ್ಷಣವೇನು? ಎಂತು? ಎಂಬ ಬಗೆಗೆ ಅನೇಕಾನೇಕ ಗ್ರಂಥಗಳು ಹುಟ್ಟಿವೆ.  ಇವುಗಳ ಬಗೆಗೆ ಗ್ರಂಥ ಬರೆದವರನ್ನು ‘ಲಾಕ್ಷಣಿಕರು’ ಎನ್ನುತ್ತಾರೆ.  ಸಂಸ್ಕೃತದಲ್ಲಿ, ಕನ್ನಡದಲ್ಲಿ ಅನೇಕ ಲಾಕ್ಷಣಿಕರು ಅಲಂಕಾರ ಗ್ರಂಥ ಬರೆದಿದ್ದಾರೆ.  ಈ ಕೆಳಗೆ ಕನ್ನಡದಲ್ಲಿ ಮಾತ್ರ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರ ಬಗೆಗೆ ಸ್ಥೂಲವಾದ ಪರಿಚಯಕೊಟ್ಟಿದೆ.  ಅವರ ಪರಿಚಯ ಮಾಡಿಕೊಳ್ಳಿರಿ.

() ನೃಪತುಂಗ (ಕ್ರಿ..೮೧೪)
ರಾಷ್ಟ್ರಕೂಟ ಚಕ್ರವರ್ತಿಯೆನಿಸಿದ್ದ ನೃಪತುಂಗನು, ಕವಿರಾಜಮಾರ್ಗ ವೆಂಬ ಲಕ್ಷಣಗ್ರಂಥ ಬರೆದಿದ್ದಾನೆ.  ಇದರಲ್ಲಿ ಅಲಂಕಾರಗಳ ಬಗೆಗೆ ಅನೇಕ ವಿಷಯಗಳು ಹೇಳಲ್ಪಟ್ಟಿವೆ.

() ನಾಗವರ್ಮ II (ಕ್ರಿ..೧೧೪೫)
೨ನೆಯ ನಾಗವರ್ಮನೆಂಬುವನು ಬರೆದ ‘ಕಾವ್ಯಾವಲೋಕನ’ ಎಂಬ ಗ್ರಂಥವು ಉತ್ತಮ ಮಟ್ಟದ ಲಕ್ಷಣಗ್ರಂಥವೆನಿಸಿದೆ.  ಇದರಲ್ಲಿ ಅಲಂಕಾರಗಳ ವಿಷಯದಲ್ಲಿ ಅನೇಕ ವಿವರಣೆಗಳು ಬಂದಿವೆ.

() ತಿರುಮಲಾರ್ಯ (ಕ್ರಿ..೧೬೭೨)
ನಾಗವರ್ಮನ ಅನಂತರ ಲಕ್ಷಣಗ್ರಂಥ ಬರೆದವರಲ್ಲಿ ತಿರುಮಲಾರ‍್ಯನೇ ಮುಖ್ಯನಾದವನು.  ಮೈಸೂರಿನ ಚಿಕ್ಕದೇವರಾಜರ ಆಸ್ಥಾನ ಪಂಡಿತನಾದ ಈತನು ‘ಅಪ್ರತಿಮವೀರ ಚರಿತ್ರೆ’ ಎಂಬ ಅಲಂಕಾರ ಗ್ರಂಥ ಬರೆದಿದ್ದಾನೆ.  ಚಿಕ್ಕದೇವರಾಜ ಒಡೆಯರ ಚರಿತ್ರೆಗೆ ಸಂಬಂಧಿಸಿದ ಅನೇಕ ಪದ್ಯಗಳನ್ನು ತಾನೇ ರಚಿಸಿ ಅಲಂಕಾರಕ್ಕೆ ಉದಾಹರಣೆಗಳನ್ನು ಕೊಟ್ಟಿದ್ದಾನೆ.  ಇದರಲ್ಲಿ ಒಟ್ಟು ೧೨೦ ಅಲಂಕಾರ ಹೇಳಲಾಗಿದೆ.

() ಜಾಯಪ್ಪದೇಸಾಯಿ (ಕ್ರಿ.. ೧೭೩೫)
ತೊರಗಲ್ ಸೀಮೆಗೆ ದೊರೆಯೆನಿಸಿದ್ದ ಜಾಯಪ್ಪದೇಸಾಯಿಯೆಂಬ ದೊರೆಯು ಕನ್ನಡ ‘ಕುವಲಯಾನಂದ’ವೆಂಬ ಹೆಸರಿನ ಲಕ್ಷಣ ಗ್ರಂಥ ಬರೆದಿದ್ದಾನೆ.  ಈತನು ತನ್ನ ಈ ಲಕ್ಷಣ ಗ್ರಂಥಕ್ಕೆ ಉದಾಹರಣೆ (ಲಕ್ಷ್ಯ) ಗಳನ್ನು ಕನ್ನಡ ಷಟ್ಪದಿಗ್ರಂಥಗಳಿಂದ ಆಯ್ದುಕೊಂಡಿದ್ದಾನೆ.  ೧೦೦ ಅಲಂಕಾರಗಳನ್ನು ಮಾತ್ರ ಹೇಳಿರುವ ಈ ಗ್ರಂಥವನ್ನು, ಸಂಸ್ಕೃತದಲ್ಲಿರುವ ಅಪ್ಪಯ್ಯದೀಕ್ಷಿತರ ‘ಕುವಲಯಾನಂದ’ವೆಂಬ ಅಲಂಕಾರಗ್ರಂಥವನ್ನು ಅನುಸರಿಸಿ ಬರೆದಂತೆ ಹೇಳಿಕೊಂಡಿದ್ದಾನೆ.  ಕನ್ನಡದಲ್ಲಿರುವ ಅಲಂಕಾರ ಗ್ರಂಥಗಳಲ್ಲಿ ಇದು ಉತ್ತಮವಾಗಿದೆ.
ಇದುವರೆಗೆ ಅಲಂಕಾರವೆಂದರೇನು? ಕವಿಗಳ ಕಾವ್ಯಗಳಲ್ಲಿ ಯಾವ ದೃಷ್ಟಿಯಿಂದ ಅಲಂಕಾರಗಳನ್ನು ಸೇರಿಸುತ್ತಾರೆ? ಅವುಗಳಿಂದ ಕಾವ್ಯಕ್ಕೆ ಎಷ್ಟರಮಟ್ಟಿಗೆ ಪ್ರಯೋಜನ? ಇಂಥ ಅಲಂಕಾರ ಗ್ರಂಥಗಳೂ, ಗ್ರಂಥ ಕರ್ತರೂ ಕನ್ನಡದಲ್ಲಿ ಯಾರು ಯಾರು? ಇತ್ಯಾದಿ ಅಂಶಗಳ ಬಗೆಗೆ ಸ್ಥೂಲವಾಗಿ ಪರಿಚಯ ಮಾಡಿಕೊಂಡಿದ್ದೀರಿ.  ಪ್ರೌಢಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ನೂರಾರು ಅಲಂಕಾರಗಳಲ್ಲಿ ಮುಖ್ಯವಾದ ಎಂಟು ಅಲಂಕಾರಗಳ ಬಗೆಗೆ ತಿಳಿದರೆ ಸಾಕು.  ಮುಂದಿನ ತರಗತಿಗಳಲ್ಲಿ ಇವುಗಳ ಬಗೆಗೆ ಹೆಚ್ಚಿಗೆ ತಿಳಿಯುವಿರಿ.