Feb 15, 2011

ಪ್ರಶ್ನೋತ್ತರ ಮಾಲಿಕೆ - 8

1.'ಭಾರತೀಯ ಕಾವ್ಯ ಮೀಮಾಂಸೆಇದನ್ನು ಬರೆದವರು?
ಉತ್ತರತೀ.ನಂ.ಶ್ರೀ
2. 'ಬೆಟ್ಟದಾವರೆಎಂಬಲ್ಲಿ ಇರುವ ಸಂಧಿ?
ಉತ್ತರ:  ಆದೇಶ ಸಂಧಿ

3. ರಾಮನಗರದ ಸಮೀಪ ಇರುವ 'ಜಾನಪದ ಲೋಕ'ವನ್ನು ಸ್ಥಾಪಿಸಿದವರು?
ಉತ್ತರಎಚ್.ಎಲ್.ನಾಗೇಗೌಡ
4. ಶಾಂತಿನಾಥ ದೇಸಾಯಿ ಅವರ ಕೃತಿ?
ಉತ್ತರಓಂ ಣಮೋ 
5.  'ಹಸಿರು ಹೊನ್ನು' ಎಂಬ ಸಸ್ಯ ವಿಜ್ಞಾನಕ್ಕೆ ಸಂಬಂದಿಸಿದ ಈ ಕೃತಿಯ ಕತೃ?
ಉತ್ತರಬಿ.ಜಿ.ಎಲ್.ಸ್ವಾಮಿ
6. 'ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್' ಎಂಬುದಾಗಿ ಕನ್ನಡನಾಡಿನ ಸೀಮೆಯನ್ನು ಸೂಚಿಸಿದ ಕೃತಿ?
ಉತ್ತರಕವಿರಾಜ ಮಾರ್ಗ
7.  'ರೂಪಕ ಚಕ್ರವರ್ತಿ' ಎಂಬ ಬಿರುದಿಗೆ ಪಾತ್ರನಾದ ಕನ್ನಡದ ಕವಿ?
ಉತ್ತರಕುಮಾರ ವ್ಯಾಸ

ಪ್ರಶ್ನೋತ್ತರ ಮಾಲಿಕೆ - 7

1. 'ಅಭಿನವ ಕಾಳಿದಾಸಎಂಬ ಬಿರುದಿಗೆ ಪಾತ್ರರಾಗಿರುವವರು?
ಉತ್ತರಬಸವಪ್ಪ ಶಾಸ್ತ್ರಿ
2.ಮೊದಲ ವಿಶ್ವ ಕನ್ನಡ ಸಮ್ಮೇಳನ ಜರುಗಿದ ಸ್ಥಳ?
ಉತ್ತರಬೆಂಗಳೂರು

3. 'ಸಿರಿಸಂಪಿಗೆನಾಟಕವನ್ನು ಬರೆದವರು?
ಉತ್ತರ: ಚಂದ್ರ ಶೇಖರ ಕಂಬಾರ
4. 'ಸಂಜೆಗಣ್ಣಿನ ಹಿನ್ನೋಟಎಂಬುದು ಯಾರ ಕೃತಿ?
ಉತ್ತರ.ಎನ್ಮೂರ್ತಿರಾವ್
5. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಲೇಖಕಿ?
ಉತ್ತರಗೀತಾ ನಾಗಭೂಷಣ್
6.  'ತಟ್ಟು ಚಪ್ಪಾಳೆ ಪುಟ್ಟ ಮಗುಇದರ ಸಂಪಾದಕರು?
ಉತ್ತರಬೋಳುವಾರು ಮಹಮದ್ ಕುಂಞ
7. 'ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿ:' ಎಂಬುದು  ಈತನ ಸೂತ್ರ?
ಉತ್ತರಭರತ
8. ಕಾವ್ಯ ಮೀಮಾಂಸೆಯನ್ನು ವ್ಯವಸ್ಥಿತವಾಗಿ ವಿವೇಚಿಸಿದ ಮೊತ್ತಮೊದಲ ಕೃತಿ?
ಉತ್ತರಕಾವ್ಯಾಲಂಕಾರ

Feb 12, 2011

ನೀ ಹೀಂಗ ನೋಡಬ್ಯಾಡ

ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ಪಲ್ಲವಿ

ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕನಕಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ,

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

-ದ.ರಾ. ಬೇಂದ್ರೆ (ಅಂಬಿಕಾತನಯದತ್ತ)-ನಾದಲೀಲೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ - ಭಾವಗೀತೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ||೨||
ದಾಟಿ ಬಂತು ಬೇಲಿ ಸಾಲ
ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ||೨||
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ
ಎಲ್ಲಿ ಜಾರಿತೋ ಎಲ್ಲೆ ಮೀರಿತೋ ನಿಲ್ಲದಾಯಿತೋ....ಓ..

ರಚನೆ - ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ

ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು,
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಮ್ಬ ಹೆಮ್ಮೆಯ,
ಋ‍ಣವು ಮಾತ್ರವೆ ನನ್ನದು
ನೀನು ಹೊಳೆದರೆ ನಾನು ಹೊಳೆವೆನು,
ನೀನು ಬೆಳೆದರೆ ನಾನು ಬೆಳೆವೆನು
ನೀನು ಹೊಳೆದರೆ ನಾನು ಹೊಳೆವೆನು,
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು,
ನನ್ನ ಮರಣದ ಮರಣವು
ನನ್ನ ಮರಣದ ಮರಣವುತನುವು ನಿನ್ನದು

ನನ್ನ ಮನದಲಿ ನೀನು ಯುಕ್ತಿ,
ನನ್ನ ಹ್ರಿದಯದಿ ನೀನೆ ಭಕ್ತಿ
ನನ್ನ ಮನದಲಿ ನೀನು ಯುಕ್ತಿ,
ನನ್ನ ಹ್ರಿದಯದಿ ನೀನೆ ಭಕ್ತಿ
ನೀನೆ ಮಾಯ ಮೋಹ ಶಕ್ತಿಯು,
ನನ್ನ ಜೀವನ ಮುಕ್ತಿಯು
ನನ್ನ ಜೀವನ ಮುಕ್ತಿಯುತನುವು ನಿನ್ನದು

ರಚನೆ : ಕುವೆಂಪು

ಎದೆ ತುಂಬಿ ಹಾಡಿದೆನು

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನೆಗೆ ಅದುವೆ ಬಹುಮಾನ್
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಅಂದು ನಾನು
ಎದೆ ತುಂಬಿ, ಮನ ತುಂಬಿ, ತನು ತುಂಬಿ
ಹಾಡಿದೆನು ಅಂದು ನಾನು..

-ಜಿ.ಎಸ್.ಶಿವರುದ್ರಪ್ಪ